ವಿಕ್ರಂ ಲ್ಯಾಂಡರ್ ಚಂದ್ರನಲ್ಲಿಳಿಯುವ ಹೊತ್ತಲ್ಲೇ ಹುಬ್ಬಳ್ಳಿ-ಧಾರವಾಡ ಪೋಲಿಸರು ಲ್ಯಾಂಡ್​ ಮಾಡಿಸಿದ್ದೇನು? ಇಲ್ಲಿದೆ ನೋಡಿ

|

Updated on: Aug 23, 2023 | 8:23 PM

ಇಸ್ರೋ ವಿಜ್ಞಾನಿಗಳು ವಿಕ್ರಮ್​ ಲ್ಯಾಡರ್​ನ್ನು ಚಂದ್ರನ ಮೇಲೆ ಲ್ಯಾಂಡ್​ ಮಾಡಿಸಿದರೇ, ಇತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬೈಕ್​ನ ಚಕ್ರವನ್ನು ಮೇಲೆತ್ತಿ ವೀಲಿಂಗ್​ ಮಾಡುತ್ತಿದ್ದವನನ್ನು ಹಿಡಿದು ನೆಲಕ್ಕೆ ಲ್ಯಾಂಡ್​ ಮಾಡಿಸಿದ ಘಟನೆಯನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ವಿಭಿನ್ನವಾಗಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ವಿಕ್ರಂ ಲ್ಯಾಂಡರ್ ಚಂದ್ರನಲ್ಲಿಳಿಯುವ ಹೊತ್ತಲ್ಲೇ ಹುಬ್ಬಳ್ಳಿ-ಧಾರವಾಡ ಪೋಲಿಸರು ಲ್ಯಾಂಡ್​ ಮಾಡಿಸಿದ್ದೇನು? ಇಲ್ಲಿದೆ ನೋಡಿ
ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್​
Follow us on

ಹುಬ್ಬಳ್ಳಿ, ಆ.23: ಇಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್​ ಆಗಿದೆ. ಈ ಮೂಲಕ ಭಾರತ ಮತ್ತೊಂದು ಮೈಲುಗಲ್ಲು ತಲುಪಿದೆ. ಅದರಂತೆ ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೂಡ ವಾಹನ ಸವಾರರಿಗೆ ಕಿರಿಕಿರಿ ಕೊಡುತ್ತ ಬೈಕ್ ವೀಲಿಂಗ್​ ಮಾಡುತ್ತಿದ್ದ​ ಪುಂಡನೊಬ್ಬನನ್ನು ಹಿಡಿದು ನೆಲಕ್ಕೆ ಲ್ಯಾಂಡ್​ ಮಾಡಿದ್ದಾರೆ. ಹೌದು, ಇಸ್ರೋ ವಿಜ್ಞಾನಿಗಳು ವಿಕ್ರಮ್​ ಲ್ಯಾಡರ್​ನ್ನು ಚಂದ್ರನ ಮೇಲೆ ಲ್ಯಾಂಡ್​ ಮಾಡಿಸಿದರೇ, ಇತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು (Hubli-Dharwad City Police) ಬೈಕ್​ನ ಚಕ್ರವನ್ನು ಮೇಲೆತ್ತಿ ವೀಲಿಂಗ್​ ಮಾಡುತ್ತಿದ್ದವನನ್ನು ಹಿಡಿದು ನೆಲಕ್ಕೆ ಲ್ಯಾಂಡ್​ ಮಾಡಿಸಿದ ಘಟನೆಯನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ವಿಭಿನ್ನವಾಗಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್​ ಟ್ವೀಟರ್​ ಖಾತೆಯಲ್ಲಿ​‘ ಆವತ್ತು ಎರಡು ಘಟನೆಗಳು ನಡೆದವು. ಒಂದು ‘ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು’ ಇನ್ನೊಂದು ಬೈಕ್​ನ ಚಕ್ರವನ್ನು ಮೇಲೆತ್ತಿ ವೀಲಿಂಗ್​ ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು. ಎಂದು ಹಾಸ್ಯಾಸ್ಪದವಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಯಶಸ್ವೀ ಲ್ಯಾಂಡಿಂಗ್, ಬೆಂಗಳೂರಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಇದೀಗ ಪೊಲೀಸರು ಹಂಚಿಕೊಂಡ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಓರ್ವರು ‘ಈಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಗಿಚ್ಚಿ ಡೈಲಾಗ್​ ಬರಿಯುತ್ತಿದ್ದಾರೆಂದರೆ, ಮತ್ತೊರ್ವರು ಒಂದು ಕಡೆ ನಮ್ಮ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್​ನ್ನು ಚಂದ್ರನ ಮೇಲೆ ಇಳಿಸುವುದರಲ್ಲಿ ನಿರತರಾಗಿದ್ದಾರೆ. ಇನ್ನೊಂದು ಕಡೆ ನಮ್ಮ ಪೊಲೀಸರು ವಾಹನಗಳನ್ನು ಮನಸೋ ಇಚ್ಛೆ ಉಪಟಳ ಮಾಡುವವರಿಗೆ ಸರಿಯಾಗಿ ಕೆಳಗೆ ಇರಿಸುತ್ತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Wed, 23 August 23