ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೆ ಗುಂಡಿನ ಸದ್ದು, ಭೂಮಿ ವಿವಾದಕ್ಕೆ ಗಾಳಿಯಲ್ಲಿ ಹಾರಿದ ಗುಂಡು, ಇಂಚಿಂಚು ಮಾಹಿತಿ ಇಲ್ಲಿದೆ

ಮುಂಬೈನಲ್ಲಿ ನೆಲೆಸಿರುವ ಸೈಟ್ ಮಾಲೀಕ ಸುಶಾಂತ್​​​​​​​​​ ಧಾರವಾಡದಲ್ಲಿ ಕೆಲ ಸ್ಥಳೀಯರಿಂದ ತಮ್ಮ ನಿವೇಶನ ಅತಿಕ್ರಮಣ ವಿಚಾರ ತಿಳಿದುಕೊಂಡಿದ್ದರು. ಅದರಿಂದ ಮಾಲೀಕ ಸುಶಾಂತ್​​​ ತಕ್ಷಣ ನಿವೇಶನದ ಸ್ಥಳ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಅತಿಕ್ರಮಣದಾರರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

Important Highlight‌
ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೆ ಗುಂಡಿನ ಸದ್ದು,  ಭೂಮಿ ವಿವಾದಕ್ಕೆ ಗಾಳಿಯಲ್ಲಿ ಹಾರಿದ ಗುಂಡು, ಇಂಚಿಂಚು ಮಾಹಿತಿ ಇಲ್ಲಿದೆ
ಭೂಮಿ ವಿವಾದಕ್ಕೆ ಗಾಳಿಯಲ್ಲಿ ಹಾರಿದ ಗುಂಡು
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on:Aug 23, 2023 | 3:44 PM

ಧಾರವಾಡ, ಆಗಸ್ಟ್​ 23: ಆಸ್ತಿ ಕಬಳಿಕೆಯ (Dharwad property) ಭೀತಿಯಿಂದ ವ್ಯಕ್ತಿಯೊಬ್ಬರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಧಾರವಾಡ ನಗರದ ಅತ್ತಕೊಳ್ಳ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನಿವೇಶನದ ಮಾಲೀಕ ಸುಶಾಂತ ಅಗರವಾಲ್‌​​​ ಎಂಬುವವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಿವೇಶನ ಅತಿಕ್ರಮಣದಾರರನ್ನು (trespassers) ಹೆದರಿಸಲು ಗಾಳಿಯಲ್ಲಿ ಗುಂಡು (firing) ಹಾರಿಸಿರುವುದಾಗಿ ತಿಳಿದುಬಂದಿದೆ.

ಸದ್ಯ ಮುಂಬೈನಲ್ಲಿ ನೆಲೆಸಿರುವ ಸೈಟ್ ಮಾಲೀಕ ಸುಶಾಂತ್​​​​​​​​​ ಅವರು ಕೆಲ ಸ್ಥಳೀಯರಿಂದ ನಿವೇಶನ ಅತಿಕ್ರಮಣ ವಿಚಾರ ತಿಳಿದುಕೊಂಡಿದ್ದರು. ಅದರಿಂದ ಮಾಲೀಕ ಸುಶಾಂತ್ ಅವರು​​​ ತಕ್ಷಣವೇ ನಿವೇಶನದ ಸ್ಥಳ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಅತಿಕ್ರಮಣದಾರರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿಷಯ ತಿಳಿದು ಧಾರವಾಡದ ವಿದ್ಯಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಿವೇಶನದ ಮಾಲೀಕ ಸುಶಾಂಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ ಮುಂಬೈ ಮಾಲೀಕ -ಸಂಪೂರ್ಣ ವರದಿ ಇಲ್ಲಿದೆ:

ಧಾರವಾಡ ನಗರದ ಅತ್ತಿಕೊಳ್ಳ ಬಡಾವಣೆಯ ಬಳಿಯ ಜಮೀನುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಲೆ ಬಾಳುತ್ತಿವೆ. ಅಲ್ಲಿನ ಸುಂದರ ಪರಿಸರವೇ ಇದಕ್ಕೆ ಕಾರಣ. ಅದರಲ್ಲೂ ಕರ್ನಾಟಕ ವಿಶ್ವವಿದ್ಯಾಲಯದಿಂದ ವಿನಯ ಡೈರಿ ಕಡೆಗೆ ಹೋಗುವಾಗ ಕಾಣುವ ಕಣಿವೆ ಪ್ರದೇಶ ಪರಿಸರ ಪ್ರಿಯರಿಗೆ ಅಚ್ಚುಮೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭವಾಗಿದೆ. ಅನೇಕರು ಈ ಪ್ರದೇಶದಲ್ಲಿ ಲೇಔಟ್ ಮಾಡುತ್ತಿದ್ದು, ಜನರು ಮುಗಿಬಿದ್ದು ನಿವೇಶನಗಳನ್ನು ಖರೀದಿಸುತ್ತಿದ್ದಾರೆ. ಇದೇ ಪ್ರದೇಶದಲ್ಲಿ ಮುಂಬೈ ಮೂಲದ ಸುಶಾಂತ್ ಅಗರ್ವಾಲ್ ಅನ್ನೋರಿಗೆ ಸೇರಿದ 5 ಎಕರೆ 30 ಗುಂಟೆ ಜಮೀನಿದೆ. ಸುಶಾಂತ್ ಈಗಾಗಲೇ ಈ ಜಮೀನಿಗೆ ಕಾಂಪೌಂಡ್ ಕೂಡ ನಿರ್ಮಿಸಿ, ಒಂದು ಫಾರ್ಮ್ ಹೌಸ್ ಕೂಡ ಕಟ್ಟಿಸಿದ್ದಾರೆ. ಆ ಕಟ್ಟಡದ ಹೊರ ಭಾಗದಲ್ಲಿ ಈ ಜಮೀನು ತಮಗೆ ಸೇರಿದ್ದು ಅಂತಾನೂ ಬೋರ್ಡ್ ಹಾಕಿದ್ದಾರೆ. ಇಂಥ ಭೂಮಿ ಮೇಲೆ ಅನೇಕರು ಮೊದಲಿನಿಂದಲೂ ಕಣ್ಣಿಟ್ಟಿದ್ದಾರೆ. ಕಣಿವೆಯ ಮೇಲ್ಭಾಗದಲ್ಲಿ ಬರೋ ಈ ಭೂಮಿಗೆ ಇದೀಗ ಬಂಗಾರದ ಬೆಲೆ ಇದೆ. ಹೀಗಾಗಿ ಆಗಾಗ ಈ ಭೂಮಿ ತಮಗೆ ಸೇರಿದ್ದು ಅಂತಾ ಅನೇಕರು ಜಗಳ ತೆಗೆದಿದ್ದೂ ಇದೆ.

ಇವತ್ತು ಕೂಡ ಅಂಥದ್ದೇ ಘಟನೆ ನಡೆದಿದೆ. ಪವನ್ ಕುಲಕರ್ಣಿ ಅನ್ನೋ ವ್ಯಕ್ತಿಯ ಜಮೀನು ಕೂಡ ಈ ಜಮೀನಿನ ಪಕ್ಕದಲ್ಲಿಯೇ ಇದೆ. ಇಬ್ಬರ ಮಧ್ಯೆ ಜಾಗೆಯ ಸಂಬಂಧ ವಿವಾದವಿದೆ. ಆಗಾಗ ಈ ಬಗ್ಗೆ ಇಬ್ಬರ ನಡುವೆ ತಿಕ್ಕಾಟವೂ ನಡೆದಿದೆ. ಇವತ್ತು ಮುಂಬೈನಿಂದ ಬಂದ ಸುಶಾಂತ್ ತಮ್ಮ ಜಮೀನಿಗೆ ಹೋದಾಗ ಅಲ್ಲಿಯೇ ಕೆಲವರು ಕೆಲಸ ಮಾಡುತ್ತಿದ್ದರಂತೆ. ಅವರನ್ನು ಅಲ್ಲಿಂದ ಹೋಗುವಂತೆ ಸುಶಾಂತ್ ಹೇಳಿದ್ದಾರೆ. ಈ ವೇಳೆ ಅವರು ತನ್ನತ್ತ ಬರುತ್ತಿದ್ದಾರೆ ಅಂತಾ ಭಾವಿಸಿದ ಸುಶಾಂತ್, ತನ್ನ ಬಳಿ ಇದ್ದ ಲೈಸೆನ್ಸ್ಡ್ ರಿವಾಲ್ವರ್ ನಿಂದ ನೆಲದತ್ತ ಫೈರ್ ಮಾಡಿದ್ದಾರೆ. ಇದರಿಂದ ಭಯಗೊಂಡ ಅವರೆಲ್ಲಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಘಟನೆ ನಡೆದ ಕೂಡಲೇ ವಿದ್ಯಾಗಿರಿ ಪೊಲೀಸರು ಸ್ಥಳಕ್ಕೆ ಹೋಗಿ ರಿವಾಲ್ವರ್ ಸಮೇತ ಸುಶಾಂತ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಪವನ ಕುಲಕರ್ಣಿಯನ್ನು ಕೂಡ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಸುಶಾಂತ್ನನ್ನು ಸ್ಥಳಕ್ಕೆ ಕರೆದೊಯ್ದು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅಚ್ಚರಿ ಅಂದರೆ ಈಗಾಗಲೇ ಸುಶಾಂತ್ ತಮ್ಮ ಜಮೀನಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದರೂ ಅನೇಕರು ಈ ಜಮೀನನ್ನು ವಶಕ್ಕೆ ಪಡೆಯಲು ಯತ್ನಿಸುತ್ತಲೇ ಇದ್ದಾರೆ. ಇವತ್ತು ಕೂಡ ಅಂಥದ್ದೇ ಘಟನೆ ನಡೆದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮರಕ್ಷಣೆಗೆ ಅಂತಾ ಸುಶಾಂತ್ ತಮ್ಮ ಲೈಸೆನ್ಸ್ಡ್ ರಿವಾಲ್ವರ್ನಿಂದ ಫೈರ್ ಮಾಡಿದ್ದಾರೆ. ಸಮಾಧಾನದ ಸಂಗತಿ ಅಂದರೆ ಆ ಗುಂಡು ಯಾರಿಗೂ ತಗುಲಿಲ್ಲ ಅನ್ನೋದು. ಫೈರ್ ಆಗುತ್ತಿದ್ದಂತೆಯೇ ಅಲ್ಲಿದ್ದವರೆಲ್ಲ ಅಲ್ಲಿಂದ ಕಾಲು ಕಿತ್ತಿದ್ದಾರೆ.

ಈ ಮಧ್ಯೆ ಮತ್ತೊಂದು ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ. ಈ ಪ್ರಕರಣದ ಹಿಂದೆ ಹಲವಾರು ಜನರು ಇದ್ದಾರೆ. ಅಲ್ಲದೇ ಘಟನೆಯ ವೇಳೆ ಅಲ್ಲದೇ ಅಲ್ಲಿಗೆ ಬಂದವರು ಈ ಹಿಂದೆ ಅನೇಕ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾದವರು ಎನ್ನಲಾಗಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೀಗ ಇಬ್ಬರ ವಿಚಾರಣೆಯನ್ನೂ ನಡೆಸಿರೋ ಪೊಲೀಸರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇನ್ನು ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್, ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಅತಿಕೊಳ್ಳದಲ್ಲಿ ಸುಶಾಂತ ಅಗರವಾಲ್ ಅನ್ನೋರು ಗಾಳಿಯಲ್ಲಿ ಗುಂಡು ಹಾರಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಸುಶಾಂತ ಅಗರವಾಲ್ ಮತ್ತು ಪವನ ಕುಲಕರ್ಣಿ ಎಂಬುವವರ ಮಧ್ಯೆ ಭೂ ವಿವಾದ ಇದೆ. ಈ ಸಂಬಂಧ ಇವತ್ತು ಇಬ್ಬರ ಮಧ್ಯೆ ಮಾತು ನಡೆದಿತ್ತು. ಕುಲಕರ್ಣಿ ಕಡೆಯವರು ಅಲ್ಲಿ ಕೆಲಸ ಮಾಡುತ್ತಿದ್ದರಂತೆ.

ಸುಶಾಂತ ಅವರಿಗೆ ಕೆಲಸ ಮಾಡಬೇಡಿ ಎಂದಿದ್ದಾರೆ. ಆಗ ಅವರು ಸುಶಾಂತ ಸಮೀಪಕ್ಕೆ ಬಂದಿದ್ದಾರೆ. ಆಗ ಸುಶಾಂತ ಹೆದರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇಬ್ಬರ ಜಮೀನು ಅಕ್ಕಪಕ್ಕದಲ್ಲಿಯೇ ಇದ್ದು, ಇಬ್ಬರ ಮಧ್ಯೆ ಜಮೀನಿನ ವಿವಾದ ಇದೆ. ಭಯದಲ್ಲಿ ಸುಶಾಂತ್ ಫೈರ್ ಮಾಡಿದ್ದಾನೆ.ಇದೀಗ ವಿಚಾರಣೆ ನಡೆದಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ ಅನ್ನುತ್ತಾರೆ.

ಧಾರವಾಡ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Wed, 23 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು