ಬೆಂಗಳೂರು: ಕೈಕೊಟ್ಟ ರಿಯಲ್ ಎಸ್ಟೇಟ್ ಬ್ಯುಸಿನೆಸ್, ಉದ್ಯಮಿ ನೇಣಿಗೆ ಶರಣು
ರಿಯಲ್ ಎಸ್ಟೇಟ್ನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರಿಂದ ಉದ್ಯಮಿ ಬ್ರಿಜೇಶ್ ರೆಡ್ಡಿ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿಯ ಮ್ಯಾಂಗೋ ಎಕ್ರೆಸ್ ಲೇಔಟ್ನಲ್ಲಿ ನಡೆದಿದೆ. ಮತ್ತೊಂದೆಡೆ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಮೃತ ಯುವಕನ ಸಹೋದರನ ಮೇಲೆ ಅನುಮಾನಗಳು ವ್ಯಕ್ತವಾಗಿವೆ.
ಬೆಂಗಳೂರು, (ಆಗಸ್ಟ್ 13): ರಿಯಲ್ ಎಸ್ಟೇಟ್(Real estate )ಉದ್ಯಮಿ ಬ್ರಿಜೇಶ್ ರೆಡ್ಡಿ ಆತ್ಮಹತ್ಯೆ(Suiicde) ಮಾಡಿಕೊಂಡಿರುವ ಘಟನೆ ಬೆಂಗಳೂರು(Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿಯ ಮ್ಯಾಂಗೋ ಎಕ್ರೆಸ್ ಲೇಔಟ್ ನಡೆದಿದೆ. ಹೆಚ್ಎಸ್ಆರ್ ಲೇಔಟ್ನಲ್ಲಿ ಮನೆ, ಆಫೀಸ್ ಮಾಡಿಕೊಂಡಿದ್ದ ಬ್ರಿಜೇಶ್ ರೆಡ್ಡಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಷ್ಟವಾಗಿದ್ದರಿಂದ ಬ್ರಿಜೇಶ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರಿಯಲ್ ಎಸ್ಟೇಟ್ನಲ್ಲಿ ಸಾಕಷ್ಟು ಲಾಸ್ ಆಗಿದ್ದರಿಂದ ಇತ್ತೀಚೆಗೆ ಹೆಚ್.ಎಸ್.ಆರ್ ಬಳಿಯ ಮನೆ ಮಾರಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ: ಗಂಡ ಸತ್ತ ದಿನವೇ ಘೋರ ದುರಂತ
ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಬೆಂಗಳೂರು: ನಗರದ ಅಮೃತಹಳ್ಳಿಯ ಟೆಲಿಕಾಂ ಲೇಔಟ್‌ನ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುಭಾಷ್ ಕುಮಾರ್(30) ಎನ್ನುವ ಯುವಕನ ಶವ ಪತ್ತೆಯಾಗಿದೆ. ಆದ್ರೆ, ಪೊಲೀಸರು ಬರುವ ಮುನ್ನವೇ ಮೃತ ಸುಭಾಷ್ ಸಹೋದರ ಜಿತೇಂದ್ರ, ನೇಣುಬಿಗಿದುಕೊಂಡಿದ್ದ ಹಗ್ಗವನ್ನು ಕತ್ತರಿಸಿ ಶವವನ್ನು ಕೆಳಗಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿತೇಂದ್ರ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ