ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ವಿದ್ಯಾರ್ಥಿನಿ ಜತೆ ಮಾತನಾಡಿದಕ್ಕೆ ಯುವಕನ ಮೇಲೆ ಹಲ್ಲೆ, ಮೂವರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ ಪ್ರಕರಣ ವರದಿಯಾಗಿದೆ. ವಿದ್ಯಾರ್ಥಿನಿ ಜೊತೆ ಮಾತನಾಡಿದಕ್ಕೆ ಅನ್ಯಧರ್ಮಿಯ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ಮೂಡಬಿದ್ರೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮಂಗಳೂರು, (ಆಗಸ್ಟ್ 25): ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಖಡಕ್ ಎಚ್ಚರಿಕೆ ಕೊಟ್ಟರೂ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ(moral police) ಪ್ರಕರಣಗಳು ಬೆಳಕಿಗೆ ಬರುತ್ತಲ್ಲೇ ಇವೆ. ಇದೀಗ ಮಂಗಳೂರಿನ (Mangaluru) ಮೂಡಬಿದ್ರೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ವಿದ್ಯಾರ್ಥಿನಿ ಜೊತೆ ಮಾತನಾಡಿದ ಅನ್ಯಧರ್ಮಿಯ ವಿದ್ಯಾರ್ಥಿ (Student) ಮೇಲೆ ಗುಂವೊಂದು ಹಲ್ಲೆ ಮಾಡಿದೆ. ಮೂಡಬಿದ್ರೆ ತಾಲೂಕಿನ ರಾಜೀವ ಗಾಂಧಿ ಸಂಕೀರ್ಣದ ಎದುರು ನಡೆದಿದ್ದ ಘಟನೆ ನಡೆದಿದ್ದು, ಈ ಸಂಬಂಧ ಮೂಡಬಿದ್ರೆ(Mudbidri) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಬಂಧಿತರು.
ಮೂಡಬಿದ್ರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ಆಗಸ್ಟ್ 22ರಂದು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿಗೆ ಹೋಗಲು ಬಂದಿದ್ದಳು. ಅದೇ ಸಮಯದಲ್ಲಿ ಆಗಮಿಸಿದ್ದ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿ ಹುಡುಗಿಯೊಂದಿಗೆ ಮಾತನಾಡಿದ್ದಾನೆ. ಇದನ್ನು ನೋಡಿಕೊಂಡಿದ್ದ ಗುಂಪು, ಯುವತಿ ಬಸ್ ಹತ್ತಿದ ಬಳಿಕ ವಿದ್ಯಾರ್ಥಿ ಬಳಿ ಬಂದು ಹಲ್ಲೆ ನಡೆಸಿದೆ. ಈ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮನೆ ಕಳ್ಳತನಕ್ಕೆ ಬಂದು ಇಬ್ಬರು ಮಹಿಳೆಯರ ಮೇಲೆ ಹಲ್ಲೆ
ಮಂಗಳೂರು,(ಆಗಸ್ಟ್ 24): ಕಳ್ಳತನಕ್ಕಾಗಿ ಮನೆಗೆ ನುಗಿದ ದುಷ್ಕರ್ಮಿ ಒಬ್ಬ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಪುತ್ತೂರಿನ ( Putturu) ಬಡಗನ್ನೂರು ತೋಟದ ಮನೆಯಲ್ಲಿ ನಡೆದಿದೆ. ಕಳ್ಳತನಕ್ಕೆ ನುಗಿದ್ದ ಖದೀಮನನ್ನು ಹಿಡಿಯಲು ಸುರೇಖಾ ಹಾಗೂ ಗಿರಿಜಾ ಯತ್ನಿಸಿದ್ದಾರೆ. ಆ ವೇಳೆ ಕಳ್ಳ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ಅಲ್ಲದೇ ಗಿರಿಜಾಳ ಕುತ್ತಿಗೆಗೆ ಟವೆಲ್ನಿಂದ ಬಿಗಿದು ಪರಾರಿಯಾಗಿದ್ದಾನೆ. ಕೂಡಲೇ ಪಕ್ಕದ ಮನೆಯ ಗಂಗಾಧರ ಎನ್ನುವವರು ಗಮನಿಸಿ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗಂಗಾಧರ, ಗಿರಿಜಾರವರು ಕುತ್ತಿಗೆಗೆ ಟವೇಲ್ ಬಿಗಿದ ರೀತಿಯಲ್ಲಿ ಬಿದ್ದಿದ್ದರು, ಇನ್ನೋರ್ವ ಮಹಿಳೆ ಸುರೇಖಾ ಸಹ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಶೀಘ್ರವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಸುರೇಖಾರವರ ಮನೆಯವರಾದ ರವಿಚಂದ್ರನ್ ಅವರಿಗೆ ವಿಷಯ ತಿಳಿಸಲಾಯ್ತು ಎಂದರು.
ಕಳ್ಳತನಕ್ಕೆ ಯತ್ನಿಸಿದ್ದಲ್ಲದೆ ಮಹಿಳೆಯ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಸುರೇಶ್ ನಾಯ್ಕ್ ಎನ್ನುವವರ ವಿರುದ್ಧ ಐಪಿಸಿ ಸೆಕ್ಷನ್ 394ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:02 pm, Thu, 24 August 23