ಬೆಂಗಳೂರು, ಆಗಸ್ಟ್ 21: ಆಟೋ ಚಾಲಕರ ಅನುಕೂಲಕ್ಕಾಗಿ ಆಟೋ ಚಾಲಕರ ಒಕ್ಕೂಟವು (Autorickshaw drivers’ Union) ನಮ್ಮ ಯಾತ್ರಿ ಆ್ಯಪ್ (Namma Yatri App) ಬಳಕೆಗೆ ತಂದಿದೆ. ಆದರೆ, ಇತರೆ ಆ್ಯಪ್ಗಳಂತೆ ಈ ಆ್ಯಪ್ ಬಳಕೆದಾರರು ಒಕ್ಕೂಟಕ್ಕೆ ದಿನಕ್ಕೆ 25 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಸದ್ಯ ಒಕ್ಕೂಟದ ಈ ನಿರ್ಧಾರಕ್ಕೆ ಆಟೋ ಚಾಲಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.
ನಮ್ಮ ಯಾತ್ರಿ ಆ್ಯಪ್ 2022 ರ ನವೆಂಬರ್ ತಿಂಗಳಲ್ಲಿ ಬಳಕೆಗೆ ತರಲಾಗಿದ್ದು, 2023ರ ಆಗಸ್ಟ್ 18 ರಿಂದ ಆಟೋ ಚಾಲಕರು ದಿನಕ್ಕೆ 25 ರೂಪಾಯಿಯನ್ನು ಒಕ್ಕೂಟಕ್ಕೆ ನೀಡಬೇಕು ಎಂಬ ನಿಯಮವನ್ನು ಜಾರಿ ಮಾಡಿದ್ದಾರೆ. ಹಲವಾರು ಚಾಲಕರು ಬುಕ್ಕಿಂಗ್ ದೃಢಪಡಿಸಿದ ಬಳಿಕ ಸ್ಥಳಕ್ಕೆ ಆಗಮಿಸಿ ಬುಕ್ಕಿಂಗ್ ರದ್ದುಗೊಳಿಸುವಂತೆ ಸವಾರರಿಗೆ ಮನವರಿಕೆ ಮಾಡಿದರೂ ಏನೂ ಪ್ರಯೋಜವಿಲ್ಲ. ದಿನಕ್ಕೆ ನಿಗದಿ ಮಾಡಿದ ಶುಲ್ಕ ಒಕ್ಕೂಟಕ್ಕೆ ಪಾವತಿಸಲೇಬೇಕು.
ಇದನ್ನೂ ಓದಿ: ಬೆಂಗಳೂರು: ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ
ಶುಲ್ಕ ನೀಡಬೇಕು ಎಂಬ ನಿಯಮ ಜಾರಿಯಿಂದ ನಾನು ದಿಗ್ಭ್ರಮೆಗೊಂಡೆ. ಉಚಿತ ಏನೂ ಇಲ್ಲ. ಇತರೆ ಆ್ಯಪ್ ಮತ್ತು ಈ ಆ್ಯಪ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಆಟೋ ಚಾಲಕ ನಾಗರಾಜ್ ಹೇಳಿದ್ದಾಗಿ ನ್ಯೂಸ್ 9 ವರದಿ ಮಾಡಿದೆ.
ಆಟೋರಿಕ್ಷಾ ಚಾಲಕರ ಸಂಘ ನವೆಂಬರ್ 2022 ರಲ್ಲಿ ನಮ್ಮ ಯಾತ್ರಿ ಎಂಬ ಆ್ಯಪ್ನ್ನು ತಯಾರಿಸಿತ್ತು. ಪ್ರಯಾಣಿಕರು ಈ ಆ್ಯಪ್ ಮೂಲಕ ಆಟೋ ಬುಕ್ ಮಾಡಿ ಸೇವೆ ಪಡೆಯಬಹುದಾಗಿದೆ. ನವೆಂಬರ್ನಿಂದ ಇಲ್ಲಿಯವರಗೆ ಆ್ಯಪ್ ಮೂಲಕ ರಿಕ್ಷಾ ಚಾಕಲರು ಸುಮಾರು 5.6 ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾರೆ. ಆ್ಯಪ್ನಿಂದ ದೊರೆತ ಮಾಹಿತಿ ಪ್ರಕಾರ, 41,112 ರಿಕ್ಷಾ ಚಾಲಕರು ಮತ್ತು 3,35,653 ಬಳಕೆದಾರರು ಆ್ಯಪ್ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮಾರ್ಚ್ 6ರ ವರೆಗೆ ಚಾಲಕರು 3,37,762 ಟ್ರೀಪ್ಗಳನ್ನು ಪೂರ್ಣಗೊಳಿಸಿದ್ದು, ಮಾರ್ಚ್ 5ರ ವರೆಗೆ 9 ಲಕ್ಷ ಹಣ ಗಳಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Mon, 21 August 23