ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಟ್ರಾಫಿಕ್ ಸಮಸ್ಯೆ; ಕಾರಣ ಗುರುತು ಮಾಡಿದ ಸಿಟಿ ಟ್ರಾಫಿಕ್ ಪೊಲೀಸರು

ಸಿಲಿಕಾನ್​ ಸಿಟಿಗೆ ದಿನನಿತ್ಯ ಲಕ್ಷಾಂತರ ಜನರು ಉದ್ಯೋಗ, ಇತರ ಕಾರಣಗಳಿಗೆ ಬರುತ್ತಿರುತ್ತಾರೆ. ಅದರಂತೆ ಸಧ್ಯ ಕಡಿಮೆಯಾಗಿದ್ದ ಟ್ರಾಫಿಕ್ ಸಮಸ್ಯೆ, ಇದೀಗ ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಗಿದೆ. ಸಿಟಿ ಟ್ರಾಫಿಕ್ ಪೊಲೀಸರು ಕೆಲ ಕಾರಣಗಳು ಗುರುತು ಮಾಡಿದ್ದು, ಇಲ್ಲಿದೆ ನೋಡಿ.

Important Highlight‌
ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಟ್ರಾಫಿಕ್ ಸಮಸ್ಯೆ; ಕಾರಣ ಗುರುತು ಮಾಡಿದ ಸಿಟಿ ಟ್ರಾಫಿಕ್ ಪೊಲೀಸರು
ಬೆಂಗಳೂರು ಟ್ರಾಫಿಕ್
Follow us
Kiran HV
| Updated By: Kiran Hanumant Madar

Updated on:Jul 29, 2023 | 1:09 PM

ಬೆಂಗಳೂರು, ಜು.29: ಸಿಲಿಕಾನ್​ ಸಿಟಿಗೆ ದಿನನಿತ್ಯ ಲಕ್ಷಾಂತರ ಜನರು ಉದ್ಯೋಗ, ಇತರ ಕಾರಣಗಳಿಗೆ ಬರುತ್ತಿರುತ್ತಾರೆ. ಈ ಹಿನ್ನಲೆ ಮಹಾನಗರದಲ್ಲಿ ಟ್ರಾಫಿಕ್​ ಸಮಸ್ಯೆ ಇರುವುದು ಗೊತ್ತಿರುವ ಸಂಗತಿ. ಅದರಂತೆ ಸಧ್ಯ ಕಡಿಮೆಯಾಗಿದ್ದ ಟ್ರಾಫಿಕ್ ಸಮಸ್ಯೆ, ಇದೀಗ ಬೆಂಗಳೂರಿ(Bengaluru)ನಲ್ಲಿ ಮತ್ತೆ ಹೆಚ್ಚಾಗಿದೆ. ಈ ಕುರಿತು ಪರಿಶೀಲನೆ ಮಾಡಿರುವ ಸಿಟಿ ಟ್ರಾಫಿಕ್ ಪೊಲೀಸರು, ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಾಗಿರುವುದಕ್ಕೆ ಕೆಲ ಕಾರಣಗಳನ್ನು ಗುರುತು ಮಾಡಿದ್ದಾರೆ. ಅದು ಈ ಕೆಳಗಿನಂತಿದೆ.

1) ಮೆಟ್ರೋ ಹಾಗೂ ಇತರ ಕಾಮಗಾರಿಗಳು

ಕೆಲ ತಿಂಗಳ ಹಿಂದೆ ಟ್ರಾಫಿಕ್ ಸಮಸ್ಯೆಯಿಂದ ಹಲವು ಕಾಮಗಾರಿಗಳನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ನಿಂತಿದ್ದ ಕಾಮಗಾರಿಗಳು ಶುರುವಾಗಿದ್ದು, ಟ್ರಾಫಿಕ್​ ಸಮಸ್ಯೆ ಹೆಚ್ಚಳವಾಗಿದೆ.

2) ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆ ನಿರ್ಮಾಣ

ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆ ನಿರ್ಮಾಣದಿಂದ ಕೆ.ಆರ್​.ಪುರ ಮೂಲಕ ನಗರಕ್ಕೆ ಬರುವ ಹಾಗೂ ಕೆ ಆರ್ ಪುರ ಮೂಲಕ ನಗರದಿಂದ ಹೊರ ಹೋಗುವ ಎಲ್ಲಾ ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕುವಂತೆ ಆಗಿದೆ. ಅದರಂತೆ ಕೆ ಆರ್ ಪುರ, ಟಿಸಿ ಪಾಳ್ಯ, ಎನ್ ಜಿ ಎಫ್ ಸಿಗ್ನಲ್, ಬೈಯಪ್ಪನಹಳ್ಳಿ ಮಾರ್ಗವಾಗಿ ಇಂದಿರಾನಗರ ಕಡೆಗೆ ಟ್ರಾಫಿಕ್ ಆಗುತ್ತಿದೆ.

ಇದನ್ನೂ ಓದಿ:ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿರ್ವಾಹಣೆಗೆ ಮಹತ್ವದ ಹೆಜ್ಜೆ; ಇಂದಿನಿಂದ ಆಕಾಶದಲ್ಲಿ ಹಾರಾಡಲಿವೆ ಡ್ರೋನ್​ಗಳು

3) ಹೆಬ್ಬಾಳ ಔಟರ್ ರಿಂಗ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ

ಹೆಬ್ಬಾಳದಿಂದ ಕೆ.ಆರ್ ​ಪುರ ತೆರಳುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣಕ್ಕೆ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಸರ್ವಿಸ್​ ರಸ್ತೆಗಳಲ್ಲೂ ಸಹ ಟ್ರಾಫಿಕ್ ಉಂಟಾಗುತ್ತಿದೆ.

4) ಸಿಲ್ಕ್ ಬೋರ್ಡ್ ಮೆಟ್ರೋ ಕಾಮಗಾರಿ

ಸಿಲ್ಕ್ ಬೋರ್ಡ್​ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇದರಿಂದ ಪ್ರತಿನಿತ್ಯ ವಾಹನ ಸಂಚಾರವು ದಟ್ಟಣೆಯಿಂದ ಕೂಡಿದೆ.

5) ಬನ್ನೇರುಘಟ್ಟ ರಸ್ತೆ ಜಯದೇವ ಆಸ್ಪತ್ರೆ ಮೆಟ್ರೋ ಕಾಮಗಾರಿ

ಜಯದೇವ ಆಸ್ಪತ್ರೆಯಿಂದ ಬನ್ನೇರುಘಟ್ಟಕ್ಕೆ ಸಂಪರ್ಕ ಮಾಡುವ ರಸ್ತೆಯಲ್ಲಿ ಮೆಟ್ರೋ ಕೆಲಸ ನಡೆಯುತ್ತಿರುವ ಕಾರಣ ಬೆಂಗಳೂರು ಸೌತ್ ಭಾಗದಲ್ಲಿ ಟ್ರಾಫಿಕ್ ಉಂಟಾಗುತ್ತಿದೆ.

6) ಪೀಣ್ಯ ಎಲಿವೇಟೆಟ್ ಫ್ಲೈ ಒವರ್​ನಲ್ಲಿ ಭಾರಿ ವಾಹನಗಳ ಸಂಚಾರ ಇಲ್ಲ

ಇನ್ನು ಫ್ಲೈ ಒವರ್ ಕೇಬಲ್ ಕಟ್ಟಾದ ಪರಿಣಾಮ ಕಳೆದ ಹಲವಾರು ತಿಂಗಳಿಂದ ಪೀಣ್ಯ ಫ್ಲೈ ಒವರ್​ನಲ್ಲಿ ದೊಡ್ಡ ವಾಹನಗಳು ಸಂಚಾರ ಮಾಡಲು ಅವಕಾಶ ಇಲ್ಲ. ಹೀಗಾಗಿ ಭಾರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಕಾರಣ ಟ್ರಾಫಿಕ್ ಹೆಚ್ಚಾಗುತ್ತಿದೆ.

7) ಮತ್ತೆ ಕೆಲಸಕ್ಕೆ ಕಛೇರಿಗೆ ಕರೆದ ಐಟಿ ಬಿಟಿ ಕಂಪನಿಗಳು

ಕೊರೋನಾ ನಂತರ ಐಟಿಬಿಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಆದ್ರೆ, ಈಗ ಕಂಪನಿಗಳು ಕಛೇರಿಗೆ ಆಗಮಿಸಿ ಕೆಲಸ ಮಾಡಲು ಸೂಚಿಸುತ್ತಿವೆ. ಕೆಲ ಕಂಪನಿಗಳು ಹೈಬ್ರೀಡ್​ನಲ್ಲಿ ವಾರಕ್ಕೆ ಎರಡು ದಿನ ಕಛೇರಿ ಗೆ ಬರಲು ತಿಳಿಸಿದ್ರೆ, ಇನ್ನು ಕೆಲ ಕಂಪನಿಗಳು ಸಂಪೂರ್ಣ ವರ್ಕ್ ಫ್ರಮ್ ಆಫೀಸ್ ಮಾಡಲು ತಿಳಿಸಿವೆ. ಹೀಗಾಗಿ ವಾಹನ ಸಂಚಾರ ಹೆಚ್ಚಾಗಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಾಣುತ್ತಿರುವುದಾಗಿ ಕಾರಣಗಳನ್ನು ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Sat, 29 July 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು