ಉಚಿತ ಬಸ್ ಫುಲ್ ರಶ್! ಪ್ರಯಾಣಿಕರ ಸರಿದೂಗಿಸಲು 500 ಕೋಟಿ ರೂ ಬಸ್​​​ಗಳ ಖರೀದಿಗೆ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Aug 21, 2023 | 1:01 PM

Free Bus Shakti scheme: ರಾಜ್ಯ ರಸ್ತೆ ಸಾರಿಗೆ ಸುಮಗಗೊಳಿಸುವ ನಿಟ್ಟಿನಲ್ಲಿ ಹೊಸ ಬಸ್ ಖರೀದಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುದಾನ ನೀಡಿದೆ. ಬರೋಬ್ಬರಿ 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿ, ಆದೇಶ ಮಾಡಿದೆ. ನಾಲ್ಕು ಸಾರಿಗೆ ನಿಗಮಗಳಿಗೆ 500 ಕೋಟಿ ರೂಪಾಯಿ ಅನುದಾನ ನೀಡಿದೆ. ನೂತನ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ನಿಗಮಗಳಿಗೆ ಸರ್ಕಾರ ಸೂಚನೆ ನೀಡಿದೆ.

ಉಚಿತ ಬಸ್ ಫುಲ್ ರಶ್! ಪ್ರಯಾಣಿಕರ ಸರಿದೂಗಿಸಲು 500 ಕೋಟಿ ರೂ ಬಸ್​​​ಗಳ ಖರೀದಿಗೆ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಸರ್ಕಾರ
500 ಕೋಟಿ ರೂ ಬಸ್​​​ಗಳ ಖರೀದಿಗೆ ಹಣ ಬಿಡುಗಡೆ
Follow us on

ಬೆಂಗಳೂರು, ಆಗಸ್ಟ್​ 21: ರಾಜ್ಯ ರಸ್ತೆ ಸಾರಿಗೆ ಸುಮಗಗೊಳಿಸುವ ನಿಟ್ಟಿನಲ್ಲಿ ಹೊಸ ಬಸ್ (Bus) ಖರೀದಿಗೆ ಸಿದ್ದರಾಮಯ್ಯ ( Siddaramaiah) ನೇತೃತ್ವದ ಸರ್ಕಾರ ಅನುದಾನ ನೀಡಿದೆ. ಬರೋಬ್ಬರಿ 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿ, ಆದೇಶ ಮಾಡಿದೆ. ನಾಲ್ಕು ಸಾರಿಗೆ ನಿಗಮಗಳಿಗೆ 500 ಕೋಟಿ ರೂಪಾಯಿ ಅನುದಾನ ನೀಡಿದೆ. ನೂತನ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ನಿಗಮಗಳಿಗೆ ಸರ್ಕಾರ ಸೂಚನೆ ನೀಡಿದೆ.

ಕಾಂಗ್ರೆಸ್​​ ಅಧಿಪತ್ಯದ ಹೊಸ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ಭರವಸೆ ನಿಡಿದ್ದ ಗ್ಯಾರಂಟಿಗಳ ಪೈಕಿ ಒಂದನ್ನು ಜೂನ್ ತಿಂಗಳಲ್ಲಿ ಜಾರಿಗೆ ತಂದಿತು. ಮಹಿಳೆಯರಿಗೆ ಉಚಿತ ಬಸ್​​ ಸೇವೆಯಾದ ಶಕ್ತಿ ಯೋಜನೆಯನ್ನು (Free Bus Shakti scheme) ಜಾರಿಗೊಳಿಸಿತು. ಬಳಿಕ ಬಸ್​ಗಳು ಮಹಿಳಾ ಪ್ರಯಾಣಿಕರಿಂದ ತುಂಬಿತುಳುಕಿ ಫುಲ್ ಆಗತೊಡಗಿತ್ತು. ಇದರಿಂದ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಸಮಯಕ್ಕೆ ಸರಿಯಾಗಿ ತಮಗೆ ಬಸ್​​ಗಳು ಸಿಗುತ್ತಿಲ್ಲ ಎಂದು ರೋಡಿಗಿಳಿದು, ಪ್ರತಿಭಟನೆ ಮಾಡಿದ್ದರು. ಈಗ ಹೊಸ ಬಸ್ ಖರೀದಿಯಿಂದ ಸಮಸ್ಯೆ ನಿವಾರಣೆಯಾಗುತ್ತಾ? ಕಾದು ನೊಡಬೇಕಿದೆ.

ಈ ಕುರಿತಾದ ಸರ್ಕಾರದ ಅಧಿಕೃತ ಆದೇಶ ಹೀಗಿದೆ:

ಜುಲೈ-2023ರಲ್ಲಿ ಘೋಷಣೆಯಾಗಿರುವ 2023-24ನೇ ಸಾಲಿನ ಆಯವ್ಯಯದಲ್ಲಿ ಸಾರಿಗೆ ಇಲಾಖೆಗೆ ವಿವಿಧ ಕಾರ್ಯಕ್ರಮ/ಯೋಜನೆಗಳಿಗೆ ಒದಗಿಸಿರುವ ಅನುದಾನದ ಉದ್ದೇಶವನ್ನು ನಮೂದಿಸಿ, ಅನುಸರಿಸಬೇಕಾದ ಪ್ರಕ್ರಿಯೆ ಮುಂತಾದ ವಿವರಗಳನ್ನು ನೀಡಿರುವಂತೆ, 2023-24ನೇ ಸಾಲಿನ ವಿಶೇಷ ಬಂಡವಾಳ ನೆರವು ಅಡಿ ನಿಗಮವಾರು ನಾಲ್ಕು, ಸಾರಿಗೆ ಸಂಸ್ಥೆಗಳಿಗೆ ಒಟ್ಟು ರೂ. 50,000 ಲಕ್ಷಗಳ ಅನುದಾನವನ್ನು ಈ ಕೆಳಕಂಡಂತೆ ಒದಗಿಸಲಾಗಿದ್ದು, ಸದರಿ ಅನುದಾನಕ್ಕನುಗುಣವಾಗಿ ನಿಗಮಗಳು ಹೊಸ ಬಸ್ ಖರೀದಿಗಾಗಿ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಲು ನಿರ್ದೇಶಿಸಲಾಗಿದೆ.

ನಿಗಮಗಳು ಮತ್ತು ಹಂಚಿಕೆಯಾದ ಅನುದಾನದ ವಿವರ ಹೀಗಿದೆ: ಕ.ರಾ.ರ.ಸಾ. ನಿಗಮಕ್ಕೆ 10,000 ಲಕ್ಷ ರೂ, ಬೆಂ.ಮ.ಸಾ.ಸಂಸ್ಥೆಗೆ 15,000 ಲಕ್ಷ ರೂ, ವಾ.ಕ.ರ.ಸಾ. ನಿಗಮಕ್ಕೆ 15,000 ಲಕ್ಷ ರೂ ಮತ್ತು ಕ.ಕ.ರ.ಸಾ. ನಿಗಮಕ್ಕೆ 10,000 ಲಕ್ಷ ರೂ ಸೇರಿದಂತೆ ಒಟ್ಟಾರೆಯಾಗಿ 50,000 ಲಕ್ಷ ರೂ ಬಿಡುಗಡೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ