ಹಾಸನ ಕಾರಾಗೃಹದ ಕರ್ಮಕಾಂಡದ ವಿಡಿಯೋ ವೈರಲ್ ಮಾಡಿದ ಕೈದಿ, ನಾಲ್ವರು ಅಧಿಕಾರಿಗಳು ಸಸ್ಪೆಂಡ್
ಹಾಸನ ಕಾರಾಗೃಹದಲ್ಲಿ ಕೈದಿಗಳ ಬಳಿ ಗಾಂಜಾ, ಮೊಬೈಲ್ ಫೋನ್ ಪತ್ತೆಯಾಗಿತ್ತು. ಸದ್ಯ ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಉಪಕಾರಾಗೃಹದ ಜೈಲರ್‌ಗಳಾದ ಖುತ್ಬುದ್ದೀನ್ ದೇಸಾಯಿ, ಜಾಧವ್, ಪಾಟೀಲ್ರನ್ನು ಕಾನೂನು ಉಲ್ಲಂಘನೆ ಆರೋಪದಡಿ ಅಮಾನತುಗೊಳಿಸಿ ಡಿಜಿ-ಐಜಿಪಿ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಹಾಸನ, ಆ.23: ಹಾಸನ ಕಾರಾಗೃಹದಲ್ಲಿ(Hassan District Jail) ಮಾದಕ ವಸ್ತುಗಳ(Drugs) ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಕಾರಾಗೃಹದ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಉಪಕಾರಾಗೃಹದ ಜೈಲರ್‌ಗಳಾದ ಖುತ್ಬುದ್ದೀನ್ ದೇಸಾಯಿ, ಜಾಧವ್, ಪಾಟೀಲ್ರನ್ನು ಕಾನೂನು ಉಲ್ಲಂಘನೆ ಆರೋಪದಡಿ ಅಮಾನತುಗೊಳಿಸಿ ಡಿಜಿ-ಐಜಿಪಿ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಹಾಸನದ ಜೈಲಿನ ಕರ್ಮಕಾಂಡದ ಕುರಿತು, ಜೈಲಿನ ಅಕ್ರಮದ ಬಗ್ಗೆ ವಿಚಾರಣಾಧೀನ ಕೈದಿ ವಿಡಿಯೋ ಮಾಡಿದ್ದ. ವಿಡಿಯೋ ವೈರಲ್ ಹಿನ್ನೆಲೆ ಆ.18ರ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಹಾಸನದ ಜೈಲಿಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದ 7 ಸ್ಮಾರ್ಟ್ ಫೋನ್ ಸೇರಿ 18 ಮೊಬೈಲ್ ಹಾಗು ಗಾಂಜಾ ಕೂಡ ಪತ್ತೆ ಮಾಡಿದ್ದರು. ಸದ್ಯ ಕರ್ತವ್ಯಲೋಪ ಹಿನ್ನೆಲೆ ನಾಲ್ವರು ಜೈಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: Belagavi Hindalga Central Jail: ಬೆಳಗಾವಿ ಹಿಂಡಲಗಾ ಜೈಲು -ಇಲ್ಲಿ ದುಡ್ಡಿಗೆ ಎಲ್ಲವೂ ಸಿಗುತ್ತೆ!
ಜೈಲಿನ ಹೊರಗೆ ಯಾವ ವ್ಯಕ್ತಿಗಳು ಗಾಂಜಾ ಮಾರಾಟ ಮಾಡಿ ಜೈಲು ಸೇರಿದ್ದರೊ ಅವರು ವಿಚಾರಣಾಧೀನ ಕೈದಿಗಳಾಗಿ ಜೈಲೊಳಗೆ ಇದ್ದರೂ ಕೂಡ ಅವರ ಬಳಿ ಜೈಲಲ್ಲೇ ಗಾಂಜಾ ಸಿಕ್ಕಿತ್ತು. ಯಾವಾಗ ಜೈಲಿನಲ್ಲಿ ಗಾಂಜಾ, ಮೊಬೈಲ್ ಸಿಕ್ತೋ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದರು. ಜೈಲಿನಲ್ಲಿದ್ದುಕೊಂಡೇ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ಅಪ್ಲೋಡ್ ಮಾಡುವ ಖತರ್ನಾಕ್ ಕೈದಿಗಳು, ಕಂಬಿ ಹಿಂದೆ ಇದ್ದುಕೊಂಡೇ ವಿಡಿಯೋ ಕಾಲ್ ಮಾಡುತ್ತಾ ಮಸ್ತಿ ಮಾಡುತ್ತಿದ್ದರು. ಮೊಬೈಲ್ ಹೊಂದಿದ್ದವರ ಮೇಲೆ ಹಾಗೂ ಗಾಂಜಾ ಇಟ್ಟುಕೊಂಡಿದ್ದವರ ಮೇಲೆ ಕೇಸ್ ದಾಖಲಾಗಿದೆ. ಗಾಂಜಾ ಸೇವನೆ ಎಲ್ಲವೂ ನಡೆಯುತ್ತಿದ್ದರು ಜೈಲು ಅಧಿಕಾರಿ ಸಿಬ್ಬಂದಿ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು.
ಹಾಸನ ಜೈಲಿನಲ್ಲಿ ನೂರಾರು ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ. ಇದರಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಕಳ್ಳತನ, ಗಾಂಜಾ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ವಿಚಾರಣಾದೀನ ಕೈದಿಗಳಿದ್ದಾರೆ. ಜೈಲೊಳಗೆ ಯಾರಿಗೂ ಕೂಡ ಮೊಬೈಲ್ ಬಳಕೆಗೆ ಅವಕಾಶ ಇಲ್ಲವೇ ಇಲ್ಲಾ. ಆದರೆ ಕಿ ಪ್ಯಾಡ್ ಫೋನ್ ಜೊತೆಗೆ ಕೆಲವರು ಸ್ಮಾರ್ಟ್ ಆಂಡ್ರೈಡ್ ಫೋನ್ ಗಳನ್ನೇ ಹೊಂದಿರುವುದು ಪತ್ತೆಯಾಗಿದೆ. ಈ ಹಿಂದೆ ಕೂಡ ಶಿವಮೊಗ್ಗ ಹಾಗೂ ಬೆಳಗಾವಿಯ ಕೇಂದ್ರ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ವರದಿಯಾಗಿ ಅಧಿಕಾರಿಗಳು ಅಮಾನತುಗೊಂಡ ಘಟನೆಗಳು ನಡೆದಿದೆ.
ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ