Tumakuru News: ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ತಾಯಿ ಜೊತೆ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Aug 13, 2023 | 6:11 PM

ತುಮಕೂರಿನ ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ತಾಯಿ ಜೊತೆ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಓರ್ವ ಬಾಲಕ ಕಾಲು ತೊಳೆದುಕೊಂಡು ಬರುತ್ತೇನೆಂದು ಹೋಗಿ ನೀರಿಗೆ ಬಿದ್ದಿದ್ದಾನೆ. ಬಾಲಕ ರಕ್ಷಣೆಗೆಂದು ಹೋದ ತಾಯಿ ಹಾಗೂ ಮತ್ತೋರ್ವ ಪುತ್ರ ಸಹ ನೀರಿಗೆ ಬಿದ್ದಿದ್ದಾರೆ. ಈ ಮೂವರ ರಕ್ಷಣೆಗೆ ಹೋಗಿದ್ದ ವ್ಯಕ್ತಿ ಸಹ ಸಾವನ್ನಪ್ಪಿದ್ದಾರೆ. ವಿಚಿತ್ರ ಅಂದರೆ ಮೊದಲ ನೀರಿಗೆ ಬಿದ್ದಿದ್ದ ಬಾಲಕ ರಂಜಿತ್​ ಪ್ರಾಣಾಯಾಮದಿಂದ ಪಾರಾಗಿದ್ದರೆ, ಆತನ ರಕ್ಷಣೆ ಮಾಡಲು ಹೋಗಿದ್ದ ಇನ್ನುಳಿದ ನಾಲ್ವರು ನೀರು ಪಾಲಾಗಿದ್ದಾರೆ.

Tumakuru News: ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ತಾಯಿ ಜೊತೆ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವು
ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆ
Follow us on

ತಮಕೂರು, (ಆಗಸ್ಟ್ 13): ನೀರಿಗೆ ಬಿದ್ದು ನಾಲ್ವರು ಸಾವನ್ನಪ್ಪಿರುರುವ ದಾರುಣ ಘಟನೆ ತುಮಕೂರಿನ(tumkur) ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ(siddaganga matha) ನಡೆದಿದೆ. ಓರ್ವ ಬಾಲಕ ಕಾಲು ತೋಳೆದುಕೊಂಡು ಬರುತ್ತೇನೆ ಎಂದು ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಯಲ್ಲಿ ಬಿದ್ದಿದ್ದಾನೆ. ಮಗನ್ನ ರಕ್ಷಿಸಲು ಹೋಗಿ ತಾಯಿ ಜೊತೆಗೆ ಮತ್ತೊರ್ವ ಮಗ ನೀರಿಗೆ ಬಿದ್ದಿದ್ದಾರೆ. ಇವರನ್ನು ರಕ್ಷಿಸಲು ಹೋಗಿದ್ದ ಮಹದೇವಪ್ಪ ಎನ್ನುವ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ.  ಶಂಕರ್( 11), ಹರ್ಷಿತ್ (11), ಮೃತ ವಿದ್ಯಾರ್ಥಿಗಳು. ಬೆಂಗಳೂರು ಮೂಲದ ಲಕ್ಷ್ಮೀ (33) ಹಾಗೂ ಯಾದಗಿರಿ ಮೂಲದ ಮಹದೇವಪ್ಪ (40) ಮೃತ ದುರ್ದೈವಿಗಳು. ಸದ್ಯ ಲಕ್ಷ್ಮೀ, ಹಾಗೂ ಹರ್ಷಿತ್ ಮೃತದೇಹಗಳನ್ನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹೊರತೆಗೆದಿದ್ದು. ಶಂಕರ್, ಹಾಗೂ ಮಹದೇವಪ್ಪ ಮೃತದೇಹಗಳಿಗೆ ಹುಡುಕಾಟ ನಡೆಸಿದ್ದಾರೆ. ವಿಚಿತ್ರ ಅಂದರೆ ಮೊದಲ ನೀರಿಗೆ ಬಿದ್ದಿದ್ದ ಬಾಲಕ ರಂಜಿತ್​ ಪ್ರಾಣಾಯಾಮದಿಂದ ಪಾರಾಗಿದ್ದರೆ, ಆತನ ರಕ್ಷಣೆ ಮಾಡಲು ಹೋಗಿದ್ದ ಇನ್ನುಳಿದ ನಾಲ್ವರು ನೀರು ಪಾಲಾಗಿದ್ದಾರೆ.

ರಂಜಿತ್, ಶಂಕರ್, ಹರ್ಷಿತ್ ಸಿದ್ದಗಂಗಾ ಮಠದಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಭಾನುವಾರ ರಜೆ ಇರುತ್ತೆ ಎಂದು ವಿದ್ಯಾರ್ಥಿಗಳನ್ನ ಭೇಟಿಯಾಗಲು ಪೋಷಕರು ಬಂದಿದ್ದರು. ಬಳಿಕ ಮಧ್ಯಾಹ್ನ 1 ಗಂಟೆಗೆ ಮೂವರು, ತಾಯಿ ಲಕ್ಷ್ಮೀ ಜೊತೆ ಊಟ ಮಾಡಲು ಬಂದಿದ್ದರು. ಈ ವೇಳೆ ಕೈ ತೊಳೆದುಕೊಂಡು ಬರುತ್ತೇನೆಂದು ಸಿದ್ದಗಂಗಾ ಮಠದ ಬಳಿಯಿರುವ ಗೋಕಟ್ಟೆಗೆ ಹೋಗಿದ್ದಾರೆ. ಆದ್ರೆ, ಈ ವೇಳೆ ಕೈ ತೊಳೆಯಲು ಹೋದ ರಂಜಿತ್ ಮೊದಲು ಕಾಲು ಜಾರಿ ಗೋಕಟ್ಟೆ ಒಳಗೆ ಬಿದ್ದಿದ್ದಾನೆ. ಪಕ್ಕದಲ್ಲೇ ಇದ್ದ ಶಂಕರ್ ಮತ್ತು ಹರ್ಷಿತ್ ಇಬ್ಬರು ಸಹ ರಂಜಿತ್​ನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆಗ ಇಬ್ಬರೂ ಕೂಡ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ರಂಜಿತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ತುಮಕೂರು: ಕಾಂಗ್ರೆಸ್ ಮುಖಂಡ ಅನುಮಾನಸ್ಪದ ಸಾವು, ಪರಮೇಶ್ವರ್​ಗೆ ಮತ ಹಾಕಿದ್ದಕ್ಕೆ ಕೊಲೆ ಶಂಕೆ

ಇನ್ನು ನೀರಿಗೆ ಬಿದ್ದಿದ್ದ ಹರ್ಷಿತ್ ಮತ್ತೆ ಶಂಕರ್ ನನ್ನ ರಕ್ಷಣೆ ಮಾಡಲು ರಂಜಿತ್ ತಾಯಿ ಲಕ್ಷ್ಮೀ ಹಾಗೂ ಮತ್ತೊಬ್ಬ ಪೊಷಕರಾದ ಮಹದೇವಪ್ಪ ದೌಡಾಯಿಸಿದ್ದಾರೆ. ಈ ವೇಳೆ ಈ ವೇಳೆ ಲಕ್ಷ್ಮೀ, ಮಹದೇವಪ್ಪ, ಹಾಗೂ ವಿದ್ಯಾರ್ಥಿಗಳಾದ ಹರ್ಷಿತ್, ಶಂಕರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಇನ್ನು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪೋಷಕರು ಇವತ್ತು ಮಕ್ಕಳನ್ನ ನೋಡುವುದಕ್ಕೆ ಸಿದ್ದಗಂಗಾ ಮಠಕ್ಕೆ ಬಂದಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿರುವ ಗೋಕಟ್ಟೆಯೊಳಗೆ ರಂಜಿತ್ ಎಂಬ ವಿದ್ಯಾರ್ಥಿ ಮೊದಲು ಕಾಲು ಜಾರಿ ಬಿದಿದ್ದಾನೆ. ಅವರನ್ನ ರಕ್ಷಣೆ ಮಾಡುವುಕ್ಕೆ ಹೋಗಿ ಅವರ ಅಮ್ಮ ಲಕ್ಷ್ಮೀ ಎಂಬುವರು ನೀರಿಗೆ ಇಳಿದಿದ್ದಾರೆ. ಅವರನ್ನ ರಕ್ಷಣೆ ಮಾಡುವುದಕ್ಕೆ ಇಬ್ಬರು ಹುಡುಗರು ನೀರಿಗೆ ಬಿದ್ದಿದ್ದಾರೆ. ಇವರೆಲ್ಲರನ್ನು ರಕ್ಷಣೆ ಮಾಡಲು ಮಹಾದೇವ ಎನ್ನುವುರ ಹೋಗಿದ್ದು, ರಂಜಿತ್ ಎಂಬಾತನನ್ನು ರಕ್ಷಿಸಿ ಮೇಲಕ್ಕೆ ಕಳುಹಿಸಿದ್ದಾರೆ. ಆದ್ರೆ, ಲಕ್ಷ್ಮೀ, ಮಹದೇವ್, ಇನ್ನಿಬ್ಬರು ಮಕ್ಕಳು ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈಗ ಎರಡು ಮೃತದೇಹಗಳು ಸಿಕ್ಕಿದ್ದು, ಇನ್ನೆರಡು ಮೃತದೇಹಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಯುವುದಕ್ಕೂ ಮುನ್ನ ಲಕ್ಷ್ಮೀ ಇದೇ ಸ್ಪಾಟ್ ನಲ್ಲಿ ಫೋಟೋ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾದ್ರು ಆಯತಪ್ಪಿ ಬಿದ್ದಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಿಂದ ಏನಾಗಿದೆ ಎನ್ನುವುದು ಗೊತ್ತಾಗಬೇಕು. ಗೋಕಟ್ಟೆ ಸುಮಾರು 35 ಅಡಿ ಆಳ ಇದ್ದು, ಬೋರ್ ವೇಲ್ ಕ್ಯಾಮರಾ ತರಿಸಿ ಮೃತದೇಹಗಳನ್ನ ಹುಡುಕಾಟ ನಡೆಸಲಾಗುತ್ತೆ. ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ತಿಳಿಸಲಾಗಿದ್ದು, ಗೋಕಟ್ಟೆ ಸುತ್ತ ಭದ್ರತೆ ಒದಗಿಸುವಂತೆ ಸ್ವಾಮೀಜಿಗಳಿಗೆ ಹೇಳುತ್ತಿವೆ. ಇದಕ್ಕೆ ಪರಿಹಾರ ಬರಲ್ಲ. ಸಿಎಂ ಅವರ ವಿಶೇಷ ನಿಧಿಗೆ ಪರಿಹಾರ ಕೊಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಹಳಿ ದಾಟುವಾಗ ರೈಲಿಗೆ ಸಿಲುಕಿ ಬಾಲಕ ಸಾವು

ಹಳಿ ದಾಟುವಾಗ ರೈಲಿಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣ ಬಳಿ ನಡೆದಿದೆ. ಬಾಲಕ ಹರೀಶ್​(14) ಮೃತ ಬಾಲಕ. ಸಿದ್ದಗಂಗಾ ಮಠದಲ್ಲಿ ಓದುತ್ತಿದ್ದ ವಿಜಯಪುರ ಮೂಲದ ಹರೀಶ್, ರೈಲಿನಿಂದ ಇಳಿದು ಹಳಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇನ್ನಷ್ಟು ತುಮಕೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:33 pm, Sun, 13 August 23