ಚಂದ್ರನ ಮೇಲೆ ಬೆಂಗಳೂರಿನ ಹೆಸರು ರಿಜಿಸ್ಟರ್! ಐತಿಹಾಸಿಕ ಬೆಳವಣಿಗೆಗೆ ಸಾಕ್ಷಿಯಾಗುತ್ತಾ ನಮ್ಮ ಸಿಲಿಕಾನ್ ಸಿಟಿ?
ಚಂದ್ರಯಾನ -3 ಯಶಸ್ಸಿನ ಹಿಂದೆ ಹೆಮ್ಮೆಯ ಕನ್ನಡಿಗ ವಿಜ್ಞಾನಿಗಳು ಇದ್ದು, ಮಹತ್ವದ ಸಾಧನೆ ಮಾಡಿದ್ದಾರೆ. ಈ ಕುರಿತು ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ‘ಚಿಕ್ಕವನಿದ್ದಾಗ ಇಸ್ರೋ ಬಸ್ ನೋಡಿ ನಾನು ಬಸ್ ಹತ್ತುವ ಕನಸ್ಸು ಹೊಂದಿದ್ದೆ. ವಿಜ್ಞಾನ ತುಂಬಾ ಮುಖ್ಯವಾದದ್ದು, ಎಲ್ಲರೂ ಬೇರೆ ಬೇರೆ ಕ್ಷೇತ್ರ ಹುಡಕಿಕೊಂಡು ಹೋಗುತ್ತಾರೆ. ಅದ್ರೆ, ವಿಜ್ಞಾನಕ್ಕೆ ದೊಡ್ಡ ಬೆಲೆ ಇದೆ. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ವಿಜ್ಞಾನಿ ಬಿ.ಎನ್ ರಾಮಕೃಷ್ಣ ಅವರು ಹೇಳಿದರು.
ಬೆಂಗಳೂರು, ಆ.24: ನಿನ್ನೆ(ಆ.23) ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಜೊತೆಗೆ ಇಸ್ರೋ (ISRO ) ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ತೆಗೆದಿದ್ದು, ಇಸ್ರೋ ಅದನ್ನು ಹಂಚಿಕೊಂಡಿದೆ. ಇನ್ನು ಇದೀಗ ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ ಬೆಂಗಳೂರು(Bengaluru) ಹೆಸರಿಡಲು ಒತ್ತಾಯ ಕೇಳಿಬಂದಿದೆ.
ಚಂದ್ರನ ಮೇಲೆ ಬೆಂಗಳೂರು ಹೆಸರು ದಾಖಲು; ವಿಜ್ಞಾನಿ ಬಿ.ಎನ್ ರಾಮಕೃಷ್ಣ
ಚಂದ್ರಯಾನ -3 ಯಶಸ್ಸಿನ ಹಿಂದೆ ಹೆಮ್ಮಯ ಕನ್ನಡಿಗ ವಿಜ್ಞಾನಿಗಳು ಇದ್ದು, ಮಹತ್ವದ ಸಾಧನೆ ಮಾಡಿದ್ದಾರೆ. ಈ ಕುರಿತು ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ಈ ಕುರಿತು ‘ಯಾವ ದೇಶವು ಇಳಿಯದ ಚಂದ್ರನ ದಕ್ಷಿಣ ಭಾಗಕ್ಕೆ ಇಸ್ರೋ ತಲುಪಿದೆ. ಹೀಗಾಗಿ ನಿನ್ನೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಸ್ಥಳಕ್ಕೆ ಬೆಂಗಳೂರು ಹೆಸರಿಡಲು ಒತ್ತಾಯ ಕೇಳಿ ಬರುತ್ತಿದೆ ಎಂದು ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ ಎನ್ ರಾಮಕೃಷ್ಣ ಅವರು ಹೇಳಿದರು.
ಇದನ್ನೂ ಓದಿ:ಚಂದ್ರಯಾನ-3 ಯಶಸ್ವಿಯಲ್ಲಿ ಕನ್ನಡಿಗ ವಿಜ್ಞಾನಿ, ಯಾರವರು? ಇಲ್ಲಿದೆ ಯುವ ವಿಜ್ಞಾನಿಯ ಇಟ್ರಸ್ಟಿಂಗ್ ಸಂಗತಿ
ಇದು ನಮ್ಗು ಹೆಮ್ಮೆಯ ವಿಚಾರವಾಗಿದೆ
ನಿನ್ನೆ ಯಶಸ್ವಿಯಾಗಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ದಾಖಲಾಗಿದೆ. ಈ ಮೂಲಕ ಚಂದ್ರನ ಮೇಲೆ ಯಾವ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ. ಚಂದ್ರನ ಮೇಲೆ ಲ್ಯಾಂಡ್ ಆದ ಬೇರೆ ಬೇರೆ ದೇಶಗಳು, ಅವರಿಗೆ ಬೇಕಾದ ಹೆಸರು ನೀಡಿವೆ. ಈ ಬಾರಿಯ ಚಂದ್ರಯಾನ – 3 ಲ್ಯಾಂಡಿಂಗ್ ಸ್ಥಳಕ್ಕೆ ನಾವು ಬೆಂಗಳೂರು ಹೆಸರು ಇಡುವ ಬಗ್ಗೆ ಚರ್ಚೆ ಮಾಡುತ್ತೀವಿ. ಈ ಪ್ರಸ್ತಾಪವನ್ನು ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ ಎಂದರು.
ಕ್ಲಿಷ್ಟಕರವಾದ ಸಾಧನೆಯನ್ನು ನಾವು ಮಾಡಿದ್ದೇವೆ
ಇದು ನಮಗೆ ಹೆಮ್ಮೆಯ ವಿಚಾರವಾಗಿದ್ದು, ಭಾರತ ದೇಶದ ಹೆಸರು ದೊಡ್ಡದಾಗಿದೆ. ನಾವು ಲ್ಯಾಂಡ್ ಆದ ಸ್ಥಳಕ್ಕೆ ಯಾರು ಹೋಗಿಲ್ಲ. ಎಲ್ಲರೂ ಚಂದ್ರನ ಮದ್ಯ ಭಾಗಕ್ಕೆ ಹೋಗಿದ್ದಾರೆ. ಆದ್ರೆ, ನಾವು ಚಂದ್ರನ ದಕ್ಷಿಣ ಭಾಗಕ್ಕೆ ಹೋಗಿದ್ದೇವೆ. ನಾವು ಹೋದ ಸ್ಥಳದಲ್ಲಿ ಬೆಟ್ಟ ಗುಡ್ಡ ಇದ್ದು, ಹೆಚ್ಚು ಕ್ಲಿಷ್ಟಕರವಾಗಿದೆ. ಕನ್ನಡಿಗನಾಗಿ ಇಸ್ರೋದಲ್ಲಿ ಕೆಲಸ ನಿರ್ವಹಣೆ ದೊಡ್ಡ ಖುಷಿ ತಂದಿದೆ. ಚಿಕ್ಕವನಿದ್ದಾಗ ಇಸ್ರೋ ಬಸ್ ನೋಡಿ ನಾನು ಬಸ್ ಹತ್ತುವ ಕನಸ್ಸು ಹೊಂದಿದ್ದೆ. ವಿಜ್ಞಾನ ತುಂಬಾ ಮುಖ್ಯವಾದದ್ದು, ಎಲ್ಲರೂ ಬೇರೆ ಬೇರೆ ಕ್ಷೇತ್ರ ಹುಡಕಿಕೊಂಡು ಹೋಗ್ತಾರೆ. ಅದ್ರೆ, ವಿಜ್ಞಾನಕ್ಕೆ ದೊಡ್ಡ ಬೆಲೆ ಇದೆ. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ