ಚಿಕ್ಕಬಳ್ಳಾಪುರ: ದರೋಡೆ ಮಾಡಿ ಸಿಕ್ಕಿಬಿದ್ದ ಪೊಲೀಸರು

Chikkaballapur News: ಕಳ್ಳ ಕಾಕರು ದರೋಡೆಕೊರರು ವಂಚಕರನ್ನು ಹೆಡೆಮುರಿ ಕಟ್ಟಿ ಅವರಿಗೆ ನೈತಿಕತೆ ಹಾಗೂ ಕಾನೂನು ಪಾಠ ಮಾಡಬೇಕಾದ ಪೊಲೀಸರೇ ದರೋಡೆ ಮಾಡಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Important Highlight‌
ಚಿಕ್ಕಬಳ್ಳಾಪುರ: ದರೋಡೆ ಮಾಡಿ ಸಿಕ್ಕಿಬಿದ್ದ ಪೊಲೀಸರು
ದರೋಡೆ ಮಾಡಿ ಸಿಕ್ಕಿಬಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು (ಸಾಂದರ್ಭಿಕ ಚಿತ್ರ)
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on: Aug 08, 2023 | 8:45 PM

ಚಿಕ್ಕಬಳ್ಳಾಫುರ, ಆಗಸ್ಟ್ 8: ಕಳ್ಳ ಕಾಕರು ದರೋಡೆಕೊರರು ವಂಚಕರನ್ನು ಹೆಡೆಮುರಿ ಕಟ್ಟಿ ಅವರಿಗೆ ನೈತಿಕತೆ ಹಾಗೂ ಕಾನೂನು ಪಾಠ ಮಾಡಬೇಕಾದ ಪೊಲೀಸರೇ ದರೋಡೆ ಮಾಡಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ. ಬಾಗೇಪಲ್ಲಿ ಠಾಣೆಯ ಕೆಲವು ಪೊಲೀಸ್ ಸಿಬ್ಬಂದಿಗಳು ಹಾಗೂ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ಒಬ್ಬರು ಮಾಡಿದ ಘನಾಂಧಾರಿ ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.

ಮಂಡ್ಯ ಮೂಲದ ತ್ರೀವೇಣಿ ಎನ್ನುವ ಮಹಿಳೆ ಹಾಗೂ ಅವರ ತಂಡವನ್ನು ಪರಿಚಯ ಮಾಡಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಕೆಲವು ವಂಚಕರು, ತಮ್ಮ ಬಳಿ ರಾಶಿ ರಾಶಿ ಎರಡು ಸಾವಿರ ಮುಖ ಬೆಲೆಯ ನೋಟುಗಳಿವೆ. ಅವುಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದಾಗಿವೆ. ಅವುಗಳನ್ನು ವಿಲೇವಾರಿ ಮಾಡಬೇಕು ಕಪ್ಪು ಹಣವನ್ನು ವೈಟ್ ಮನಿಯನ್ನಾಗಿ ಮಾಡಬೇಕು. ಎಲ್ಲಾ ನೋಟುಗಳು ಎರಡು ಸಾವಿರ ರೂಪಾಯಿದ್ದಾಗಿದೆ ಎಂದು ನಂಬಿಸಿದ್ದಾರೆ.

ಅಲ್ಲದೆ, ಎರಡು ಸಾವಿರ ನೋಟುಗಳಿಂದ ಐನೂರು ರೂಪಾಯಿ ನೋಟ್​ಗಳಾಗಿ ಮಾಡಬೇಕಿದೆ. 10 ಲಕ್ಷ ರೂಪಾಯಿ ಎರಡು ಸಾವಿರ ನೋಟುಗಳನ್ನು ನೀಡಿದರೆ ಅದಕ್ಕೆ 12.50 ಲಕ್ಷ ರೂಪಾಯಿ ನೀಡುವುದಾಗಿ ಡಿಲ್ ಕುದುರಿಸಿದ್ದಾರೆ. ಅದರಂತೆ ತ್ರೀವೇಣಿ ಹಾಗೂ ಆಕೆಯ ತಂಡ ವಂಚಕರನ್ನು ನಂಬಿ ಐನೂರು ನೋಟುಗಳ ಬ್ಯಾಗ್ ಸಮೇತ ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮಕ್ಕೆ ಬಂದಿದ್ದಾರೆ.

ಅಷ್ಟೊತ್ತಿಗೆ ಅಲ್ಲಿಗೆ ಬಂದ ಸ್ಥಳಿಯ ಕೆಲವು ವಂಚಕರು ತಮ್ಮ ಬಳಿ ಇದ್ದ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಬ್ಯಾಗ್ ಅನ್ನು ತೊರಿಸಿದ್ದಾರೆ. ಇನ್ನೇನು ಎರಡು ತಂಡಗಳು ತಮ್ಮ ತಮ್ಮ ಬಳಿ ಇದ್ದ ಹಣದ ಬ್ಯಾಗ್ ಬದಲಾವಣೆ ಮಾಡಬೇಕಿತ್ತು ಎನ್ನುವಷ್ಟರಲ್ಲೆ ಸ್ಥಳಿಯ ಬಾಗೇಪಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕನಸು ಈಡೇರುವ ಮುನ್ನ ವಿಧಿಯಾಟಕ್ಕೆ ಬಲಿಯಾದ ಪತಿಯ ನೆನೆದು ಕಣ್ಣೀರಿಟ್ಟ ನಂದಿ ಗ್ರಾಮ ಪಂ. ನೂತನ ಅಧ್ಯಕ್ಷೆ

ಬಾಗೇಪಲ್ಲಿ ಪೊಲೀಸ್ ಠಾಣೆಯೆ ಸಿಬ್ಬಂದಿ ನರಸಿಂಹಮೂರ್ತಿ ಹಾಗೂ ಅಶೋಕ್ ಎನ್ನುವವರು ಗಡಿದಂ ಗ್ರಾಮಕ್ಕೆ ಆಗಮಿಸಿ ದಾಳಿ ನಡೆಸಿ ಮಂಡ್ಯ ಮೂಲದ ತ್ರೀವೇಣಿ ಹಾಗೂ ಆಕೆಯ ತಂಡವನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಿಯ ವಂಚಕರ ತಂಡವನ್ನು ವಶಕ್ಕೆ ಪಡೆಯದೆ, ವಿಚಾರಣೆ ನಡೆಸದೆ ಕಳುಹಿಸಿದ್ದಾರೆ.

ಮಹಿಳೆ ಸೇರಿ ಆಕೆಯ ಜೊತೆಗಿದ್ದವರನ್ನು ಬಾಗೇಪಲ್ಲಿ ಠಾಣೆಯ ಪೊಲೀಸರು ಠಾಣೆಯಲ್ಲೇ ಎರಡು ದಿನ ಅಕ್ರಮವಾಗಿ ಇರಿಸಿದ್ದರು. ಎರಡು ದಿನಗಳು ಆದರೂ ಉಪ ವಿಭಾಗದ ಪೊಲೀಸ್ ಅಧಿಕಾರಿ ಅಥವಾ ಎಸ್​​ಪಿಗೂ ಮಾಹಿತಿ ನೀಡದೆ ವಿಚಾರಣೆ ನೇಪದಲ್ಲಿ ಠಾಣೆಯಲ್ಲಿ ಇಟ್ಟುಕೊಂಡಿದ್ದಾರಂತೆ. ಈ ವೇಳೆ ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಲ್ಲದೆ, ಬಂಧಿತರ ಬಳಿ ಕಂತೆ ಕಂತೆ ಹಣವನ್ನು ನೋಡಿದ ಪೊಲೀಸರು ಕೊನೆಗೆ ಅವರ ಬಳಿ ಇದ್ದ ಹಣವನ್ನು ತಾವೇ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮವಾಗಿ ಠಾಣೆಯಲ್ಲಿ ಇದ್ದವರ ಬಳಿ ಇದ್ದ ಹಣವನ್ನು ಕಿತ್ತುಕೊಂಡ ಪೊಲೀಸರು ನಂತರ ಅವರನ್ನು ಹೆದರಿಸಿ ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ.

ಪ್ರಕರಣ ಬಯಲಾಗಿದ್ದು ಹೇಗೆ?

ಹಣ ಕಳೆದುಕೊಂಡು ಠಾಣೆಯಿಂದ ಆಚೆ ಬಂದ ಮಂಡ್ಯ ಗ್ಯಾಂಗ್ ಪೊಲೀಸರ ಮೇಲೆ ಅನುಮಾನಗೊಂಡು ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಅಲ್ಲಿ ಪಿಎಸ್​ಐ ರಾಜೇಶ್ವರಿಯನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ದೂರು ನೋಡಿ ಬೆಚ್ಚಿ ಬಿದ್ದ ದಿಬ್ಬೂರಹಳ್ಳಿ ಠಾಣೆ ಲೇಡಿ ಪಿಎಸ್​ಐ, ಪೊಲೀಸರ ಕೃತ್ಯವನ್ನು ಚಿಕ್ಕಬಳ್ಳಾಪುರ ಎಸ್​​ಪಿ ಡಿ.ಎಲ್.ನಾಗೇಶ ಗಮನಕ್ಕೆ ತಂದಿದ್ದಾರೆ.

ಪ್ರಕರಣದ ಗಾಂಭೀರತೆ ಅರಿತ ಚಿಕ್ಕಬಳ್ಳಾಪುರ ಎಸ್​ಪಿ, ದೂರುದಾರರಿಂದ ಮಾಹಿತಿ ಪಡೆದಿದ್ದಾರೆ, ನಂತರ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕರೆಸಿ ತನಿಖೆ ನಡೆಸಿದ್ದಾರೆ. ಆಗ ಸಿಬ್ಬಂದಿಗಳು ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಬಾಗೇಪಲ್ಲಿ ಠಾಣೆಯ ಪ್ರಭಾರ ಇನ್ಸಪೇಕ್ಟರ್ ರವಿಕುಮಾರ್ ಹೇಳಿದಂತೆ ಮಾಡಿದ್ದೇವೆ ಸ್ವಾಮಿ, ನಮ್ಮದೇನು ತಪ್ಪಿಲ್ಲ ಅಂತ ಹೇಳಿ ಇನ್ಸಪೇಕ್ಟರ್ ಅವರ ಜೊತೆ ಮಾತನಾಡಿರುವ ಆಡಿಯೋ ಹಾಗೂ ಕೆಲ ದಾಖಲೆಗಳನ್ನು ಎಸ್​ಪಿ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಬಾಗೇಪಲ್ಲಿ ಠಾಣೆಯಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ಮಾಹಿತಿಯನ್ನು ಟಿವಿ9 ಪ್ರತಿನಿಧಿ ಭೀಮಪ್ಪ ಪಾಟೀಲ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡರಿಗೆ ತೀಳಿಸಿದ್ದು, ಐಜಿಪಿ ಅವರು ತಮ್ಮ ಕಛೇರಿಯ ಅಧಿಕಾರಿಯೊಬ್ಬರಿಗೆ ಸೂಚಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮುಂದೆ ಏನಾಗುತ್ತೊ ಕಾದು ನೋಡಬೇಕಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು