ಬೆಂಗಳೂರು, ಆ.20: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ(Naga Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿ ಹಿನ್ನೆಲೆ ನಿನ್ನೆ ಯಿಂದಲೇ ಜನ ಕೆ.ಆರ್. ಮಾರ್ಕೆಟ್ನಲ್ಲಿ(KR Market) ಹೂವು ಹಣ್ಣು ಕಾಯಿ ಖರೀದಿ ಮಾಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಸಾವಿರಾರು ಜನರು ಹೂವು, ಹಣ್ಣು, ಕಾಯಿ ಹಾಗೂ ತರಕಾರಿ ಖರೀದಿಸಿದ್ದಾರೆ. ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್ನಲ್ಲಿ ದರ ಏರಿಕೆ ಆಗಿದೆ. ದರ ಏರಿಕೆ ನಡುವೆಯೇ ಜನ ಹಬ್ಬಕ್ಕಾಗಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಹಾಗಾದ್ರೆ ಕೆ.ಆರ್. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಏಲಕ್ಕಿ ಬಾಳೆ ಹಣ್ಣು 140 ರಿಂದ 150 ರೂಪಾಯಿ ಆಗಿದೆ. ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡೋಣ ಅಂದರೆ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ, ಅರ್ಧ ಲೀಟರ್ ಗೆ ಎರಡು ರೂಪಾಯಿ ಏರಿಕೆ ಆಗಿದೆ. ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಮಲ್ಲಿಗೆ ಮಾರು, ಹಬ್ಬಕ್ಕೆ ಬರೋಬ್ಬರಿ 200 ರಿಂದ 250 ರೂಪಾಯಿ ಆಗಿದೆ. ತೆಂಗಿನಕಾಯಿ 20 ರೂಪಾಯಿ ಇದ್ದಿದ್ದು 35 ರಿಂದ 40 ರೂಪಾಯಿ ಆಗಿದೆ. ಇಷ್ಟೇ ಅಲ್ಲದೇ ಅಡಿಕೆ, ವಿಳ್ಳೆದೆಳೆ ಬಾಳೆಕಂದು, ಮಾವಿನಸೊಪ್ಪಿನ ದರವು ಏರಿಕೆ ಆಗಿದ್ದು ಈ ಬಾರಿ ಹಬ್ಬ ಮಾಡುವವರ ಜೇಬು ಸುಡಲಿದೆ.
ಇದನ್ನೂ ಓದಿ: ಗದಗ: ನಾಗರ ಪಂಚಮಿ ಹಬ್ಬದಂದು ಎರಡು ಹಾವು ಪ್ರತ್ಯಕ್ಷ: ನೀರು ಕುಡಿಸಿ ಸೆರೆ ಹಿಡಿದ ಸ್ನೇಕ ಸಾಗರ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ