ಹಾಸನ, (ಆಗಸ್ಟ್ 11): ಸಾವು ಯಾವ ರೂಪದಲ್ಲಿ ಬರುತ್ತದೆ ಅಂತ ಊಹಿಸಲು ಸಾಧ್ಯವಿಲ್ಲ. ಮನೆಯಿಂದ ಆಚೆ ಹೋಗಿ ವಾಪಸ್ ಬರುತ್ತೇವೆ ಎನ್ನುವುದು ಗ್ಯಾರಂಟಿ ಇಲ್ಲದಂತಾಗಿದೆ. ಅದಕ್ಕೆ ಈ ಘಟನೆಯೇ ಸಾಕ್ಷಿ. ಅಂಗಡಿಗೆ ಹೋಗಬೇಕೆಂದು ವ್ಯಕ್ತಿಯೋರ್ವ ಬೈಕ್ ಸೈಡಿಗೆ ಹಾಕಿ ರಸ್ತೆ ಕ್ರಾಸ್ ಮಾಡುವಾಗ ಕಬ್ಬಿಣದ ಡಿವೈಡರ್ ಮೂಲಕ ವಿದ್ಯುತ್ ಪ್ರವಹಿಸಿ(electrocuted) ಸ್ಥಳದಲ್ಲೇ ದಾರುಣ ಅಂತ್ಯ ಕಂಡಿರುವ ಘಟನೆ ಹಾಸನ(Hassan) ಜಿಲ್ಲೆಯಲ್ಲಿ ನಡೆದಿದೆ. ಹೌದು…ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೇಳಗುಂಬ ಗೇಟ್ ಬಳಿಯ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದೆ. ಹುಣಸೆಘಟ್ಟ ಗ್ರಾಮದ ನಿವಾಸಿ ರವಿ (45) ಮೃತ ದುರ್ದೈವಿ.
ಇದನ್ನೂ ಓದಿ: ಒಂದುವರೆ ವರ್ಷದ ಹಿಂದಷ್ಟೇ ಪ್ರೀತಿಸಿ ಮದ್ವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು
ಕಳೆದ ರಾತ್ರಿ (ಆಗಸ್ಟ್ 10) ರವಿ, ಅಂಗಡಿಗೆ ಹೋಗಲು ಬೈಕ್ ಸೈಡಿಗೆ ಹಾಕಿದ್ದು, ಬಳಿಕ ರಸ್ತೆ ಮಧ್ಯದಲ್ಲಿ ಅಳವಡಿಸಿದ್ದ ಕಬ್ಬಿಣದ ಡಿವೈಡರ್ ದಾಟು ವೇಳೆ ಏಕಾಏಕಿ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಬಿಟ್ಟು ಪ್ರಾಣತೆತ್ತಿದ್ದಾನೆ. ರಸ್ತೆ ಮಧ್ಯೆ ಅಳವಡಿಸಿದ್ದ ಕಬ್ಬಿಣದ ಡಿವೈಡರ್‌ನಿಂದ ವಿದ್ಯುತ್ ಪ್ರವಹಿಸಿ ರವಿ ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಾವಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ರಸ್ತೆ ಮಧ್ಯೆ ಜೋತು ಬಿದ್ದಿರುವ ವಿದ್ಯುತ್ ವೈರ್ ಹಾಗೂ ಕಂಬಗಳಿಂದ ಹುಷಾರಾಗಿ ಇರಬೇಕು. ಅದರಲ್ಲೂ ಮಳೆಗಾದಲ್ಲಿ ಈ ಬಗ್ಗೆ ಜಾಗೃತರಾಗಿರಬೇಕು.
ರಾಮನಗರ: ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬಿಡದಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ರೈಲ್ವೆ ಹಳಿ ಮೇಲೆ 35 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಚಾಮರಾಜನಗರ ಪ್ಯಾಸೆಂಜರ್ ರೈಲಿಗೆ ಸಿಲುಕಿ ವ್ಯಕ್ತಿಯ ದೇಹ ಛಿದ್ರ ಛಿದ್ರವಾಗಿದ್ದು, ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:01 pm, Fri, 11 August 23