ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಅತ್ಯಾಪ್ತ, ಗ್ರಾನೈಟ್ ಉದ್ಯಮಿ ಬರ್ಬರ ಹತ್ಯೆ
ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಅತ್ಯಾಪ್ತ ಕೃಷ್ಣೇಗೌಡ(53) ಅವರನ್ನು ಗ್ರಾನೈಟ್ ಫ್ಯಾಕ್ಟರಿ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹಾಸನ, ಆ.09: ಜಿಲ್ಲೆಯಲ್ಲಿ ಹಾಡಹಗಲೇ ಗ್ರಾನೈಟ್ ಉದ್ಯಮಿ ಬರ್ಬರ ಹತ್ಯೆಯಾಗಿದೆ(Murder). ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣನ(HD Revanna) ಅತ್ಯಾಪ್ತ ಕೃಷ್ಣೇಗೌಡ(53) ಅವರನ್ನು ಗ್ರಾನೈಟ್ ಫ್ಯಾಕ್ಟರಿ(Granite Factory) ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೃಷ್ಣೇಗೌಡನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಹಾಸನ ಕ್ಷೇತ್ರದ JDS ಶಾಸಕ ಸ್ವರೂಪ್ ಪ್ರಕಾಶ್ ಅವರು ಕೂಡ ಆಗಮಿಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಕೃಷ್ಣೇಗೌಡ ಅವರು ಜೆಡಿಎಸ್ ಹಾಗೂ ಹೆಚ್ಡಿ ರೇವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೃಷ್ಣೇಗೌಡ ಶ್ರೀ ರಾಮ ಎಂಬ ಗ್ರಾನೈಟ್ ಕಂಪನಿಯನ್ನು ಹೊಂದಿದ್ದರು. ಅಲ್ಲದೆ ಗುತ್ತಿಗೆದಾರರೂ ಕೂಡ ಆಗಿದ್ದರು. ಪ್ರತಿ ದಿನ ತಮ್ಮ ಗ್ರಾನೈಟ್ಗೆ ಭೇಟಿ ನೀಡುತ್ತಿದ್ದ ಕೃಷ್ಣೇಗೌಡ ಇಂದು ಕೂಡ ಗ್ರಾನೈಟ್ ಕಂಪನಿ ಬರುತ್ತಿದ್ದಾಗ ದುಷ್ಕರ್ಮಿಗಳು ಕಾರಿಗೆ ಅಡ್ಡಗಟ್ಟಿದ್ದಾರೆ. ಈ ವೇಳೆ ಯಾರಿರಬಹುದು ಎಂದು ವಿಚಾರಿಸಲು ಕೃಷ್ಟೇಗೌಡ ಕಾರಿನಿಂದ ಇಳಿದಿದ್ದಾರೆ. ಆಗ ನಾಲ್ಕರಿಂದ ಐದು ಜನರ ಗುಂಪು ಮಚ್ಚಿನಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ರೇಣುಕಾ ಕೆ ಸುಕುಮಾರ್ ನೇಮಕ
ತಕ್ಷಣ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಆರೋಪಿಗಳ ಹುಡುಕಾಟಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಎಸ್ಪಿ ಹರಿರಾಮ್ ತಿಳಿಸಿದ್ದಾರೆ. ಇನ್ನು ಇದೇ ವೇಳೆ JDS ಶಾಸಕ ಸ್ವರೂಪ್ ಪ್ರಕಾಶ್, ನಮ್ಮ ಪಕ್ಷದ ಹಿರಿಯ ಮುಖಂಡ ಹಾಗೂ ಹೆಚ್ಡಿ ರೇವಣ್ಣರ ಕುಟುಂಬಕ್ಕೆ ಆತ್ಮೀಯರಾಗಿದ್ದ ಕೃಷ್ಣೇಗೌಡ ಅವರನ್ನು ಹಾಡ ಹಗಲೇ ಕೊಲೆ ಮಾಡಲಾಗಿದೆ. ಇಂತಹ ಘಟನೆಗಳು ಮರುಕಳಿಸಬಾರದು. ಕಾನೂನು ವ್ಯವಸ್ಥೆ ಬಿಗಿಗೊಳಿಸಬೇಕು. ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:28 pm, Wed, 9 August 23