TV9 Kannada Digital Impact: ಮನಿ ಡಬ್ಲಿಂಗ್ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಶಾಮೀಲು: ಸಾಲು ಸಾಲು ಮೂವರು ಪೊಲೀಸರು ಅಮಾನತು
ಇದು ಟಿವಿ9 ಕನ್ನಡ ಡಿಜಿಟಲ್ ವರದಿ ಫಲಶೃತಿ. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳು ಮತ್ತು ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಅನ್ನು ಸೇವೆಯಿಂದ ಅಮಾನತು ಮಾಡಿ, ಮನೆಗೆ ಕಳಿಸಲಾಗಿದೆ.
ಚಿಕ್ಕಬಳ್ಳಾಪುರ, ಆಗಸ್ಟ್ 12: ಇದು ಟಿವಿ9 ಕನ್ನಡ ಡಿಜಿಟಲ್ ವರದಿ ಫಲಶೃತಿ. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳು ಮತ್ತು ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಅನ್ನು ಸೇವೆಯಿಂದ ಅಮಾನತು ಮಾಡಿ, ಮನೆಗೆ ಕಳಿಸಲಾಗಿದೆ. ಬಾಗೇಪಲ್ಲಿ ಠಾಣೆಯ (Bagepalli police) ಗುಪ್ತವಾರ್ತೆ ಕಾನ್ಸ್ಟೇಬಲ್ ನರಸಿಂಹಮೂರ್ತಿ, ಕಾನ್ಸ್ಟೇಬಲ್ ಅಶೋಕ್ ಅವರನ್ನು ಅಮಾನತು ಮಾಡಿ (suspend) ಚಿಕ್ಕಬಳ್ಳಾಪುರ ಪೊಲೀಸ್ (Chikkaballapur police) ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ ಇಂದು ಶನಿವಾರ ಆದೇಶ ಹೊರಡಿಸಿದ್ದಾರೆ.
ಇನ್ನು ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐ.ಜಿ.ಪಿ. ರವಿಕಾಂತೇ ಗೌಡ (B R Ravikanthe Gowda) ಆದೇಶ ಹೊರಡಿಸಿದ್ದಾರೆ. ರವಿಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹಾಗೂ ಚೇಳೂರು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಆಗಿದ್ದರು. ಪ್ರಕರಣದಲ್ಲಿ ಪೊಲೀಸರ ಶಾಮೀಲು ಹಾಗೂ ಕರ್ತವ್ಯ ಲೋಪದ ಬಗ್ಗೆ ಟಿವಿ9 ಡಿಜಿಟಲ್ ಮೂರು ಸವಿಸ್ತಾರ, ಸಾಕ್ಷ್ಯ ಸಹಿತ ವರದಿಗಳನ್ನು ಪ್ರಕಟಿಸಿತ್ತು.
ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ ಪಿಂಕ್ ಟು ಗ್ರೀನ್ ನೋಟ್ ಜಾಲದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದ ಬಾಗೇಪಲ್ಲಿ ಪೊಲೀಸರ ವಿರುದ್ಧ ಲಂಚಾವತಾರ ಕೇಳಿಬಂದಿತ್ತು. 5 ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸದೇ ಮುಚ್ಚಿ ಹಾಕಲು ಯತ್ನಿಸಿದ್ದರು. ಸಾಕ್ಷ್ಯಾಧಾರಗಳ ಸಮೇತ TV9 Digital ಈ ಬಗ್ಗೆ ಆಗಸ್ಟ್ 8 ಹಾಗೂ 9 ರಂದು ವಿಸ್ತೃತವಾಗಿ ವರದಿ ಮಾಡಿತ್ತು.
ಚಿಕ್ಕಬಳ್ಳಾಪುರ ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Sat, 12 August 23