ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ ಮಂಗಳೂರು ಪೊಲೀಸರು: 22 ಪೆಡ್ಲರ್ಗಳ ಬಂಧನ
ರಾಜ್ಯದಲ್ಲಿನ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಬೇರು ಸಮೇತ ಕೀಳುತ್ತೇವೆ. ಮಂಗಳೂರನ್ನು ಡ್ರಗ್ಸ್ ಫ್ರೀ ನಗರವನ್ನಾಗಿ ಮಾಡುತ್ತೇವೆ ಎಂದು ಇತ್ತೀಚಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದರು. ಈ ಕುರಿತು ಪೊಲೀಸ್ ಇಲಾಖೆಗೆ ಸೂಚನೆ ಕೂಡ ನೀಡಿದ್ದರು. ಗೃಹ ಸಚಿವರ ಸೂಚನೆ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಪೊಲೀಸರು ಸಮರ ಸಾರಿದ್ದಾರೆ.
ಮಂಗಳೂರು: ರಾಜ್ಯದಲ್ಲಿನ ಡ್ರಗ್ಸ್ (Drugs) ದಂಧೆಯನ್ನು ಸಂಪೂರ್ಣವಾಗಿ ಬೇರು ಸಮೇತ ಕೀಳುತ್ತೇವೆ. ಮಂಗಳೂರನ್ನು (Mangaluru) ಡ್ರಗ್ಸ್ ಫ್ರೀ ನಗರವನ್ನಾಗಿ ಮಾಡುತ್ತೇವೆ ಎಂದು ಇತ್ತೀಚಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parameshwara) ಅವರು ಹೇಳಿದ್ದರು. ಈ ಕುರಿತು ಪೊಲೀಸ್ ಇಲಾಖೆಗೆ ಸೂಚನೆ ಕೂಡ ನೀಡಿದ್ದರು. ಗೃಹ ಸಚಿವರ ಸೂಚನೆ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಪೊಲೀಸರು ಸಮರ ಸಾರಿದ್ದಾರೆ. ಪೊಲೀಸರು 26 ದಿನಗಳ ಅಂತರದಲ್ಲೇ 40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ನಿಷೇಧಿತ ಎಮ್ಡಿಎಮ್ಎ ಡ್ರಗ್ ಪಾಲು ಹೆಚ್ಚಾಗಿದೆ.
ಹಾಗೇ ಪೊಲೀಸರು ಹತ್ತು ಪ್ರಕರಣದಲ್ಲಿ ಒಟ್ಟು 22 ಜನ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಎಮ್ಡಿಎಮ್ಎ ಡ್ರಗ್ ಖರೀದಿಸಿ ತರುತ್ತಿದ್ದರು. ಬೆಂಗಳೂರಿನಿಂದ ತಂದು ಕರಾವಳಿ, ಕೇರಳ ಭಾಗದಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಡ್ರಗ್ಸ್ ಜಾಲದ ಮೂಲ ಬೆನ್ನತ್ತಿದ್ದು, ಕಿಂಗ್ ಪಿನ್ಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗಾಂಜಾ ಮತ್ತಲ್ಲಿ ದಾಂಧಲೆ ಮಾಡುತ್ತಿದ್ದ ಯುವಕನ ಬಂಧನ
ಮಂಗಳೂರು: ಗಾಂಜಾ ನಶೆಯಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ನಾಟೆಕಲ್ ಜಂಕ್ಷನ್ ಬಳಿ ಚೂರಿ ಹಿಡಿದು ರಸ್ತೆ ಮಧ್ಯೆ ಧಾಂದಲೆ ಮಾಡುತ್ತಿದ್ದ ಯುವಕನನ್ನು ಸಿನಿಮಿಯ ರೀತಿಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್ (24) ಬಂಧಿತ ಆರೋಪಿ.
ಅಬ್ಬೂಬಕ್ಕರ್ ಸಿದ್ಧೀಕ್ ಗಾಂಜಾ ದೊಂದಿಗೆ ಇತರ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ನಾಟೆಕಲ್ ರಸ್ತೆಯ ಡಿವೈಡರ್ ಮೇಲೆ ನಿಂತು ಜನರಿಗೆ ಚೂರಿ ತೋರಿಸಿ ಬೆದರಿಕೆ ಹಾಕುತ್ತಿದ್ದನು. ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪೊಲೀಸ್ ಹಾಗೂ RAW ಅಧಿಕಾರಿ ಎಂದು ಕಾಲೇಜಿನಲ್ಲಿ ಬಿಲ್ಡಪ್ ಕೊಡ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್
ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನ ಮನ ಒಲಿಸಲು ಯತ್ನಿಸಿದ್ದಾರೆ. ಆದರೆ ಅಬ್ಬೂಬಕ್ಕರ್ ಸಿದ್ದೀಕ್ ಪೊಲೀಸರ ಮಾತಿಗೆ ಬಗ್ಗಿಲ್ಲ. ಈ ವೇಳೆ ಪೊಲೀಸರು ಚಾಣಾಕ್ಷತನ ಪ್ರದರ್ಶಿಸಿದ್ದಾರೆ. ಅಬ್ಬೂಬಕ್ಕರ್ ಸಿದ್ಧೀಕ್ ಮುಂದೆ ಅಣತೆ ದೂರದಲ್ಲಿ ನಿಂತು ಕೆಲ ಪೊಲೀಸರು ಆತನನ್ನು ಮಾತನಾಡಿಸಲು ಆರಂಭಿಸಿದ್ದಾರೆ.
ಈ ವೇಳೆ ಸಿವಿಲ್ ಡ್ರೆಸ್ನಲ್ಲಿದ್ದ ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಸಂತೋಷ್ ಅಬ್ಬೂಬಕ್ಕರ್ ಸಿದ್ಧೀಕ್ಗೆ ತಿಳಿಯದಂತೆ ಆತನ ಹಿಂದೆ ಹೋಗಿ ಅಬ್ಬೂಬಕ್ಕರ್ ಸಿದ್ಧೀಕ್ಯ ಎರಡು ತೋಳುಗಳಲ್ಲಿ ಕೈ ಹಾಕಿ ಲಾಕ್ ಮಾಡಿದ್ದಾರೆ. ನಂತರ ಆತನನ್ನು ಪೊಲೀಸ್ ವಾಹನದಲ್ಲಿ ಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಸಂತೋಷ್ ಅವರ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನು ಪೊಲೀಸರ ಕಾರ್ಯಾಚರಣೆ ಮೊಬೈಲ್ನಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Mon, 21 August 23