ಬಂಡೀಪುರ ಅಭಯಾರಣ್ಯಕ್ಕೆ ಎದುರಾಯ್ತು ದೊಡ್ಡ ಕಂಟಕ: 2 ವರ್ಷದಲ್ಲಿ ಕಾಡಿನಾದ್ಯಂತ ಹರಡಿಕೊಳ್ತಿದೆ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ!

| Updated By: Kiran Hanumant Madar

Updated on: Aug 16, 2023 | 9:25 AM

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಇದೀಗ ದೊಡ್ಡ ಕಂಟಕ ಎದುರಾಗಿದೆ. ಹೌದು, ಕಳೆದ ಎರಡು ವರ್ಷದಲ್ಲಿ ಕಾಡಿನಾದ್ಯಂತ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಥಳಿ ಹರಡಿಕೊಳ್ಳುತ್ತಿದ್ದು, ಈ ಸೆನ್ನಾ ಸೆಪ್ಟಾಬ್ಲಿಶ್ ಹುಟ್ಟಿದ ಸುತ್ತಾ ಮುತ್ತಾ ಬೇರೆ ಯಾವುದೇ ಸಸ್ಯವನ್ನ ಬೆಳೆಯಲು ಬಿಡುವುದಿಲ್ಲ.

ಬಂಡೀಪುರ ಅಭಯಾರಣ್ಯಕ್ಕೆ ಎದುರಾಯ್ತು ದೊಡ್ಡ ಕಂಟಕ: 2 ವರ್ಷದಲ್ಲಿ ಕಾಡಿನಾದ್ಯಂತ ಹರಡಿಕೊಳ್ತಿದೆ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ!
ಬಂಡೀಪುರ
Follow us on

ಚಾಮರಾಜನಗರ, ಆ.16: ಈಗಾಗಲೇ ರಾಜ್ಯದಲ್ಲೆ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಅಭಯಾರಣ್ಯ ಎಂಬ ಹೆಗ್ಗಳಿಕೆ ಪಡೆದಿರುವ ಚಾಮರಾಜನಗರ(Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ(Bandipur Sanctuary)ಇದೀಗ ದೊಡ್ಡ ಕಂಟಕ ಎದುರಾಗಿದೆ. ಹೌದು, ಕೇರಳದ ವಾಯ್ನಾಡ್​ ವನ್ಯಜೀವಿ ಅಭಯಾರಣ್ಯ ಹಾಗೂ ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾಯನವನಕ್ಕೆ ಹೊಂದಿಕೊಂಡಿರುವ ಬಂಡೀಪುರ ಅಭಯಾರಣ್ಯಕ್ಕೆ ಅತೀ ಹೆಚ್ಚು ಬಿದಿರು ಹಾಗೂ ಹುಲ್ಲುಗಾವಲು ಹೊಂದಿರುವ ಹೆಗ್ಗಳಿಕೆ ಕೂಡ ಇದೆ. ಆದರೀಗ ಇದೆ ಅಭಯಾರಣ್ಯಕ್ಕೆ ಲ್ಯಾಂಟನ ಬಳಿಕ ಸೆನ್ನಾ ಸೆಪ್ಟಾಬ್ಲಿಶ್(Senna Spectabilis) ಎಂಬ ಸಸ್ಯ ತಳಿ ಮುಳುವಾಗುತ್ತಿದೆ.

ಎರಡು ವರ್ಷಗಳಲ್ಲಿ ಕಾಡಿನಾದ್ಯಂತ ಹರಡಿಕೊಂಡಿರುವ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ

ಕಳೆದ ಎರಡು ವರ್ಷದಲ್ಲಿ ಕಾಡಿನಾದ್ಯಂತ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ ಹರಡಿಕೊಳ್ಳುತ್ತಿದೆ. ಈ ಸೆನ್ನಾ ಸೆಪ್ಟಾಬ್ಲಿಶ್ ಹುಟ್ಟಿದ ಸುತ್ತಾ ಮುತ್ತಾ ಬೇರೆ ಯಾವುದೇ ಸಸ್ಯವನ್ನ ಬೆಳೆಯಲು ಬಿಡುವುದಿಲ್ಲ. ರಕ್ತ ಬೀಜಾಸುರನ ತರ ಒಂದು ಗಿಡವನ್ನ ಕಿತ್ತು ಹಾಕಿದ್ರೆ, ಅದೇ ಜಾಗದಲ್ಲಿ ನಾಲ್ಕೈದು ಸಸ್ಯ ಹುಟ್ಟುತ್ತಿದೆ. ಇದರಿಂದ ಅರಣ್ಯಾಧಿಕಾರಿಗಳಿಗೆ ಹೊಸ ತಲೆ ನೋವು ಶುರುವಾಗಿದೆ.

ಇದನ್ನೂ ಓದಿ:Viral: ಭಾರತದ ಈ 15 ಸಸ್ಯಾಹಾರಿ ಖಾದ್ಯಗಳು ವಿಶ್ವದ ಜನಪ್ರಿಯತೆ ಗಳಿಸಿವೆ

ಸಸ್ಯಹಾರಿ ಪ್ರಾಣಿಗಳಿಗೂ ಅಪಾಯ

ಇನ್ನು ಕಾಡಿನಾದ್ಯಂತ ಈ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಬೆಳೆದರೆ, ಕಾಡು ಪ್ರಾಣಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಹೌದು, ಕಾಡಿನಾದ್ಯಂತ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯವೇ ಬೆಳೆದುಕೊಂಡರೆ ಆಹಾರ ಕೊರತೆ ಎದುರಾಗುವ ಸಾದ್ಯತೆಯಿದೆ. ಈ ಸಸ್ಯವನ್ನು ಯಾವುದೇ ಪ್ರಾಣಿಗಳು ಸೇವಿಸುವುದಿಲ್ಲ. ಹಾಗಾಗಿ ಪ್ರಾಣಿಗಳಿಗೂ ಈ ಸಸ್ಯ ಸಂಕಷ್ಟ ತಂದೊಡ್ಡಲಿದೆ.

ಸಸ್ಯವನ್ನು ಬುಡ ಸಮೇತ ಕಿತ್ತೆಸೆಯಲು ಅಧಿಕಾರಿಗಳ ಪ್ಲಾನ್

ಇನ್ನು ಬಂಡೀಪುರ ಕಾನನದಲ್ಲಿ ದಿನ ಕಳೆದಂತೆ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಹೆಚ್ಚುತ್ತಿದ್ದು, ಕಾಡಿಗೆ ಮಾರಕವಾಗಿರುವ ಸಸ್ಯವನ್ನ ಬುಡ ಸಮೇತ ಕಿತ್ತೆಸೆಯಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಅರಣ್ಯಾಧಿಕಾರಿಗಳು ಐದಾರು ಎಕರೆಯಲ್ಲಿ ಬೆಳೆದಿರುವ ಅಪಾಯಕಾರಿ ಸಸ್ಯವನ್ನು ನಾಶ ಪಡಿಸಿದ್ದಾರೆ. ಆದರೆ, ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಥಳಿಯನ್ನು ಬಂಡೀಪುರ ಅಭಯಾರಣ್ಯದಿಂದ ಮುಕ್ತಿಗೊಳಿಸಲು ಬರೋಬ್ಬರಿ ಮೂರು ವರ್ಷ ಬೇಕಿದೆ ಎಂದು ಖುದ್ದು ಪಿಲ್ಡಿಗಿಳಿದ ಕನ್ಸರ್ ವೇಟರ್ ಫಾರೆಸ್ಟ್ ರಮೇಶ್ ಕುಮಾರ್ ಟಿವಿ9 ಗ್ರೌಂಡ್ ರಿಪೋರ್ಟ್​ನಲ್ಲಿ ಈ ಅಪಾಯಕಾರಿ ಥಳಿ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ