ಗಾಂಜಾ ಗ್ಯಾಂಗ್ನ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸ್ರು, ಬರೋಬ್ಬರಿ 1.18 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ
ಬೀದರ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಗ್ಯಾಂಗ್ಅನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1.18 ಕೋಟಿ ರೂಪಾಯಿ ಮೌಲ್ಯದ 118 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಮೈಸೂರಿನ ಟಿ ನರಸಿಪುರ ತಾಲೂಕಿನಲ್ಲಿ ಬೈಕ್ ಕಳ್ಳರನ್ನ ಬಂಧಿಸಿದ್ದು, ಅವರಿಂದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರತ್ಯೇಕ ಸುದ್ದಿಯ ವಿವರ ಈ ಕೆಳಗಿನಂತಿದೆ.
ಬೀದರ್, (ಆಗಸ್ಟ್ 23): ಬೀದರ್ (Bidar) ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ (Ganja) ಸಾಗಾಟ ಮಾಡುತ್ತಿದ್ದ ಗ್ಯಾಂಗ್ನ ಹೆಡೆಮುರಿ ಕಟ್ಟಿದ್ದಾರೆ. ಅಂತರ್ ರಾಜ್ಯ ಮಟ್ಟದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೀದರ್ ಜಿಲ್ಲೆಯ ಮುನ್ನಾಖೇಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದು, ಬಂಧಿತರಿಂದ 1.18 ಕೋಟಿ ರೂಪಾಯಿ ಮೌಲ್ಯದ 118 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಿ ಟೋಲ್ ಬಳಿ ಗಾಂಜಾ ಸಾಗಿಸುತ್ತಿದ್ದ ಕಾರಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಗಾಂಜಾ ಗ್ಯಾಂಗ್ನಲ್ಲಿ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಬಂಧನ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಇನ್ನು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಮುನ್ನಾಖೇಳ್ಳಿ ಪೊಲೀಸರಿಗೆ ಬೀದರ್ ಎಸ್ಪಿ ಮೆಚ್ಚುಗೆ ಸೂಚಿಸಿ, ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: Bidar Fort: ಬೀದರ್ ಕೋಟೆ ಮೇಲೆ ಗಿಡ-ಗಂಟಿಗಳ ಆಕ್ರಮಣ; ಕೋಟೆ ಶಿಥಿಲಗೊಳ್ಳುವ ಆತಂಕದಲ್ಲಿ ಜನ
ಬೈಕ್ ಕಳ್ಳರ ಬಂಧನ, 10 ಲಕ್ಷ ಮೌಲ್ಯದ 16 ದ್ವಿಚಕ್ರ ವಶಕ್ಕೆ
ಮೈಸೂರು: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರಿನ ಟಿ ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಟಿ.ನರಸೀಪುರ ತಾಲೂಕಿನ ರಂಗನಾಥಪುರ ಗ್ರಾಮದ ವಿನಯ್(20), ಪ್ರದೀಪ್(21) ಬಂಧತ ಆರೋಪಿಗಳಾಗಿದ್ದು, ಇವರಿಂದ 10 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಬನ್ನೂರು, ಕಿರುಗಾವಲು, ಸಂತೆಮರಳ್ಳಿ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು. ಟಿ ನರಸೀಪುರ ತಾಲ್ಲೂಕಿನ ರಂಗನಾಥಪುರ ಗ್ರಾಮದ ವಿನಯ್ 20 ಪ್ರದೀಪ್ (21) ಬಂಧಿತ ಆರೋಪಿಗಳು ಬನ್ನೂರು,ಕಿರುಗಾವಲು, ಸಂತೆಮರಳ್ಳಿ ವ್ಯಾಪ್ತಿಯಲ್ಲಿ 16ಕ್ಕೂ ಹೆಚ್ಚು ಬೈಕ್ ಗಳನ್ನ ಕಳ್ಳತನ ಮಾಡಿದ್ದರು. ಇದರಿಂದ ಜನ ರೋಸಿ ಹೋಗಿದ್ದರು. ಅಲ್ಲದೇ ಇದು ಪೊಲೀಸರ ದೊಡ್ಡ ತಲೆನೋವಾಗಿತ್ತಿ. ಕೊನೆಗೆ ಕಳ್ಳರ ಪತ್ತೆಗಾಗಿ ನಂಜನಗೂಡು ಡಿವೈಎಸ್ ಪಿ ಗೋವಿಂದರಾಜು, ಟಿನರಸೀಪುರ ಠಾಣೆ ಪೋಲೀಸ್ ಇನ್ಸಪೆಕ್ಟರ್ ಜೆ.ಎನ್.ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದು ಬೈಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:07 pm, Wed, 23 August 23