ಮಂಗಳೂರಿನಲ್ಲಿ 2.70 ಲಕ್ಷ ಮೌಲ್ಯದ ಇ-ಸಿಗರೇಟ್​​ಗಳು ಜಪ್ತಿ; ನಾಲ್ವರ ಬಂಧನ

| Updated By: Kiran Hanumant Madar

Updated on: Aug 22, 2023 | 7:57 PM

ನಿಷೇಧಿತ ಇ-ಸಿಗರೇಟ್​ಗಳನ್ನು ಮಾರಾಟ ಮಾಡುತ್ತಿದ್ದ ಕಾಂಪ್ಲೆಕ್ಸ್ ಅಂಗಡಿಗಳ ಮೇಲೆ ಬರ್ಕೆ ಠಾಣೆ ಪೊಲೀಸರು ಇಂದು(ಆ.22) ದಾಳಿ ಮಾಡಿದ್ದರು. ಈ ವೇಳೆ 2.70 ಲಕ್ಷ ರೂ. ಮೌಲ್ಯದ ಇ-ಸಿಗರೇಟ್​ಗಳು ಪತ್ತೆಯಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ 2.70 ಲಕ್ಷ ಮೌಲ್ಯದ ಇ-ಸಿಗರೇಟ್​​ಗಳು ಜಪ್ತಿ; ನಾಲ್ವರ ಬಂಧನ
ಇ-ಸಿಗರೇಟ್​​
Follow us on

ದಕ್ಷಿಣ ಕನ್ನಡ, ಆ.22: ಜಿಲ್ಲೆಯ ಮಂಗಳೂರಿನ(Mangalore) ಲಾಲ್​ಬಾಗ್ ಬಳಿಯ ಕಾಂಪ್ಲೆಕ್ಸ್ ಅಂಗಡಿಗಳ ಮೇಲೆ ಬರ್ಕೆ ಠಾಣೆ ಪೊಲೀಸರು ಇಂದು(ಆ.22) ದಾಳಿ ಮಾಡಿದ್ದರು. ಈ ವೇಳೆ 2.70 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ ಮತ್ತು ಇ-ಸಿಗರೇಟ್​ಗಳು (E-Cigarettes)
ಪತ್ತೆಯಾಗಿದೆ. ಈ ಹಿನ್ನಲೆ ಮಂಗಳೂರಿನ ಮಣ್ಣಗುಡ್ಡೆಯ ಸ್ವಾತಿ(26), ಶಿವಕುಮಾರ್(34), ಕುತ್ತಾರು ಪದವಿನ ಹಸನ್ ಶರೀಫ್(50) ಹಾಗೂ ರೆಹಮತುಲ್ಲಾ(45) ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್‌ಟಿಐ ಕಾರ್ಯಕರ್ತನ ಮೇಲೆ ದೂರು ಪ್ರಕರಣ; ಎಫ್‌ಐಆರ್ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ

ಧಾರವಾಡ: ಆರ್‌ಟಿಐ ಕಾರ್ಯಕರ್ತನ ಮೇಲೆ ಎಫ್‌ಐಆರ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ. ಗದಗ ಆರ್‌ಟಿಐ ಕಾರ್ಯಕರ್ತ ನಾಗರಾಜ ಕರೆಣ್ಣವರ ಮೇಲೆ ದೂರು ದಾಖಲಾಗಿತ್ತು. ಇತ ಗದಗ ಕೃಷಿ ಇಲಾಖೆಯಲ್ಲಿ ಮಾಹಿತಿ ಕೇಳಿದ್ದ. ಇದಕ್ಕೆ ನಾಗರಾಜ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂದು ಕೃಷಿ ಇಲಾಖೆ ಅಧಿಕಾರಿಯಿಂದ ಗದಗ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ:ಮಂಗಳೂರು: ಗಾಂಜಾ ಮತ್ತಲ್ಲಿ ಸಾರ್ವಜನಿಕರಿಗೆ ಕಿರ್ಪಾನ್ ತೋರಿಸಿ ಹೆದರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ರೀತಿ ರೋಚಕ!

2021 ರಲ್ಲಿ ದಾಖಲಾಗಿದ್ದ ಕೇಸ್

ಹೌದು, 2021 ರಲ್ಲಿ ಅಧಿಕಾರಿಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಯಿಂದ ಗದಗ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನನ್ನ ಮೇಲೆ ಸುಳ್ಳು ಕೇಸ್ ದಾಖಲಾಗಿದೆ ಎಂದು ನಾಗರಾಜ ಹೈಕೋರ್ಟ್ ಮೊರೆ ಹೋಗಿದ್ದ. ಇದೀಗ ಹೈಕೋರ್ಟ್ ವಿಚಾರಣೆ ನಡೆಸಿದ್ದು, ನಾಗರಾಜ ಮೇಲಿನ ಎಫ್ಐಆರ್ ರದ್ದುಗೊಳಿಸಿ ಆದೇಶಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ