ಮಂಗಳೂರು, ಆಗಸ್ಟ್ 24: ಪೊಲೀಸ್ ಠಾಣೆ ಬಳಿಯೇ ಯುವತಿಯ ಕತ್ತು ಸೀಳಿ (stabbed) ಹತ್ಯೆ ಮಾಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಠಾಣೆ ಬಳಿ ನಡೆದಿದೆ. ಗೌರಿ ಮೃತ ಯುವತಿ. ಗೌರಿ ಕುತ್ತಿಗೆಗೆ 4 ಬಾರಿ ಚೂರಿಯಿಂದ ಇರಿದು ಪರಾರಿ ಆಗಿದ್ದ ಪದ್ಮರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ. ಪುತ್ತೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ರಾಜೀವ ಗಾಂಧಿ ಸಂಕೀರ್ಣದ ಎದುರು ನೈತಿಕ ಪೊಲೀಸ್ ಗಿರಿ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಬಂಧಿತರು. ವಿದ್ಯಾರ್ಥಿನಿ ಜೊತೆ ಮಾತನಾಡಿದ ಭಿನ್ನ ಜಾತಿಯ ವಿದ್ಯಾರ್ಥಿಗೆ ಗುಂಪೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿರುವಂತಹ ಘಟನೆ ಆ.22 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಪ್ಪಳ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ಭರ್ಜರಿ ದಾಳಿ, ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದವರು ಅರೆಸ್ಟ್
ಮೂಡುಬಿದಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿಗೆ ಹೋಗಲು ಬಂದಿದ್ದಳು. ಅದೇ ಸಮಯದಲ್ಲಿ ಆಗಮಿಸಿದ್ದ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ ಹುಡುಗಿಯೊಂದಿಗೆ ಮಾತನಾಡಿದ್ದಾನೆ. ಯುವತಿ ಬಸ್ ಹತ್ತಿದ ಬಳಿಕ ವಿದ್ಯಾರ್ಥಿಗೆ ಗುಂಪಿನಿಂದ ಹಲ್ಲೆ ಮಾಡಲಾಗಿದೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪುತ್ತೂರು: ಸಾರಂಗವನ್ನು ಗುಂಡಿಕ್ಕಿ ಕೊಂದಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಉಪ್ಪಿನಂಗಡಿ ಸಮೀಪದ ಮೀಸಲು ಅರಣ್ಯದಲ್ಲಿ ಘಟನೆ ನಡೆದಿದ್ದು, ಮೃತ ಸಾರಂಗವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸುದೇಶ, ಪುನಿತ್ ಮತ್ತು ಕೋಟಿಯಪ್ಪ ಗೌಡ ಬಂಧಿತರು.
ಇದನ್ನೂ ಓದಿ: ವಿಜಯಪುರ: ಕ್ಯಾಂಟರ್ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು
ಖಚಿತ ಮಾಹಿತಿ ಆಧರಿಸಿ ಉಪ ವಲಯಾರಣ್ಯಾಧಿಕಾರಿ ಲೋಕೇಶ್, ಅಶೋಕ್, ಅರಣ್ಯ ಸಿಬ್ಬಂದಿ ವಿನಯ ಚಂದ್ರ ಮತ್ತು ಚಾಲಕ ಕಿಶೋರ್ ಕಪಿಲಾ ನದಿಯ ಬಳಿ ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಂಧಿತ ಆರೋಪಿಗಳು ಸಾರಂಗಕ್ಕೆ ಗುಂಡು ಹಾರಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬರುವಷ್ಟರಲ್ಲಿ ಸಾರಂಗ ಮೃತಪಟ್ಟಿದ್ದು, ಮೂವರನ್ನು ಬಂಧಿಸಲಾಗಿದೆ.
ಸದ್ಯ ಆರೋಪಿಗಳನ್ನು ವಲಯಾಧಿಕಾರಿ ಜಯಪ್ರಕಾಶ್ ಅವರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:14 pm, Thu, 24 August 23