ಏಷ್ಯಾ ಬಾಸ್ಕೆಟ್​ ಬಾಲ್​ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಎಲ್​ಸಿ ಡಾ ಕೆ ಗೋವಿಂದರಾಜ್​

ಪ್ರತಿಷ್ಠಿತ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್​ ಸದಸ್ಯ ಮತ್ತು ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​ (Dr K Govindaraj) ಆಯ್ಕೆ ಆಗಿದ್ದಾರೆ.

Important Highlight‌
ಏಷ್ಯಾ ಬಾಸ್ಕೆಟ್​ ಬಾಲ್​ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಎಲ್​ಸಿ ಡಾ ಕೆ ಗೋವಿಂದರಾಜ್​
ಡಾ ಕೆ ಗೋವಿಂದರಾಜು ಮತ್ತು ಇತರರು
Follow us
ಗಂಗಾಧರ​ ಬ. ಸಾಬೋಜಿ
|

Updated on:Aug 23, 2023 | 10:17 PM

ಬೆಂಗಳೂರು, ಆಗಸ್ಟ್​ 23: ಪ್ರತಿಷ್ಠಿತ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್​ ಸದಸ್ಯ ಮತ್ತು ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​ (Dr K Govindaraj) ಆಯ್ಕೆ ಆಗಿದ್ದಾರೆ. ಆ ಮೂಲಕ ಫಿಬಾಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಕೆ.ಗೋವಿಂದರಾಜ್ ಪಾತ್ರರಾಗಿದ್ದಾರೆ. ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಸದ್ಯ ವಿಶ್ವ ಆಡಳಿತ ಮಂಡಳಿಯಾಗಿದೆ. 2023-27ರ ವರೆಗೆ ಡಾ.ಕೆ.ಗೋವಿಂದರಾಜ್ ಅಧಿಕಾರಾವಧಿ ಇರಲಿದೆ.

ಈ ವರ್ಷ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​​ಗೆ ಡಾ.ಕೆ.ಗೋವಿಂದರಾಜ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು. ಬಳಿಕ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಅಕ್ರಮ ಕೇಬಲ್​ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ

ಕತಾರ್​ನ ಶೇಕ್​ ಸೌದ್​ ಅಲಿ ಅಲ್ತಾನಿ ಅವರಿಂದ ತೆರವಾಗಿದ್ದ ಹುದ್ದೆಯನ್ನು ಕನ್ನಡಿಗ ಡಾ.ಕೆ.ಗೋವಿಂದರಾಜ್ ಅವರು ಅಲ್ಲಂಕರಿಸಿದ್ದಾರೆ. ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಡಾ. ಕೆ ಗೋವಿಂದರಾಜ್ ಆಯ್ಕೆಯಾದ ಬಳಿಕ ಫಿಬಾ ಪ್ರಧಾನ ಕಾರ್ಯದರ್ಶಿ ಆಂಡ್ರಿಯಾಸ್ ಜಾಗ್ಲಿಸ್, ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಾಜಿರಿಯನ್ ಮತ್ತು ಇತರ ಹಲವಾರು ಉನ್ನತ ಫಿಬಾ ​​ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ.

ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​​ನ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಡಾ.ಕೆ ಗೋವಿಂದರಾಜ್, ಫಿಬಾ ಕೇಂದ್ರ ಮಂಡಳಿಯ ಭಾಗವಾಗಿರುವುದು ಖುಷಿಯ ವಿಚಾರ. ಅದಕ್ಕಿಂತ ಮುಖ್ಯವಾಗಿ ಏಷ್ಯಾದ ಲಕ್ಷಾಂತರ ಯುವಕರಿಗೆ ಬ್ಯಾಸ್ಕೆಟ್‌ ಬಾಲ್ ತಲುಪಿಸುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Wed, 23 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು