ಮಂಗಳೂರಿನಲ್ಲಿ ನಾಗಬನ ಅಪವಿತ್ರಗೊಳಿಸಿದ್ದಕ್ಕೆ ವ್ಯಕ್ತಿ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ; ಮೂವರ ಬಂಧನ

Mangalore Crime News; ಕಾವೂರಿನಲ್ಲಿರುವ ಡಾ. ಎಂವಿ ಶೆಟ್ಟಿ ವಾಕ್ ಮತ್ತು ಶ್ರವಣ ಕಾಲೇಜಿನ ಬಳಿ ಆಗಸ್ಟ್ 20ರ ಭಾನುವಾರ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿತ್ತು. 27 ವರ್ಷದ ಸಂತ್ರಸ್ತನನ್ನು ಸ್ಕೂಟರ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಕಾಲೇಜು ಬಳಿಯ ಸೇತುವೆಯ ಪಕ್ಕದ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದರು.

Important Highlight‌
ಮಂಗಳೂರಿನಲ್ಲಿ ನಾಗಬನ ಅಪವಿತ್ರಗೊಳಿಸಿದ್ದಕ್ಕೆ ವ್ಯಕ್ತಿ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ; ಮೂವರ ಬಂಧನ
ಆರೋಪಿ ಚರಣ್ ಹಾಗೂ ಹಲ್ಲೆಗೆ ಬಳಸಿದ ತಲವಾರ್
Follow us
Prajwal D'Souza
| Updated By: ಗಣಪತಿ ಶರ್ಮ

Updated on:Aug 22, 2023 | 4:29 PM

ಮಂಗಳೂರು, ಆಗಸ್ಟ್ 22: ನಾಗಬನ ಅಪವಿತ್ರಗೊಳಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಮಂಗಳೂರು ಪೊಲೀಸರು (Mangalore Police) ಬಂಧಿಸಿದ್ದಾರೆ. ಮೂವರು ಶಂಕಿತ ಆರೋಪಿಗಳಾದ ಚರಣ್ ರಾಜ್ ಅಲಿಯಾಸ್ ಚರಣ್ (23), ಕುಳಾಯಿಯ ಸುಮಂತ್ ಬರ್ಮನ್ (24) ಮತ್ತು ಕೋಡಿಕಲ್‌ನ ಅವಿನಾಶ್ (24) ಅನ್ನು ದಾಳಿ ನಡೆದ 24 ಗಂಟೆಗಳ ಒಳಗಾಗಿ ಬಂಧಿಸಲಾಗಿದೆ. ಕಾವೂರಿನಲ್ಲಿರುವ ಡಾ. ಎಂವಿ ಶೆಟ್ಟಿ ವಾಕ್ ಮತ್ತು ಶ್ರವಣ ಕಾಲೇಜಿನ ಬಳಿ ಆಗಸ್ಟ್ 20ರ ಭಾನುವಾರ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿತ್ತು. 27 ವರ್ಷದ ಸಂತ್ರಸ್ತನನ್ನು ಸ್ಕೂಟರ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಕಾಲೇಜು ಬಳಿಯ ಸೇತುವೆಯ ಪಕ್ಕದ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.

ಚರಣ್ ತನ್ನ ಬಳಿಗೆ ಬಂದು, ‘ನೀನು ನಾಗಬನವನ್ನು ಅಪವಿತ್ರಗೊಳಿಸಿದ್ದಿ’ ಎಂದು ಆರೋಪಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದಾಳಿಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.

ನನ್ನನ್ನು ಕೊಲ್ಲುವ ಉದ್ದೇಶದಿಂದ ಚರಣ್ ನನ್ನ ಮೇಲೆ ಸುಮಾರು ಎರಡು ಅಡಿ ಉದ್ದದ ತಲವಾರನ್ನು ಬೀಸಿದ್ದ ಎಂದು ಸಂತ್ರಸ್ತ ವ್ಯಕ್ತಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವುದು ‘ನ್ಯೂಸ್ 9’ಗೆ ತಿಳಿದುಬಂದಿದೆ.

‘ಚರಣ್ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಅಷ್ಟರಲ್ಲಿ ಅವಿನಾಶ್ ಕಲ್ಲು ತೂರಾಟ ನಡೆಸಿದ್ದು, ಅದು ನನ್ನ ಕಣ್ಣಿಗೆ ಬಡಿದು ನೋವುಂಟು ಮಾಡಿದೆ. ಅವರು ಸುಮಾರು 200 ಮೀಟರ್‌ಗಳಷ್ಟು ದೂರ ಸ್ಕೂಟರ್‌ನಲ್ಲಿ ನನ್ನನ್ನು ಹಿಂಬಾಲಿಸಿದರೂ, ನಾನು ಹೇಗಾದರೂ ಅವರನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾವೂರು ಪೊಲೀಸರು ಮೂವರನ್ನು ಬಂಧಿಸಿ, ಸೆಕ್ಷನ್ 341 (ತಪ್ಪು ನಡೆಗೆ ಶಿಕ್ಷೆ), 323 (ಸ್ವಯಂಪ್ರೇರಿತವಾಗಿ ದಾಳಿ ನಡೆಸುವುದಕ್ಕೆ ನೀಡಲಾಗುವ ಶಿಕ್ಷೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 307 (ಕೊಲೆಗೆ ಯತ್ನ), 506 (ದಂಡನೆಗಾಗಿ ಶಿಕ್ಷೆ) ಕ್ರಿಮಿನಲ್ ಬೆದರಿಕೆ) ಮತ್ತು ಭಾರತೀಯ ದಂಡ ಸಂಹಿತೆಯ (IPC) ಮತ್ತು ಶಸ್ತ್ರಾಸ್ತ್ರ ಕಾಯಿದೆಯ 25 (ಯಾವುದೇ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅಥವಾ ಒಯ್ಯುವುದು) 149 (ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧದ ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ತಪ್ಪಿತಸ್ಥರು) ಅಡಿ ಪ್ರಕರಣ ದಾಖಲಿಸಲಾಗಿದೆ.

ಬಂಧನವನ್ನು ಖಚಿತಪಡಿಸಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಆರೋಪಿಗಳ ಉದ್ದೇಶವು ಭಯವನ್ನು ಸೃಷ್ಟಿಸುವುದಾಗಿತ್ತು. ಶಂಕಿತ ಆರೋಪಿಗಳಲ್ಲಿ ಒಬ್ಬನಾದ ಚರಣ್ ಒಬ್ಬ ರೌಡಿ ಶೀಟರ್ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆ ಸ್ನಾನಕ್ಕೆ ಹೋಗುವುದನ್ನ ಗಮನಿಸಿ ಬಾತ್​​ರೂಮ್​ಗೆ ಹೋಗಿ ಬೆತ್ತಲಾಗಿ ನಿಂತ ಯುವಕ, ಮುಂದೇನಾಯ್ತು?

ಚರಣ್, ಬರ್ಮನ್ ಮತ್ತು ಅವಿನಾಶ್ ವಿರುದ್ಧ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಅವಿನಾಶ್ ವಿರುದ್ಧ ಉರ್ವ ಪೊಲೀಸರು ಈಗಾಗಲೇ ಬಂಧನಕ್ಕೆ ಆದೇಶವನ್ನೂ ಹೊರಡಿಸಿದ್ದರು.

ಮೂವರನ್ನೂ ಆಯುಧ ಸಹಿತ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Tue, 22 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು