ಬೆಂಗಳೂರು, (ಆಗಸ್ಟ್ 23): ಸೌರಮಂಡಲದಲ್ಲಿ ಅದೊಂದು ಅಮೂಲ್ಯವಾದ ಸಂಪನ್ಮೂಲ.. ಆಕರ್ಷಕ.. ನಿಗೂಢ.. ಕುಳಿಗಳೇ ತುಂಬಿರೋ ಸುಂದರ ಚಂದಮಾಮನ ಅಂಗಳದಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಇಸ್ರೋ ವಿಜ್ಞಾನಿಗಳ 4 ವರ್ಷದ ಕನಸು, 4 ಲಕ್ಷ ಕಿಲೋ ಮೀಟರ್ ಪ್ರಯಾಣ. ಬಾಹ್ಯಾಕಾಶದಲ್ಲಿ ಐತಿಹಾಸಕ ಮೈಲಿಗಲ್ಲು ಸಾಧಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಂದು(ಆಗಸ್ಟ್ 23) ಸಂಜೆ 6ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುತ್ತಿದ್ದು, ಆ ಕೌತುಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆಲ ಗಂಟೆಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3 (Chandrayaan-3)ವಿಕ್ರಮ್ ಲ್ಯಾಂಡರ್((Vikram lander) )ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ನೇರ ಪ್ರಸಾರ ಮಾಡುತ್ತಿದೆ. ಇದಕ್ಕಾಗಿ ದೊಡ್ಡ ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ಇನ್ನು ವಿಶೇಷ ಏನೆಂದರೆ ಲ್ಯಾಂಡರ್ ಮಾಹಿತಿಗಳನ್ನು ತಾರಾಲಯದ ವಿಜ್ಞಾನಿಗಳು ಕನ್ನಡದಲ್ಲಿಯೇ ನೀಡಲಿದ್ದಾರೆ.
ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ನ ನೇರ ಪ್ರಸಾರ ವೀಕ್ಷಿಸಲು ಬೆಂಗಳೂರಿನ ನೆಹರು ತಾರಾಲಯದಲ್ಲಿ(Nehru Planetarium) ವ್ಯವಸ್ಥೆ ಕಲ್ಪಿಸಲಾಗಿದೆ.
ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಯುವ ಕ್ಷಣವನ್ನು ನೋಡಲು ದೇಶವೇ ಕಾತುರವಾಗಿರುವುದರಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು (ಆ.23)ಸಂಜೆ 5 ಗಂಟೆಯಿಂದ ಸಾಪ್ಟ್ ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಿಸಲು ಈ ಅವಕಾಶ ಕಲ್ಪಿಸಲಾಗಿದೆ. ತಾರಾಲಯದ ಹೊರಗಡೆ ಆರು ದೊಡ್ಡ ಎಲ್ ಇಡಿ ಸ್ಕ್ರೀನ್ ಮೂಲಕ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನೆಹರು ತಾರಾಲಯದ ಹೊರಭಾಗದಲ್ಲಿ ಸುಮಾರು 500 ಜನರು ನೇರ ಪ್ರಸಾರ ವೀಕ್ಷಿಸಲು ಅನುವುಮಾಡಿಕೊಡಲಾಗಿದೆ.
ಇದನ್ನೂ ಓದಿ: Chandrayaan 3 Moon Landing Live: ಚಂದ್ರಯಾನ3 ಯಶಸ್ಸಿಗೆ ಶ್ರೀಶೈಲ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ
ಇನ್ನು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದ್ದು, ಲ್ಯಾಂಡರ್ ಮಾಹಿತಿಗಳನ್ನು ತಾರಾಲಯ ದ ವಿಜ್ಞಾನಿಗಳು ಕನ್ನಡದಲ್ಲಿಯೇ ನೀಡಲಿದ್ದಾರೆ.
ಒಟ್ಟಿನಲ್ಲಿ ಲ್ಯಾಂಡಿಂಗ್ನ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನರು ಕಾತುರತೆಯಿಂದ ಕಾಯುತ್ತಿದ್ದು, ಈ ಕ್ಷಣವನ್ನು ನೇರ ಪ್ರಸಾರದಲ್ಲಿ ನೋಡಲು ಅವಕಾಶವಿರುವುದರಿಂದ ಎಲ್ಲರ ಚಿತ್ತ ವಿಕ್ರಮ್ ಲ್ಯಾಂಡರ್ ನತ್ತ ನೆಟ್ಟಿದೆ. ಬೆಂಗಳೂರಿನಲ್ಲಿ ಇದ್ದವರು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ