ಧಾರವಾಡ, ಆಗಸ್ಟ್ 11: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (Health and Family Welfare), ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಪರಿಶೀಲಿಸಿದರು. ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಎಮರ್ಜೇನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟ್ ಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟ್ ಡಾ. ಸುದಿಪ್ತೂ ಚಟರ್ಜಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆಗಳನ್ನು ಹಾಗೂ ಟೆಲಿ ಮಾನಸ ಉಚಿತ ಸಹಾಯವಾಣಿಯ ಉಪಯುಕ್ತತೆಯ ಕುರಿತಾಗಿ ಮಾಹಿತಿಯನ್ನು ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮನೋಚೈತನ್ಯ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಎಲ್ಲಾ ತಾಲ್ಲೂಕಾ ಆಸ್ಪತ್ರೆಗಳು ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸುತ್ತಿದ್ದು ಔಷಧಿಗಳ ಸೌಲಭ್ಯವೂ ಕೂಡ ಇದೆ ಎಂದರು.
ಇದನ್ನೂ ಓದಿ: ವಿಮೆ ತಿರಸ್ಕರಿಸಿದ ರಿಲೈನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ಟೆಲಿ ಮಾನಸ ಸೇವೆಯ ಸೌಲಭ್ಯವನ್ನು ಹಾಗೂ ಸಹಾಯವಾಣಿಯನ್ನು 1800-89-14416 ಈ ಟೋಲ್ ಫ್ರೀ ನಂಬರನ್ನು ಸಮುದಾಯದಲ್ಲಿ ಜಾಗ್ರತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಎಸ್. ಬಿಕಳಸೂರಮಠ ಅವರು ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ಮನೋವೈದ್ಯೆ ಡಾ. ವೈಶಾಲಿ ಎನ್ ಹೆಗಡೆ ಅವರು ಮಾನಸಿಕ ಆರೋಗ್ಯ ಚಟುವಟಿಕೆಗಳ ಕುರಿತಾಗಿ ವರದಿಯನ್ನು ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ, ಚಿಕಿತ್ಸೆ ಸೌಲಭ್ಯದ ಬಗ್ಗೆ ಹಾಗೂ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಯ ಬೆಂಗೇರಿಯಲ್ಲಿಯೇ ಅತಿ ಹೆಚ್ಚು ತ್ರಿವರ್ಣ ಧ್ವಜ ತಯಾರಿ; ಕಳೆದ ವರ್ಷ 28 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ಮಾರಾಟ
ವಿಶ್ವ ಆರೋಗ್ಯ ಸಂಸ್ಥೆಯ ತಂಡದವರೂಂದಿಗೆ ನಿಮ್ಹಾನ್ಸ್ ಡಾ. ಸುರೇಶ ಹಾಗೂ ಡಾ. ಮಂಜುನಾಥ ಹಾಗೂ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಡಾ. ಸುಧೀಂದ್ರ ಹುದ್ದಾರ ಮತ್ತು ಡಾ. ಶ್ರೀನಿವಾಸ ಹಾಗೂ ಡಿ.ಎಮ್.ಎಚ್.ಪಿ ಎಲ್ಲಾ ಸಿಬ್ಬಂದಿ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.