ಚಾಮರಾಜನಗರ, ಆಗಸ್ಟ್ 20: ಯಾವುದೇ ಕಾರಣಕ್ಕೂ ಎಸ್ಸಿ, ಎಸ್ಟಿ ಅನುದಾನ ದುರುಪಯೋಗವಾಗಲು ಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇವಪ್ಪ (H.C.Mahadevappa) ಹೇಳಿದ್ದಾರೆ. ಚಾಮರಾಜನಗರದಲ್ಲಿ ನಡೆದ ಸಂವಿಧಾನ ಉಳಿವಿಗಾಗಿ ಭೀಮಸಂಕಲ್ಪ ಸಮಾವೇಶದಲ್ಲಿ ಈ ಹೇಳಿಕೆ ನೀಡಿದರು.
ಒಂದೊಂದೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಯೋಜನೆಗಳ ಸಮರ್ಪಕ ಜಾರಿಗಾಗಿ ಹಣದ ಕ್ರೂಡೀಕರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಗೃಹಲಕ್ಷ್ಮೀ ಯೋಜನೆ ಜಾರಿಗಾಗಿ ಎಸ್ಸಿ ಎಸ್ಟಿ ಅನುದಾನವನ್ನು ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಪ್ರತಿಭಟನೆಯೂ ನಡೆಸಿತ್ತು.
ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ನಿಯಮ 7ಡಿ ಅಡಿ ಅವಕಾಶ ಇದೆ. ಈ ನಿಯಮವನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡಿಕೊಂಡಿತ್ತು. ಬಿಜೆಪಿ ಸರ್ಕಾರ SCP, TSP ಹಣವನ್ನು ಬೇರೆ ಯೋಜನೆಗಳಿಗೆ ನೀಡುತ್ತಿತ್ತು. ನಾವು ಈಗ 7ಡಿ ನಿಯಮವನ್ನೇ ತೆಗೆದುಹಾಕುತ್ತಿದ್ದೇವೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Video: ಆ ಕಡೆ ಸೂರ್ಯನ ಪ್ರಕೋಪ -ಈ ಕಡೆ ಅಧಿಕಾರಿಗಳ ಬೇಜವಾಬ್ದಾರಿತನ: ಆತಂಕದ ಕ್ಷಣಗಳ ಎದುರಿಸಿದ ಸಚಿವ ಡಾಕ್ಟರ್ ಮಹದೇವಪ್ಪ
ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದೇ ನಾವೇ ಎಂದು ಹೇಳಿದ ಹೆಚ್.ಸಿ.ಮಹದೇವಪ್ಪ, ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಪ್ರತಿಭಟನೆ ಮಾಡುವಂತೆ ಹೇಳಿಕೊಟ್ಟಿದ್ದೆ. ಹೆಚ್.ಸಿ.ಮಹದೇವಪ್ಪಗೆ ಧಿಕ್ಕಾರ ಕೂಗಿ ಅಂತಾ ನಾನೇ ಹೇಳಿಕೊಟ್ಟಿದ್ದೆ. ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದಲಿತರ ಪರ ಕೆಲಸ ಮಾಡಿಸುತ್ತಿದ್ದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ದಲಿತರ ಪರ ಕೆಲಸ ಮಾಡಿಸುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ ಸ್ಕೀಮ್ ಗಳಿಗೆ ಬೇರೆ ಯೋಜನೆ ಅಥವಾ ಇಲಾಖೆಗಳಿಗೆ ಮೀಸಲಾಗಿರಿಸಿರುವ ಹಣ ಬಳಸಲಾಗಿತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಅರೋಪ ಮಾಡಿದ್ದರು. ವಿಧಾನಸೌಧಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಎಸ್ಸಿಪಿ ಟಿಎಸ್ಪಿ ಸಭೆಯ ಬಳಿಕ ಮಾತನಾಡಿದ್ದ ಮಹಾದೇವಪ್ಪ ಅವರಿಗೆ ಪತ್ರಕರ್ತರು ಮೀಸಲು ಹಣವನ್ನು ಗೃಹಲಕ್ಷ್ಮೀ ಬಳಸಲಾಗುತ್ತಿದೆಯೇ ಅಂತ ಪ್ರಶ್ನೆ ಕೇಳಿದ್ದರು.
ಸಚಿವರು ಉತ್ತರ ನೀಡುತ್ತಿದ್ದಾಗ, ಸರ್ ನೀವು ಸುಳ್ಳು ಹೇಳುತ್ತಿದ್ದೀರಿ ಅಂತ ನೇರವಾಗಿ ಆರೋಪಿಸಿದ್ದರು. ಇಲ್ಲ, ಹಾಗೇನೂ ಇಲ್ಲ, ಒಂದು ಇಲಾಖೆಗೆ ಬಿಡುಗಡೆ ಮಾಡಿದ ಅನುದಾನ ಬೇರೆ ಯೋಜನೆಗೆ ಬಳಸಲು ಸಾಧ್ಯವಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ