ಶ್ರಾವಣ ಮಾಸದ ಉಂಡೆ ಹಬ್ಬದಲ್ಲಿ ಸಂಭ್ರಮಿಸಿದ ಧಾರವಾಡದ ಮಹಿಳೆಯರು

ಶ್ರಾವಣ ಮಾಸದ ಮೊದಲ ಹಬ್ಬ ಅಂದರೆ ಅದು ನಾಗರಪಂಚಮಿ. ಈ ಹಬ್ಬಕ್ಕೂ ಮುನ್ನ ಅದಕ್ಕೆ ಸಂಬಂಧಿಸಿದ ಮತ್ತೊಂದು ಹಬ್ಬ ಬರುತ್ತೆ. ಅದೇ ಉಂಡಿ ಹಬ್ಬ. ಈ ಹಬ್ಬವನ್ನು ಧಾರವಾಡದಲ್ಲಿ ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಬಗೆ ಬಗೆಯ ಉಂಡಿಗಳೇ ಈ ಹಬ್ಬದ ಕೇಂದ್ರಬಿಂದು.

Important Highlight‌
ಶ್ರಾವಣ ಮಾಸದ ಉಂಡೆ ಹಬ್ಬದಲ್ಲಿ ಸಂಭ್ರಮಿಸಿದ ಧಾರವಾಡದ ಮಹಿಳೆಯರು
ಉಂಡೆ ಹಬ್ಬ ಆಚರಿಸಿದ ಮಹಿಳೆಯರು
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on: Aug 19, 2023 | 2:07 PM

ಶ್ರಾವಣ (Shravana) ಬಂದರೆ ಸಾಕು ಹಬ್ಬಗಳ ಸಾಲೇ ಹರಿದು ಬರುತ್ತವೆ. ಈ ಹಬ್ಬಗಳು (Festival) ಬಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಹಿನ್ನೆಲೆ ಇದೆ. ಅದರೊಂದಿಗೆ ಆಯಾ ಹಬ್ಬಗಳಿಗಾಗಿಯೇ ವಿಶೇಷ ಖಾದ್ಯಗಳ ಸಂಭ್ರಮವೂ ಇರುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ ಅಂದರೆ ಅದು ನಾಗರಪಂಚಮಿ. ಈ ಹಬ್ಬಕ್ಕೂ ಮುನ್ನ ಅದಕ್ಕೆ ಸಂಬಂಧಿಸಿದ ಮತ್ತೊಂದು ಹಬ್ಬ ಬರುತ್ತೆ. ಅದೇ ಉಂಡಿ ಹಬ್ಬ. ಈ ಹಬ್ಬವನ್ನು ಧಾರವಾಡದಲ್ಲಿ (Dharwad) ಮಹಿಳೆಯರು ಸಂಭ್ರಮದಿಂದ ಆಚರಿಸಿದರು. ಬಗೆ ಬಗೆಯ ಉಂಡಿಗಳೇ ಈ ಹಬ್ಬದ ಕೇಂದ್ರಬಿಂದು. ಧಾರವಾಡ ನಗರದ ರಂಗಾಯಣ ಆವರಣದಲ್ಲಿ ಜಾನಪದ ಸಂಶೋಧನಾ ಕೇಂದ್ರ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಭಾಗವಹಿಸಿ, ಬಗೆ ಬಗೆಯ ಉಂಡಿಗಳನ್ನು ಸವಿದು ಖುಷಿಪಟ್ಟರು.

ಜಾನಪದ ಸಂಶೋಧನಾ ಕೇಂದ್ರ ಪ್ರತಿವರ್ಷ ಈ ಹಬ್ಬವನ್ನು ಆಯೋಜಿಸುತ್ತಾ ಬಂದಿದೆ. ಈ ಕೇಂದ್ರವನ್ನು ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ಸ್ಥಾಪಿಸಿದ್ದರು. ನಾಡಿನ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕಳೆದ ವರ್ಷ ಅವರು ಮೃತಪಟ್ಟಿದ್ದಾರೆ. ಇದೀಗ ಈ ಸಂಸ್ಥೆಯನ್ನು ಅವರ ಪತ್ನಿ ಹಾಗೂ ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಜಾನಪದ ಉಳಿಸುವ ಉದ್ದೇಶದಿಂದ ಇಂಥ ಹಬ್ಬಗಳನ್ನು ಆಚರಿಸಲಾಗುತ್ತಿದೆ.

ಬೆಳಿಗ್ಗೆಯೇ ಐವತ್ತಕ್ಕೂ ಹೆಚ್ಚು ಮಹಿಳೆಯರು ಹೊಸ ಹೊಸ ಸೀರೆ ಧರಿಸಿ ರಂಗಾಯಣದ ಆವರಣಕ್ಕೆ ಬಂದಿದ್ದು. ಎಲ್ಲ ಮಹಿಳೆಯರು ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನು ಧರಿಸಿ ಬಂದಿದ್ದರು. ಮನೆಯಿಂದ ಬರುವಾಗ ಮನೆಯಲ್ಲಿಯೇ ತಯಾರಿಸಿದ ಬಗೆಬಗೆಯ ಉಂಡಿಗಳನ್ನು ತಂದಿದ್ದರು. ಶೇಂಗಾ ಉಂಡಿ, ರವೆ ಉಂಡಿ, ಎಳ್ಳುಂಡಿ, ಬೇಸನ್ ಉಂಡಿ, ಚುರುಮುರಿ ಉಂಡಿ, ಅಂಟಿನ ಉಂಡಿ, ಕೊಬ್ಬರಿ ಉಂಡಿ – ಇಂಥ ಹತ್ತಾರು ಬಗೆಯ ಉಂಡಿಗಳನ್ನು ತಂದು ನಾಗರಾಜನ ಮಣ್ಣಿನ ಮೂರ್ತಿ ಮುಂದೆ ಇಡಲಾಯಿತು.

ಇದನ್ನೂ ಓದಿ: ಚಾಮುಂಡಿ ತಾಯಿಯ ತವರೂರು ಮೈಸೂರಿನಲ್ಲಿ 100 ವರ್ಷ ಇತಿಹಾಸದ ಶ್ರೀನಿವಾಸ ದೇಗುಲಕ್ಕೆ ವಿಶೇಷ ಶ್ರಾವಣ ಕಳೆ

ಇನ್ನು ಆವರಣದ ಮರದಡಿ ನಿರ್ಮಿಸಲಾಗಿದ್ದ ಕೃತಕ ಹುತ್ತಕ್ಕೆ ಮೊದಲು ಎಲ್ಲ ಮಹಿಳೆಯರು ಹಾಲೆರದರು. ಈ ವೇಳೆ ನಾಗರಾಜನ ಕುರಿತ ಹಾಡುಗಳನ್ನು ಸುಶ್ರಾವ್ಯದಿಂದ ಹಾಡಿದರು. ಬಳಿಕ ನಾಗರಾಜನಿಗೂ ಹೂವು ಏರಿಸಿ, ಬಳಿಕ ಹಾಲೆರೆದು ಭಕ್ತಿ ಮೆರೆದರು. ಬಳಿಕ ಎಲ್ಲರೂ ಸೇರಿ ಬಗೆ ಬಗೆಯ ಹಾಡುಗಳನ್ನು ಹಾಡಿ ಖುಷಿಪಟ್ಟರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಬಗೆ ಬಗೆಯ ಉಂಡಿಗಳನ್ನು ತಿಂದು ಖುಷಿಪಟ್ಟವು. ಬಳಿಕ ಎಲ್ಲರೂ ಸೇರಿ ಅಲ್ಲಿಯೇ ಮರಕ್ಕೆ ಕಟ್ಟಲಾಗಿದ್ದು ಜೋಕಾಲಿ ಆಡಿ ಖುಷಿಪಟ್ಟರು.

ಉಂಡಿಗಳಲ್ಲಿನ ವಿಶೇಷತೆಗಳೇನು?

ನಮ್ಮಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೆ ಒಂದು ಹಿನ್ನೆಲೆ ಇದ್ದೇ ಇರುತ್ತೆ. ಕೆಲವೊಂದು ಸಂದರ್ಭಗಳಲ್ಲಿ ವೈಜಾನಿಕ ಹಿನ್ನೆಲೆಯೂ ಇರುತ್ತೆ. ಈ ಉಂಡಿ ಹಬ್ಬದ ಬಗ್ಗೆ ಹೇಳೋದಾದರೆ, ವಾತಾವರಣದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಉಂಡೆಗಳನ್ನು ತಯಾರಿಸಲಾಗುತ್ತೆ. ಬಗೆ ಬಗೆಯ ಉಂಡೆಗಳನ್ನು ತಿನ್ನೋದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಹಿರಿಯರು ಇಂಥದ್ದೊಂದು ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.

ಉಂಡಿ ಹಬ್ಬದ ದಿನ ಬೆಳಿಗ್ಗೆ ಆರಂಭವಾಗುವ ಸಂಭ್ರಮ ಮಧ್ಯಾಹ್ನದವರೆಗೂ ನಡೆಯುತ್ತೆ. ಹಾಡು, ಕುಣಿತ, ಉಂಡೆಗಳ ರುಚಿ ಸವಿಯೋದೆಲ್ಲ ಮುಗಿಸಿದ ಬಳಿಕವಷ್ಟೇ ಮಹಿಳೆಯರೆಲ್ಲರೂ ಸೇರಿ ಊಟವನ್ನು ಮಾಡುತ್ತಾರೆ. ಮತ್ತೆ ಹಾಡು, ಮಸ್ತಿ, ಖುಷಿ, ಸಂಭ್ರಮ. ಬಳಿಕ ಸಂಜೆ ಹೊತ್ತಿಗೆ ಎಲ್ಲರೂ ಮನೆಗೆ ಹೋಗುತ್ತಾರೆ. ಒಟ್ಟಿನಲ್ಲಿ ಶ್ರಾವಣ ಮಾಸ ಜಿಟಿ ಜಿಟಿ ಮಳೆ, ತಂಪಾದ ವಾತಾವರಣದೊಂದಿಗೆ ಇಂಥ ಅನೇಕ ಬಗೆಯ ಹಬ್ಬಗಳನ್ನು ಹೊತ್ತು ತರುವುದೇ ಒಂದು ವಿಶೇಷ. ಕಳೆದ ಹಲವಾರು ವರ್ಷಗಳಿಂದ ಈ ಹಬ್ಬವನ್ನು ಜಾನಪದ ಸಂಶೋಧನಾ ಕೇಂದ್ರ ಆಚರಿಸಿಕೊಂಡು ಬಂದಿದ್ದು, ಸಂಪ್ರದಾಯಗಳನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸುತ್ತಿರುವುದಂತು ಸತ್ಯ.

ಇಂಥ ಹಬ್ಬಗಳಿಂದ ಸಂಪ್ರದಾಯವನ್ನು ಉಳಿಸುವ ಯತ್ನ – ವಿಶ್ವೇಶ್ವರಿ ಹಿರೇಮಠ

ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಜಾನಪದ ಸಂಶೋಧನಾ ಕೇಂದ್ರ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ಹಲವಾರು ವರ್ಷಗಳಿಂದ ನಮ್ಮ ಕೇಂದ್ರದ ವತಿಯಿಂದ ಇಂಥ ಹಲವಾರು ಹಬ್ಬಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಮುಂಚೆ ನನ್ನ ಪತಿ ಬಸಲಿಂಗಯ್ಯ ಹಿರೇಮಠ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಕಳೆದ ವರ್ಷ ಅವರು ಮೃತಪಟ್ಟರು. ಅವರ ಆಸೆಯನ್ನು ಮುಂದುವರೆಸಿಕೊಂಡು ಹೋಗಲು ನಾನು ಈ ಕೆಲಸವನ್ನು ಆರಂಭಿಸಿದ್ದೇನೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿ, ಜಾನಪದ ಆಚರಣೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವುಗಳ ಮಹತ್ವವನ್ನು ತಿಳಿಸಿಕೊಡಲು ಇಂಥ ಹಬ್ಬಗಳನ್ನು ಆಯೋಜಿಸುತ್ತಿದ್ದೇವೆ ಅನ್ನುತ್ತಾರೆ.

ಇನ್ನು ಹಬ್ಬದಲ್ಲಿ ಪಾಲ್ಗೊಂಡಿದ್ದ ಮಹಿಳೆ ನಂದಾ ಗುಳೇದಗುಡ್ಡ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿ, ಇಂಥದ್ದೊಂದು ಸಂಭ್ರಮದಲ್ಲಿ ಪಾಲ್ಗೊಂಡಿದ್ದು ನನಗೆ ಖುಷಿಯಾಗಿದೆ. ಪ್ರತಿವರ್ಷವೂ ನಾನು ತಪ್ಪದೇ ಈ ಹಬ್ಬದಲ್ಲಿ ಭಾಗವಹಿಸುತ್ತೇನೆ. ಈ ಹಬ್ಬಕ್ಕೆ ನಾನು ಬಗೆ ಬಗೆಯ ಉಂಡಿಗಳನ್ನು ಮಾಡಿಕೊಂಡು ಬಂದಿದ್ದೇನೆ. ಎಲ್ಲರೂ ಒಂದೆಡೆ ಸೇರಿ ಒಂದಿಡೀ ದಿನ ಸಂಭ್ರಮಿಸುವುದು ಸಂತಸದ ಸಂಗತಿಯೇ ಸರಿ. ಸಂಸಾರದ ನಿತ್ಯದ ಜಂಜಾಟಗಳ ನಡುವೆ ಇಂಥ ಹಬ್ಬಗಳು ಮಹಿಳೆಯರಿಗೆ ಜೀವನ ಸ್ಪೂರ್ತಿ ತುಂಬುವುದಲ್ಲದೇ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿತ್ತವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು