ವೀರಶೈವ ಲಿಂಗಾಯತ ಒಳಪಂಗಡಕ್ಕೆ OBC ಮೀಸಲಾತಿಗಾಗಿ ಹಕ್ಕೊತ್ತಾಯ: ಸ್ಪಂದಿಸದಿದ್ದರೆ ಹೋರಾಟ ಎಚ್ಚರಿಕೆ
Gadag News: ನಗರದ ಕೆ.ಹೆಚ್.ಪಾಟೀಲ್ ಸಭಾಭವನದಲ್ಲಿ ವೀರಶೈವ ಲಿಂಗಾಯತ ಒಳಪಂಗಡಕ್ಕೆ OBC ಮೀಸಲಾತಿಗಾಗಿ ಹಕ್ಕೊತ್ತಾಯ ಸಭೆಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರಶ್ರೀ, ನಮ್ಮ ಬೇಡಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಡುತ್ತೇವೆ. ಆಗ ವೀರಶೈವ ಲಿಂಗಾಯತ ಸಮಾಜದ ತಾಕತ್ತು ಹೊರಗಡೆ ಬರುತ್ತೆ ಎಂದಿದ್ದಾರೆ.
ಗದಗ, ಆಗಸ್ಟ್ 14: ವೀರಶೈವ ಲಿಂಗಾಯತ (Veerashaiva Lingayat) ಸಮಾಜದ ಉದ್ಧಾರಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಬೇಡಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಡುತ್ತೇವೆ. ಆಗ ವೀರಶೈವ ಲಿಂಗಾಯತ ಸಮಾಜದ ತಾಕತ್ತು ಹೊರಗಡೆ ಬರುತ್ತೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರಶ್ರೀ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆ.ಹೆಚ್.ಪಾಟೀಲ್ ಸಭಾಭವನದಲ್ಲಿ ವೀರಶೈವ ಲಿಂಗಾಯತ ಒಳಪಂಗಡಕ್ಕೆ OBC ಮೀಸಲಾತಿಗಾಗಿ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ರಾಜಕಾರಣಿಗಳು ಮತ್ತು ಮಠಾಧೀಶರು ತಮ್ಮ ಸ್ವಾರ್ಥ ಪ್ರತಿಷ್ಠೆ ಮರೆಯಬೇಕು. ಸಮಾಜದ ಹಿತದೃಷ್ಟಿಯಿಂದ ವಿಚಾರಗಳ ಬದಲಾವಣೆಯಾಗಬೇಕಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಶ್ರೀಗಳು ತಮ್ಮ ನೋವುಗಳನ್ನು ಮರೆಯಬೇಕು. ಪೀಠಾಧೀಶರು ಬಹಳ ಎತ್ತರದಲ್ಲಿರುವುದು ಸರಿಯಲ್ಲ ಅಂತಾ ನಿರ್ಧರಿಸಿದ್ದಾರೆ. ಯಾವ ಸ್ವಾಮೀಜಿಗಳಿಗೆ ಈ ಗುಂಪಿನಲ್ಲಿ ಸೇರಿಕೊಳ್ಳುವ ಮನಸ್ಸು ಇಲ್ಲ. ಅಂತಹ ಸ್ವಾಮೀಜಿಗಳು ಜಿಲ್ಲೆಯಲ್ಲಿ ಒಬಿಸಿ ಸಮಾವೇಶಗಳನ್ನು ಮಾಡಲಿ. ಇಲ್ಲಿನ ಸಭೆಗೆ ಯಾರು ಬಂದಿಲ್ಲಾ ಆ ಸ್ವಾಮೀಜಿಗಳಿಗೆ ಪಾಠ ಮಾಡಿ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮತ್ತೆ ಮುನ್ನೆಲೆಗೆ, ಈ ಬಗ್ಗೆ ಧ್ವನಿ ಎತ್ತಿದ ಸ್ವಾಮೀಜಿ
ಗದಗನ ತೋಂಟದಾರ್ಯ ಸ್ವಾಮೀಜಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶ್ರೀಗಳ ಹೇಳಿಕೆಯನ್ನು ನಾವು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇವೆ. ಸಭೆಗೆ ಬರದೆಯಿದ್ದರೆ ಪರವಾಗಿಲ್ಲ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಮ್ಮದು ಬೆಂಬಲ ಇದೆ ಎನ್ನುವಷ್ಟು ಮನಸ್ಸು ಬದಲಾವಣೆ ಮಾಡಿದ್ದಾರೆ. ಅದು ನಮಗೆ ಬಹಳ ಖುಷಿಯಾಗಿದೆ ಎಂದರು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು: ಡಾ.ತೋಂಟದ ಸಿದ್ದರಾಮ ಸ್ವಾಮೀಜಿ
ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನೆಲೆಗೆ ಬಂದ ಹಿನ್ನೆಲೆ ನಗರದಲ್ಲಿ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆ ವರದಿಯನ್ನ ವಿಸ್ತೃತವಾಗಿ ಅಧ್ಯಯನ ಮಾಡಲಾರದೇ ತಿರಸ್ಕೃತ ಮಾಡಲಾಗಿದೆ. ಯಾವ ಕಾರಣಕ್ಕೆ ತಿರಸ್ಕಾರಗೊಂಡಿದೆ ಎಂಬ ಬಗ್ಗೆ ದಾಖಲೆ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಪರಿಸರ ಸಂರಕ್ಷಣೆಗೆ ಜಾಗೃತಿ, ಜತೆಗೆ ಜನಾಂದೋಲನ ಅವಶ್ಯಕ: ಸಚಿವ ಈಶ್ವರ ಖಂಡ್ರೆ
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುವೆ. ಸಿಎಂ ಸಿದ್ದರಾಮಯ್ಯನವರು ಬದ್ಧತೆಗೆ ಹೆಸರಾದವರು. ಲಿಂಗಾಯತ ಧರ್ಮ ಸ್ವತಂತ್ರ ಅನ್ನೋದನ್ನ ಮನಗಂಡು ನ್ಯಾ.ಹೆಚ್.ಎನ್.ನಾಗಮೋಹನ್ ದಾಸ ವರದಿ ಶಿಫಾರಸು ಮಾಡಿದ್ದರು. ಹಾಗಾಗಿ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಹಿನ್ನಡೆ ಆಯಿತು ಅಂತಾ ಕೆಲವರು ಗುಮಾನಿ ಹಬ್ಬಿಸಿದ್ದರು. ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ವಿರೋಧಿ ಅಲೆ ಇರುತ್ತದೆ. ಹೀಗಾಗಿ ಚುನಾವಣೆಯಲ್ಲಿ ಕೆಲವರು ಸೋಲು ಅನುಭವಿಸಬೇಕಾಯಿತು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Mon, 14 August 23