ಚಿಕ್ಕಮಗಳೂರು, ಆಗಸ್ಟ್ 18: ಭಯಾನಕ ಆಕ್ಸಿಡೆಂಟ್ ಹಿಂದೆ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್ ಹಾಕಿರುವ ಪ್ರಕರಣ ಬಯಲಾಗಿದೆ. ಬೈಕ್ ಗೆ ಕಾರು ಗುದ್ದಿಸಿ ಹತ್ಯೆಗೆ ಪ್ಲಾನ್ ಮಾಡಿದ್ದ ಕುಚುಕು ಸ್ನೇಹಿತರ (Friend) ನಡುವೆ ಕಲಹಕ್ಕೆ ಕಾರಣವಾಗಿದ್ದು ಗರ್ಲ್ ಫ್ರೆಂಡ್! (Girlfriend) ಮಧ್ಯರಾತ್ರಿ ಮಾತುಕತೆಗೆ ಕರೆಸಿ ಸ್ನೇಹಿತನ ಕಥೆ ಮುಗಿಸಲು ಸ್ಕೆಚ್ ಹಾಕಲಾಗಿತ್ತು. ಆಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆದಿದ್ದಾಗ ಇತ್ತ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚಿಕ್ಕಮಗಳೂರು ನಗರದ ಹೊರವಲಯದ ನರಿಗುಡ್ಡೇನಹಳ್ಳಿ ಸರ್ಕಲ್ ಬಳಿ ನಡೆದಿದ್ದ ಭೀಕರ ಆಕ್ಸಿಡೆಂಟ್ ಅದಾಗಿತ್ತು.
ಆದರೆ ಅದು ಆಕ್ಸಿಡೆಂಟ್ ಅಲ್ಲ ಹುಡುಗಿಗಾಗಿ ಸ್ನೇಹಿತನ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬುದು ಬಯಲಾದ ಮೇಲೆ ಅಂಕಿತ್ ಎಂಬ ಯುವಕನ ವಿರುದ್ಧ ಚಿಕ್ಕಮಗಳೂರು (Chikkamagaluru) ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ. ಸ್ನೇಹಿತ ನಕುಲ್ ಹತ್ಯೆಗೆ ಅಂಕಿತ್ ಪ್ಲಾನ್ ಮಾಡಿದ್ದ.
Also Read: ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್ಪೆಕ್ಟರ್ ಗುಂಡಿಟ್ಟರು
ಅಂಕಿತ್ ತನ್ನ ಸ್ನೇಹಿತ ನಕುಲ್ ಬರುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಗೆ ಕಾರು ಗುದ್ದಿಸಿದ್ದ. ಗುದ್ದಿದ ಬಳಿಕ ಬೈಕ್ ಅನ್ನು ಕಾರು ನೂರು ಮೀ. ನಷ್ಟು ದೂರ ಎಳೆದೊಯ್ದಿತ್ತು. ಸ್ಥಳೀಯರು ಕೂಗುತ್ತಿದ್ದಂತೆ ಅಂಕಿತ್ ಎಸ್ಕೇಪ್ ಆಗಿದ್ದ. ಅಂಕಿತ್, ನಕುಲ್ ಇಬ್ಬರೂ ಚಿಕ್ಕಮಗಳೂರಿನ ಕಲ್ಯಾಣ ನಗರದ ನಿವಾಸಿಗಳು. ಗಂಭೀರವಾಗಿ ಗಾಯಗೊಂಡಿದ್ದ ನಕುಲ್ ಗೆ ಇದೀಗ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ ಭಯಾನಕ ಆಕ್ಸಿಡೆಂಟ್-ಹತ್ಯೆ ಯತ್ನ ಘಟನೆಯಿಂದ ಚಿಕ್ಕಮಗಳೂರು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ