Haveri News: ಜಿಲ್ಲಾಸ್ಪತ್ರೆ ಚೀಫ್ ಇಂಜಿನಿಯರ್ ಕರ್ತವ್ಯಲೋಪ, ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲೇ ಆದೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!
ಆಡಳಿತ ಯಂತ್ರವನ್ನು ಚುರಕುಗೊಳಿಸಲು ಮತ್ತು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಕ್ರಮ ಪೂರಕವಾಗಲಿದೆ.
ಹಾವೇರಿ: ಹಿಂದಿ ಸಿನಿಮಾ ‘ನಾಯಕ್’ (Nayak) ನೋಡಿದ್ದೀರಾ? ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಗರದಲ್ಲಿಂದು ತಮ್ಮ ಕಾರ್ಯವೈಖರಿಯಿಂದ ಆ ಸಿನಿಮಾದ ಒಂದು ಸನ್ನಿವೇಶ ನೆನಪಾಗುವಂತೆ ಮಾಡಿದರು. ಸಿನಿಮಾದಲ್ಲಿ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗುವ ನಟ ಅನಿಲ್ ಕಪೂರ್ (Anil Kapoor) ಇಡೀ ವ್ಯವಸ್ಥೆಯನ್ನು ಸುಧಾರಿಲು ಭ್ರಷ್ಟ, ಕರ್ತವ್ಯಲೋಪ ಎಸಗುವ ಅಧಿಕಾರಿಗಳನ್ನು ಡಿಸ್ಮಿಸ್ ಮಾಡುವ ಆದೇಶವನ್ನು ಸ್ಥಳದಲ್ಲೇ ನೀಡುತ್ತಾರೆ ಮತ್ತು ಅವರ ಹಿಂದೆ ಟೈಪ್ ರೈಟರ್ ಹಿಡಿದುಕೊಂಡೇ ಸುತ್ತುವ ಸಹಾಯಕರೊಬ್ಬರು ಆದೇಶಗಳನ್ನು ಕೂಡಲೇ ಟೈಪ್ ಮಾಡುತ್ತಾರೆ. ಹಾವೇರಿ ಜಿಲ್ಲಾಸ್ಪತ್ರೆಯ ದುರವಸ್ಥೆ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಂದು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ, ಸೋರುತ್ತಿದ್ದ ಆಸ್ಪತ್ರೆಯ ವಾರ್ಡ್ ಒಂದನ್ನು ಕಂಡು ಅಸ್ಪತ್ರೆ ಇಂಜಿನಿಯರಿಂಗ್ ವಿಭಾಗದ ಮುಖ್ಯ ಇಂಜಿನೀಯರ್ ಎಲ್ಲಿ ಅಂತ ಕೇಳುತ್ತಾರೆ. ಆಸಾಮಿ ಸ್ಥಳದಲ್ಲಿ ಇಲ್ಲದಿರೋದು ಅವರನ್ನು ಮತ್ತಷ್ಟು ರೇಗಿಸುತ್ತದೆ. ತಮ್ಮ ಸಹಾಯಕರೊಬ್ಬರಿಗೆ ಆರೋಗ್ಯ ಇಲಾಖೆ ಸೆಕ್ರೆಟರಿಗೆ ಫೋನ್ ಮಾಡುವಂತೆ ಹೇಳಿ ಅದು ಕನೆಕ್ಟ್ ಆದ ಕೂಡಲೇ, ಚೀಫ್ ಇಂಜಿನೀಯರ್ ಮಂಜುನಾಥ್ ರನ್ನು ಕೂಡಲೇ ಅಮಾನತುಗೊಳಿಸುವಂತೆ ಆದೇಶಿಸುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ