ಬೆಂಗಳೂರು, ಆ.17: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಇತ್ತೀಚೆಗೆ ಸುಟ್ಟಗಾಯಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಸ್ಕಿನ್ ಬ್ಯಾಂಕ್ನಲ್ಲಿ(Skin Bank) ಬೇಡಿಕೆಯಷ್ಟು ಸ್ಕಿನ್ ಸಿಗುತ್ತಿಲ್ಲ. ರಾಜ್ಯದ ಪ್ರಪ್ರಥಮ ಸ್ಕಿನ್ ಬ್ಯಾಂಕ್ಗೆ ಸಂಕಷ್ಟ ಎದುರಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ(Victoria Hospital) ಸ್ಕಿನ್ ಬ್ಯಾಂಕ್ನಲ್ಲಿ ಸ್ಕಿನ್ ಅಭಾವ ಉಂಟಾಗಿದೆ. ರಾಜ್ಯದ ಪ್ರಪ್ರಥಮ ಸ್ಕಿನ್ ಬ್ಯಾಂಕ್ ರಾಜ್ಯ ರಾಜಧಾನಿಯ ಕೀರ್ತಿಯನ್ನ ಎತ್ತಿಹಿಡಿದಿದ್ದ ಚರ್ಮ ನಿಧಿ ಬ್ಯಾಂಕ್ನಲ್ಲಿ ಚರ್ಮದ(Skin) ಅಭಾವ ಎದುರಾಗಿದೆ. ಅದೆಷ್ಟೋ ಸುಟ್ಟಗಾಯಗಳಿಂದ ಬಳಲುತ್ತಿದ್ದವರಿಗೆ ಸಂಜೀವಿನಿಯಾಗಿದ್ದ ಚರ್ಮ ನಿಧಿ ಇದೀಗ ಚರ್ಮದ ಕೊರತೆ ಎದುರಿಸುತ್ತಿದೆ.
ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಸುಟ್ಟಗಾಯಗಳ ಪ್ರಕರಣ ಹೆಚ್ಚಾಗುತ್ತಿದೆ. ಆದ್ರೆ ಬೇಡಿಕೆಯಷ್ಟು ಸ್ಕಿನ್ ಗಾಯಾಳುಗಳಿಗೆ ಸಿಗುತ್ತಿಲ್ಲ ಯಾಕಂದ್ರೆ ಸುಟ್ಟಗಾಯಗಳಿಂದ ಬಳಲಿ ಬಂದವರಿಗೆ ಸಂಜೀವಿನಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಚರ್ಮನಿಧಿಗೆ ಚರ್ಮದ ಕೊರತೆ ಎದುರಾಗಿದೆ. ಹೌದು ಸುಟ್ಟಗಾಯದ ರೊಗಿಗಳಿಗೆ ಬೇಡಿಕೆ ಪೂರೈಸುವಷ್ಟು ಸ್ಕಿನ್ ಬ್ಯಾಂಕ್ ನಲ್ಲಿ ಕೊರತೆ ಎದುರಾಗಿದೆ. 2016 ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಚರ್ಮನಿಧಿ ಬ್ಯಾಂಕ್ ವಿಕ್ಟೋರಿಯಾದಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದೀಗ ರೋಗಿಗಳಿಗೆ ಸಾಕಾಗುವಷ್ಟು ಚರ್ಮ ಸ್ಟಾಕ್ ಇಲ್ಲದೇ ಇರೋದು ವೈದ್ಯರಿಗೆ ಆತಂಕ ತಂದಿದೆ. ಬೆಂಕಿ ಅವಘಡಗಳು, ತುರ್ತು ಸಂದರ್ಭಗಳಲ್ಲಿ ಸುಟ್ಟ ಗಾಯಗಳಿಂದ ಬಳಲುವ ರೋಗಿಗಳಿಗೆ ನೀಡಲು ಸ್ಕಿನ್ ಬ್ಯಾಂಕ್ನಲ್ಲಿ ಚರ್ಮದ ಕೊರತೆ ಕಂಡು ಬರ್ತಿದೆ.
ಇನ್ನು ಈ ಚರ್ಮ ನಿಧಿ ದೇಶದಲ್ಲೇ ಮೂರನೇ ಕೇಂದ್ರವಾಗಿದ್ದು, ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಚರ್ಮ ನಿಧಿ ಕಾರ್ಯ ನಿರ್ವಹಿಸುತ್ತಿವೆ. ಆ್ಯಸಿಡ್ ದಾಳಿ, ಆಕಸ್ಮಿಕ ಬೆಂಕಿ ಅವಘಡಗಳಿಂದ ಸುಟ್ಟು ಕುರೂಪಗೊಂಡ ದೇಹಕ್ಕೆ ಹೊಸ ರೂಪ ನೀಡುವ ಮೂಲಕ ರೋಗಿಯ ಜೀವ ಉಳಿಸಲು ಈ ಚರ್ಮ ನಿಧಿ ವರದಾನವಾಗಿದೆ. ಹೀಗಾಗಿ ಚರ್ಮವನ್ನ ದಾನಮಾಡುವಂತೆ ದಾನಿಗಳು ಮುಂದೆ ಬರುವಂತೆ ವೈದ್ಯರು ಜನರಲ್ಲಿ ಮನವಿ ಮಾಡ್ತಿದ್ದಾರೆ.
ಇದನ್ನೂ ಓದಿ: ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ‘ದಿ ಕೇರಳ ಸ್ಟೋರಿ ಖ್ಯಾತಿ’ಯ ಅದಾ ಶರ್ಮ
ಇತ್ತ ಚರ್ಮದಾನಿಗಳು ಇಳಿಕೆಯಾಗ್ತಿರೋದು, ಸಂಗ್ರಹಿಸಿದ ಚರ್ಮವನ್ನ ಬಳಕೆಗೆ ಯೋಗ್ಯ ಮಾಡುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿರೋದು ಚರ್ಮದ ಕೊರತೆಗೆ ಕಾರಣವಾಗ್ತಿದೆ. ಇನ್ನು ವ್ಯಕ್ತಿ ಸತ್ತ ಬಳಿಕ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕಿದ್ದು, ಈ ವೇಳೆ ಹಲವರಿಗೆ ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದು ಕೂಡ ಚರ್ಮದ ಅಭಾವಕ್ಕೆ ಕಾರಣವಾಗ್ತಿದೆ.
ಚರ್ಮ ದಾನದ ಬಗ್ಗೆ ಜನರಿಗೆ ಹೆಚ್ಚು ಅರಿವಿಲ್ಲ. ಬೇರೆ ಅಂಗಗಳ ಬಗ್ಗೆ ಇರುವಷ್ಟು ಜನ ಜಾಗೃತಿ ಇದಕ್ಕೆ ಇಲ್ಲ ಹೀಗಾಗಿ ದಾನಿಗಳು ಮುಂದೆ ಬರುತ್ತಿಲ್ಲ. ಜನರಲ್ಲಿ ಸ್ಕಿನ್ ದಾನದ ಬಗ್ಗೆ ಮೂಢನಂಬಿಕೆ ಇದೆ. ಸ್ಕಿನ್ ದಾನ ಮಾಡಿದ್ರೆ ದೇಹ ವಿರೂಪವಾಗುತ್ತೆ ಅನ್ನೊ ತಪ್ಪು ಕಲ್ಪನೆ ಇದೆ. ಚರ್ಮ ದಾನದ ಪ್ರಕ್ರಿಯೇ ಬಗ್ಗೆ ತಿಳುವಳಿಕೆ ಕೊರತೆ ಇದೆ. ಚರ್ಮ ದಾನ ಮಾಡುವುದರಿಂದ ರೋಗಿಗಳಿಗೆ ಇರುವ ಪ್ರಯೋಜನದ ಬಗ್ಗೆ ಮಾಹಿತಿ ಕೊರತೆ ಇದೆ. ಮೂಡನಂಭಿಕೆ ಹಾಗೂ ಧಾರ್ಮಿಕ ಕಾರಣಗಳಿಂದ ಸಾಕಷ್ಟು ಜನರು ಚರ್ಮ ದಾನ ಮಾಡುತ್ತಿಲ್ಲ.
ಸದ್ಯ ಚರ್ಮನಿಧಿಯಿಂದ ಆ್ಯಸಿಡ್ ದಾಳಿಗೆ ಒಳಗಾದವರು, ಸುಟ್ಟಗಾಯಗಳಿಂದ ಒಳಲುತ್ತಿರೋರಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದರಿಂದ ದಾನಿಗಳ ಸಂಖ್ಯೆ ಕೂಡ ಇಳಿಮುಖವಾಗ್ತಿದೆ. ಸದ್ಯ ಸಾವಿರಾರು ಜನರ ಚಿಕಿತ್ಸೆಗೆ ಬಳಕೆಯಾಗ್ತಿದ್ದ ರಾಜ್ಯದ ಮೊದಲ ಚರ್ಮನಿಧಿಗೆ ಎದುರಾಗಿರೋ ಸಮಸ್ಯೆ ದೂರ ಮಾಡಲು ಜನರು ಜಾಗೃತರಾಗಬೇಕಿದೆ. ಸತ್ತು ಮಣ್ಣುಸೇರುವ ದೇಹ, ಬದುಕಿರುವವರ ಬಾಳಿಗೆ ಬೆಳಕು ನೀಡಲಿ ಅನ್ನೋದೆ ನಮ್ಮ ಆಶಯ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:54 am, Thu, 17 August 23