ಬೆಂಗಳೂರು, ಆ.16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಮನೆ ಜಪ್ತಿ ಮಾಡುವ ವೇಳೆ ಬ್ಯಾಂಕ್ ಸಿಬ್ಬಂದಿ(Tumkur Veerashaiva Cooperative Bank) ಎಡವಟ್ಟು ಮಾಡಿದ್ದಾರೆ. ಮನೆ ಮಾಲೀಕ ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದು ಜಪ್ತಿ ವೇಳೆ ಬಾಡಿಗೆ ಮನೆಯಲ್ಲಿ ಮಲಗಿದ್ದ ಯುವಕ ಕೂಡ ಲಾಕ್ ಆಗಿದ್ದಾನೆ. ಕೆಂಗೇರಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ.
ಪುಟ್ಟಪ್ಪ, ಗಾಯಿತ್ರಿ ಎಂಬುವವರು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಮಾಡಿ ಕೆಂಗೇರಿ ಉಪನಗರದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿದ್ದರು. ಮೂರು ಅಂತಸ್ತಿನ ಒಂದು ಮನೆಯಲ್ಲಿ ಮಾಲೀಕರು ನೆಲೆಸಿದ್ದರು. ಉಳಿದ ಎರಡು ಮನೆಗಳನ್ನು ಬಾಡಿಗೆಗೆ ಬಿಡಲಾಗಿತ್ತು. ನಿನ್ನೆ(ಆ.16) ಸಂಜೆ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಬಂದಿದ್ದ ಬ್ಯಾಂಕ್ ಸಿಬ್ಬಂದಿ ಮೂರು ಮನೆಗಳಿಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ. ಆದ್ರೆ ಮನೆ ಜಪ್ತಿ ಮಾಡುತ್ತಿದ್ದ ವೇಳೆ ಬಾಡಿಗೆ ಮನೆಯಲ್ಲಿಯೇ ಮಲಗಿದ್ದ ಬಾಡಿಗೆದಾರ ಕೂಡ ಲಾಕ್ ಆಗಿದ್ದಾನೆ. ಬಾಡಿಗೆದಾರ ಮನೆಯಲ್ಲಿರುವುದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿ ಸೀಲ್ ಹಾಕಿದ್ದಾರೆ. ಮನೆಯಲ್ಲಿದ್ದವರು ಹೊರಕಳಿಸದೆ ಬ್ಯಾಂಕ್ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದು ಮಗನನ್ನು ಮನೆಯ ಒಳಗೆಯೇ ಹಾಕಿ ಮನೆ ಸೀಜ್ ಮಾಡಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ತಡರಾತ್ರಿ ಪೊಲೀಸರ ನೆರವಿಂದ ಮಗನನ್ನು ಹೊರತರಲಾಗಿದೆ.
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಆಪರೇಷನ್, ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ? ಲಿಸ್ಟ್ನಲ್ಲಿ ಯಾರ್ಯಾರು?
ಇನ್ನು ಈ ಬಗ್ಗೆ ಬಾಡಿಗೆದಾರನ ಸಂಬಂಧಿ ಪ್ರಸನ್ನ ಎಂಬುವವರು ಮಾತನಾಡಿದ್ದು, ಮೂರು ತಿಂಗಳ ಹಿಂದೆ ಮಾಲೀಕ ಪುಟ್ಟಪ್ಪಗೆ 10 ಲಕ್ಷ ಹಣ ನೀಡಿ ನಮ್ಮ ತಂಗಿ ಮನೆ ಭೋಗ್ಯಕ್ಕೆ ಪಡೆದಿದ್ದರು. ಯಾವುದೇ ಮಾಹಿತಿ ನೀಡದೇ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ರಾತ್ರಿ ಮನೆಯಲ್ಲಿ ಮಗ ಮಲಗಿದ್ದ, ಇದನ್ನು ಗಮನಿಸದೆ ಮನೆ ಜಪ್ತಿ ಮಾಡಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಮಗನನ್ನು ಹೊರ ಕರೆತರಲಾಗಿದೆ ಎಂದು ಕೆಂಗೇರಿ ಉಪನಗರದಲ್ಲಿ ಬಾಡಿಗೆದಾರನ ಸಂಬಂಧಿ ಪ್ರಸನ್ನ ಬ್ಯಾಂಕ್ ಸಿಬ್ಬಂದಿ ಎಡವಟ್ಟಿಗೆ ಆಕ್ರೋಶ ಹೊರ ಹಾಕಿದರು.
ಬಾಡಿಗೆದಾರನ ಪರ ವಕೀಲ ಹೇಮಂತ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಹಲ್ಲೆ, ನಿಂದನೆ ಆರೋಪ ಮಾಡಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನ ಹೊರ ಹಾಕಿದ್ದರು. ಕೋರ್ಟ್ ಕಮಿಷನರ್ ದೈಹಿಕ ಹಲ್ಲೆ ನಡೆಸಿದ್ದಾರೆ. ನಮ್ಮ ಸಹೋದ್ಯೋಗಿನ ನಿಂದಿಸಿದ್ದಾರೆ, ನನಗೂ ಹೊಡೆದಿದ್ದಾರೆ. 2021 ಕೋರ್ಟ್ ಆರ್ಡರ್ ಇದೆ. ವಜಾ ಆಗಿರುವ ಆಗಿರುವ ಕೋರ್ಟ್ ಆರ್ಡರ್ ತೆಗೆದುಕೊಂಡು ಬಂದಿದ್ದಾರೆ. ಸಂಜೆ 7 ಘಂಟೆಗೆ ಮನೆಗಳ ಡೋರ್ ಲಾಕ್ ಮಾಡಿದ್ದಾರೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ವಕೀಲ ಹೇಮಂತ್ ಆರೋಪಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:24 am, Thu, 17 August 23