ಬಿಗ್ಬಾಸ್ ಸ್ಪರ್ಧಿ, ಕಿರುತರೆ ನಟ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ
ಸ್ಯಾಂಡಲ್ವುಡ್ನ ಹಲವು ನಟರು ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಶಾಸಕ, ಸಂಸದ, ಸಚಿವರಾಗಿ ರಾಜಕೀಯರಂಗದಲ್ಲೂ ಯಶಸ್ವಿಯಾಗಿದ್ದಾರೆ. ಇವರಂತೆಯೇ ಕನ್ನಡ ಕಿರುತೆರೆಯ ಧಾರವಾಹಿಗಳಾದ "ಅಗ್ನಿಸಾಕ್ಷಿ", "ಇಂತಿ ನಿಮ್ಮ ಆಶಾ" ಮತ್ತು "ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್-1" ಸ್ಪರ್ಧಿ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಚಾಮರಾಜನಗರ: ಸ್ಯಾಂಡಲ್ವುಡ್ನ (Sandlwood) ಹಲವು ನಟರು ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಶಾಸಕ, ಸಂಸದ, ಸಚಿವರಾಗಿ ರಾಜಕೀಯರಂಗದಲ್ಲೂ ಮಿಂಚಿದ್ದಾರೆ. ಇವರಂತೆಯೇ ಕನ್ನಡ ಕಿರುತೆರೆಯ ಧಾರವಾಹಿಗಳಾದ “ಅಗ್ನಿಸಾಕ್ಷಿ”, “ಇಂತಿ ನಿಮ್ಮ ಆಶಾ” ಮತ್ತು “ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್-1” ಸ್ಪರ್ಧಿ, ನಟ ಅರ್ಜುನ್ ರಮೇಶ್ (Arjun Ramesh) 2024 ರ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಸ್ಸಿ ಮೀಸಲು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ (Chamarajanagar Lok Sabha Constituency) ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಕಳೆದ 12 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿದ್ದೇನೆ. ಟಿ.ನರಸೀಪುರ ಪುರಸಭಾ ಸದಸ್ಯನಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದೇನೆ. ನನ್ನ ತಂದೆ ಮಾಜಿ ವಿಧಾನಪರಿಷತ್ತ ಸದಸ್ಯ ಸಿ.ರಮೇಶ್. ಕಳೆದ 20 ವರ್ಷಗಳಿಂದ ಪಕ್ಷದ ಸಂಘಟನೆಗೆ ದುಡಿಯುತ್ತಿದ್ದಾರೆ. ಪಕ್ಷ ನನಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಲಿ ಬಿಡಲಿ ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ