ಬೆಂಗಳೂರು: ಗಂಡ ಬಾತ್ ರೂಮ್ನಲ್ಲಿ.. ಹೆಂಡತಿ ಪ್ರಿಯತಮನ ಬೈಕ್ನಲ್ಲಿ ಪರಾರಿ!
ಗಂಡ ಬಾತ್ ರೂಮಿಗೆ ಹೋಗಿದ್ದಾಗ ಇತ್ತ ನವ ವಿವಾಹಿತೆ ಮಹಿಳೆ ಪ್ರಿಯತಮನ ಜೊತೆ ಬೈಕ್ನಲ್ಲಿ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಮೇಶ್, ಪತ್ನಿಯನ್ನು ಹುಡಿಕೊಡಿ ಎಂದು ಪೊಲೀಸ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು, (ಆಗಸ್ಟ್ 20): ಬೆಂಗಳೂರಿನ (Bengaluru) ರಮೇಶ್ ಎನ್ನುವಾತ ಓರ್ವ ಯುವತಿಯನ್ನು ಇಷ್ಟಪಟ್ಟು ಎರಡು ತಿಂಗಳ ಹಿಂದೆ ಅಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದ (marriage). ಇನ್ನೇನು ಈಗಷ್ಟೇ ಸಂಸಾರದ ಬಂಡಿ ಶುರುವಾಗಿತ್ತು. ಹೊಸ ಜೀವನ ಕನಸು ಕಂಡಿದ್ದ ರಮೇಶ್ಗೆ ಹೆಂಡತಿ ಕೈಕೊಟ್ಟಿದ್ದಾಳೆ. ಹೌದು..ರಮೇಶನ ಪತ್ನಿ ಪ್ರಿಯತಮನೊಂದಿಗೆ (Lover) ಪರಾರಿಯಾಗಿದ್ದಾಳೆ. ಮೊನ್ನೇ ರಮೇಶ್ ಬಾತ್ ರೂಮ್ಗೆ ಹೋಗಿದ್ದಾಗ ಇತ್ತ ಹೆಂಡತಿ ಪ್ರಿಯತಮನ ಬೈಕ್ ಏರಿ ಎಸ್ಕೇಪ್ ಆಗಿದ್ದಾಳೆ. ಇದರಿಂದ ಕಂಗಾಲಾದ ರಮೇಶ್ ಪೊಲೀಸ್ ಮೆಟ್ಟಿಲೇರಿದ್ದು, ಹೆಂಡತಿಯನ್ನು ಹುಡುಕಿಕೊಡಿ ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಮೇಶ್ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಆದ್ರೆ, ಮೊನ್ನೆ ರಮೇಶ್ ಬಾತ್ ರೂಮ್ಗೆ ಹೋಗಿದ್ದಾಗ ಇತ್ತ ಹೆಂಡತಿ ಮನೆ ಬೀಗ ಹಾಕಿ ಲವರ್ ಜೊತೆ ಪರಾರಿಯಾಗಿದ್ದಾಳೆ. ಇದರಿಂದ ದಿಕ್ಕುತೋಚಂದಾತ ರಮೇಶ್ ಪತ್ನಿಯನ್ನು ಹುಡುಕೊಂಡಿ ಎಂದು ದೂರು ನೀಡಿದ್ದಾರೆ. ಕಾರ್ತಿಕ್ ಎಂಬುವನ ಜೊತೆ ಹೋಗಿದ್ದಾಳೆ ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ