ಚಾಮರಾಜನಗರ: ರಾಮಪುರ ಆನೆ ಶಿಬಿರದಲ್ಲಿ ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ
ಆನೆಗಳ ಸಂಖ್ಯೆಯಲ್ಲಿ ಬಂಡಿಪುರಕ್ಕೆ ಮೊದಲ ಸ್ಥಾನ ಬಂದ ಬೆನ್ನಲ್ಲೆ ಈ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲು ಅರಣ್ಯಾಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಅದರಂತೆ, ರಾಮಪುರ ಆನೆ ಬಿಡಾರದಲ್ಲಿ ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ.
ಚಾಮರಾಜನಗರ, ಆಗಸ್ಟ್ 22: ಆನೆಗಳ ಸಂಖ್ಯೆಯಲ್ಲಿ ಬಂಡಿಪುರಕ್ಕೆ ಮೊದಲ ಸ್ಥಾನ ಬಂದ ಬೆನ್ನಲ್ಲೆ ಅರಣ್ಯ ಇಲಾಖೆ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಹೌದು, ಬಂಡಿಪುರಕ್ಕೆ (Bandipur) ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲು ಗುಂಡ್ಲುಪೇಟೆ ತಾಲೂಕಿನಲ್ಲಿರುವ ರಾಮಪುರ ಆನೆ ಬಿಡಾರದಲ್ಲಿ (Rampura Elephant Camp) ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಬಂಡಿಪುರ ಸಿಎಫ್ ರಮೇಶ್ ಕುಮಾರ್ ಅವರು ಪಿಸಿಸಿಎಫ್ಗೆ ವರದಿ ಸಲ್ಲಿಸಿದ್ದಾರೆ.
ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಯಾದರೆ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಇದೆ. ಈಗಾಗಲೇ ಪ್ರತಿ ತಿಂಗಳು ಸಫಾರಿಯಿಂದಲೇ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಹಿನ್ನೆಲೆ ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಯಾದರೆ ಬಂಡಿಪುರಕ್ಕೆ ಮತ್ತಷ್ಟು ಆದಾಯ ಹರಿದು ಬರಲಿರಲಿದೆ ಎಂಬುದು ಅಧಿಕಾರಿಗಳ ಪ್ಲಾನ್.
ಇದನ್ನೂ ಓದಿ: ಚಾಮರಾಜನಗರ: ಕಾಡಂಚಿನ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ ಹಿಡಿದ ಕೂಂಬಿಂಗ್ ಕಿಂಗ್ ಬಲರಾಮ ತಂಡ
ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಜೊತೆಗೆ ಆನೆಗಳಿಗೆ ತರಬೇತಿ ನೀಡುವುದನ್ನ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಬಂಡಿಪುರದಲ್ಲಿ ಸಫಾರಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಮನಸೋತಿದ್ದರು. ಬರೋಬ್ಬರಿ 2 ಗಂಟೆಗಳ ಕಾಲ ಸಫಾರಿ ಮಾಡಿದ್ದರು. ಮೋದಿ ಸಫಾರಿ ಬಳಿಕ ರಾಜ್ಯದ ಇತರೆ ಜಿಲ್ಲೆಗಳಿಂದ ಅಲ್ಲದೆ, ಹೊರ ರಾಜ್ಯ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Tue, 22 August 23