ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಿಎಂ ಚರ್ಚೆ: ಖಾಸಗಿ ಬಸ್​​ಗಳನ್ನೂ ಶಕ್ತಿ ಯೋಜನೆಗೆ ಸೇರಿಸುವಂತೆ ಬೇಡಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 8:49 PM

ಆಟೋ, ಟ್ಯಾಕ್ಸಿ, ಲಾರಿ ಮತ್ತು ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಸೋಮವಾರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿದ್ದು, ಖಾಸಗಿ ಬಸ್​​ಗಳನ್ನೂ ಶಕ್ತಿ ಯೋಜನೆಗೆ ಸೇರಿಸಿ ಎಂಬ ಬೇಡಿಕೆಗಳೊಂದಿಗೆ ಹಲವು ವಿಚಾರಗಳ ಕುರಿತಾಗಿ ಚರ್ಚೆ ಮಾಡಲಾಗಿದೆ.

ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಿಎಂ ಚರ್ಚೆ: ಖಾಸಗಿ ಬಸ್​​ಗಳನ್ನೂ ಶಕ್ತಿ ಯೋಜನೆಗೆ ಸೇರಿಸುವಂತೆ ಬೇಡಿಕೆ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್​ 21: ಆಟೋ, ಟ್ಯಾಕ್ಸಿ, ಲಾರಿ ಮತ್ತು ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಸೋಮವಾರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿದ್ದು, ಖಾಸಗಿ ಬಸ್​​ಗಳನ್ನೂ ಶಕ್ತಿ ಯೋಜನೆಗೆ ಸೇರಿಸಿ ಎಂಬ ಬೇಡಿಕೆಗಳೊಂದಿಗೆ ಹಲವು ವಿಚಾರಗಳ ಕುರಿತಾಗಿ ಚರ್ಚೆ ಮಾಡಲಾಗಿದೆ. ಆಟೋ, ಟ್ಯಾಕ್ಸಿಯವರಿಗೆ ಸರ್ಕಾರಿ ಆ್ಯಪ್​​ ವ್ಯವಸ್ಥೆ ಮಾಡಬೇಕು. ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ನಷ್ಟದಲ್ಲಿದೆ. ಹೀಗಾಗಿ ಸಹಾಯಧನ ನೀಡುವಂತೆ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯಗೆ ಸಂಘಟನೆಗಳಿಂದ ಒತ್ತಾಯಿಸಲಾಗಿದೆ.

ಸಾರಿಗೆ ಸಂಘಟನೆಗಳ ಜತೆಗಿನ ಸಭೆ ಬಳಿಕ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರ ಜತೆ ಸಿಎಂ ಚರ್ಚಿಸಿದ್ದಾರೆ. ಆಟೋ, ಕ್ಯಾಬ್​​ಗಳಿಗೆ ಪ್ರತ್ಯೇಕ ಆ್ಯಪ್​​ ಮಾಡುವ ವಿಚಾರ ಸೇರಿದಂತೆ ಮುಖ್ಯವಾಗಿ ಟ್ಯಾಕ್ಸ್ ವಿಚಾರವಾಗಿ ಬಗ್ಗೆ ಚರ್ಚೆ ಮಾಡಿದ್ದಾರೆ. ಖಾಸಗಿ ಬಸ್​​ಗಳನ್ನೂ ಶಕ್ತಿ ಯೋಜನೆಗೆ ಸೇರಿಸಿ ಅಂತಾ ಕೇಳಿದ್ದಾರೆ ಎಂದು ಹೇಳಿದರು.

ಸಿಎಂ‌ ಸಿದ್ದರಾಮಯ್ಯ ಸಕಾರಾತ್ಮಕ ಸ್ಪಂದನೆ

ಖಾಸಗಿ ಬಸ್ ಮಾಲೀಕರ ಸಂಘದ ಸುರೇಶ್​ ಮಾತನಾಡಿದ್ದು, ಖಾಸಗಿ ಬಸ್​​ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಿಎಂ‌ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್​​ಗಳು ಸಂಚಾರ ಮಾಡುತ್ತಿವೆ. ಇಲ್ಲೂ ತಮಿಳುನಾಡು ಮಾದರಿ ಅಳವಡಿಸಲು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಎಕ್ಸ್​ಪ್ರೆಸ್ ಬಸ್​ಗಳಿಗೆ ರಾಜಹಂಸ ಬಸ್ ಮಾದರಿ ವಿನ್ಯಾಸ ಮತ್ತು ಸೇವೆ ಒದಗಿಸಲು ನಿರ್ಧರಿಸಿರುವ ಕೆಎಸ್​ಆರ್​ಟಿಸಿ

ಸ್ಮಾರ್ಟ್​ ಕಾರ್ಡ್​ ಮೂಲಕ ಖಾಸಗಿ ಬಸ್​​ಗಳಿಗೆ ಶಕ್ತಿ ಯೋಜನೆ ಸೇರಿಸುವಂತೆ ಮನವಿ ಮಾಡಿದ್ದು, ಆಗಸ್ಟ್​ 30ರೊಳಗೆ ಈ ಬಗ್ಗೆ ತಿಳಿಯಲಿದೆ ಎಂದರು.

ಟ್ಯಾಕ್ಸ್ ವಿಧಿಸಿದ್ದನ್ನ ತೆಗೆಯಬೇಕು: ಲಾರಿ ಮಾಲೀಕ ಷಣ್ಮುಖಗಪ್ಪ

ಲಾರಿ ಮಾಲೀಕ ಷಣ್ಮುಖಗಪ್ಪ ಪ್ರತಿಕ್ರಿಯಿಸಿದ್ದು, ಟ್ಯಾಕ್ಸ್ ಏರಿಕೆ‌ ಮಾಡಲಾಗಿದೆ. ಸ್ಕ್ರಾಪ್ ಪಾಲಿಸಿ ಮಾಡಿದ್ದಾರೆ, ಹಳೆ ಗಾಡಿಗೆ ಕೂಡ ಟ್ಯಾಕ್ಸ್ ಕಟ್ಟಬೇಕು. ಹಾಗಾಗಿ ಈ ಕುರಿತಾಗಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಭರವಸೆ ನೀಡಿದ್ದಾರೆ. ಮಿಡಿಯಂ ವೆಹಿಕಲ್ಗೆ ಟ್ರಾಕ್ಸ್ ಹಾಕುವುದು ಹೊರೆಯಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ದಿನಗಣನೆ

ಲಾರಿಗೆ, ಟ್ಯಾಕ್ಸ್ ವಿಧಿಸಿದ್ದನ್ನ ತೆಗಿಬೇಕು. ಈ ರೀತಿಯಾಗಿ ಟ್ಯಾಕ್ಸ್ ಕಟ್ಟಿದ್ದರೆ ನಾವು ಸಾಯಬೇಕು. ನೈಸ್ ರೋಡ್​ನಲ್ಲಿ ಲಾರಿ ಮಾಲೀಕರನ್ನ ಸುಲಿಗೆ ಮಾಡಲಾಗುತ್ತಿದೆ. ನೈಸ್ ರೋಡ್​ ಟ್ಯಾಕ್ಸ್ ಕಲೆಕ್ಟ್ ಹಾಗೂ ಏರಿಕೆ ಮಾಡಲಾಗಿದೆ ಹಿಂಗಾದರೆ ಹೇಗೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 pm, Mon, 21 August 23