ಬೆಂಗಳೂರು, ಆಗಸ್ಟ್ 23: ಪ್ರತಿಷ್ಠಿತ ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಏಷ್ಯಾ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್ ಸದಸ್ಯ ಮತ್ತು ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್ (Dr K Govindaraj) ಆಯ್ಕೆ ಆಗಿದ್ದಾರೆ. ಆ ಮೂಲಕ ಫಿಬಾಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಕೆ.ಗೋವಿಂದರಾಜ್ ಪಾತ್ರರಾಗಿದ್ದಾರೆ. ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸದ್ಯ ವಿಶ್ವ ಆಡಳಿತ ಮಂಡಳಿಯಾಗಿದೆ. 2023-27ರ ವರೆಗೆ ಡಾ.ಕೆ.ಗೋವಿಂದರಾಜ್ ಅಧಿಕಾರಾವಧಿ ಇರಲಿದೆ.
ಈ ವರ್ಷ ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ಗೆ ಡಾ.ಕೆ.ಗೋವಿಂದರಾಜ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು. ಬಳಿಕ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಅಕ್ರಮ ಕೇಬಲ್ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ
ಕತಾರ್ನ ಶೇಕ್ ಸೌದ್ ಅಲಿ ಅಲ್ತಾನಿ ಅವರಿಂದ ತೆರವಾಗಿದ್ದ ಹುದ್ದೆಯನ್ನು ಕನ್ನಡಿಗ ಡಾ.ಕೆ.ಗೋವಿಂದರಾಜ್ ಅವರು ಅಲ್ಲಂಕರಿಸಿದ್ದಾರೆ. ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಏಷ್ಯಾ ಅಧ್ಯಕ್ಷರಾಗಿ ಡಾ. ಕೆ ಗೋವಿಂದರಾಜ್ ಆಯ್ಕೆಯಾದ ಬಳಿಕ ಫಿಬಾ ಪ್ರಧಾನ ಕಾರ್ಯದರ್ಶಿ ಆಂಡ್ರಿಯಾಸ್ ಜಾಗ್ಲಿಸ್, ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಾಜಿರಿಯನ್ ಮತ್ತು ಇತರ ಹಲವಾರು ಉನ್ನತ ಫಿಬಾ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ.
ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ನ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಡಾ.ಕೆ ಗೋವಿಂದರಾಜ್, ಫಿಬಾ ಕೇಂದ್ರ ಮಂಡಳಿಯ ಭಾಗವಾಗಿರುವುದು ಖುಷಿಯ ವಿಚಾರ. ಅದಕ್ಕಿಂತ ಮುಖ್ಯವಾಗಿ ಏಷ್ಯಾದ ಲಕ್ಷಾಂತರ ಯುವಕರಿಗೆ ಬ್ಯಾಸ್ಕೆಟ್ ಬಾಲ್ ತಲುಪಿಸುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 pm, Wed, 23 August 23