ಮೆಟ್ರೋನಲ್ಲಿ ಒನ್ ನೇಷನ್‌ ಒನ್ ಕಾರ್ಡ್‌ಗೆ BMRCL ಚಾಲನೆ, ಏನಿದು ಎನ್​ಸಿಎಂಸಿ ಕಾರ್ಡ್? ಇಲ್ಲಿದೆ ಮಾಹಿತಿ

| Updated By: Ayesha Banu

Updated on: Aug 21, 2023 | 12:57 PM

NCMC Card: ಆ.21ರ ನಾಗರ ಪಂಚಮಿಯ ಶುಭದಿನವಾದ ಇಂದು ಬಿಎಂಆರ್​ಸಿಎಲ್(BMRCL) ಒನ್ ನೇಷನ್‌ ಒನ್ ಕಾರ್ಡ್‌ಗೆ ಚಾಲನೆ ನೀಡಿದೆ. ಇಂದಿನಿಂದ ನಮ್ಮ ಮೆಟ್ರೋದಲ್ಲಿ ಎನ್​ಸಿಎಂಸಿ ಕಾರ್ಡ್ ಆಕ್ಟಿವ್‌ ಆಗಲಿದೆ. ಇಂದಿನಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಎನ್​ಸಿಎಂಸಿ ಕಾರ್ಡ್ ಲಭ್ಯವಾಗಲಿದೆ. ದೇಶದ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಬಂಕ್‌, ಮಾಲ್‌ಗಳಲ್ಲಿ ಈ ಕಾರ್ಡನ್ನು ಬಳಸಬಹುದು.

ಮೆಟ್ರೋನಲ್ಲಿ ಒನ್ ನೇಷನ್‌ ಒನ್ ಕಾರ್ಡ್‌ಗೆ BMRCL ಚಾಲನೆ, ಏನಿದು ಎನ್​ಸಿಎಂಸಿ ಕಾರ್ಡ್? ಇಲ್ಲಿದೆ ಮಾಹಿತಿ
ಒನ್ ನೇಷನ್‌ ಒನ್ ಕಾರ್ಡ್‌ಗೆ ಬಿಎಂಆರ್​ಸಿಎಲ್ ಚಾಲನೆ
Follow us on

ಬೆಂಗಳೂರು, ಆ.21: ನಮ್ಮ ಮೆಟ್ರೋ(Namma Metro) ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ (ಎನ್​ಸಿಎಂಸಿ) ಕಾರ್ಡ್‌ಗಳ ಮಾರಾಟ ಆರಂಭವಾಗಿದೆ. ಆ.21ರ ನಾಗರ ಪಂಚಮಿಯ ಶುಭದಿನವಾದ ಇಂದು ಬಿಎಂಆರ್​ಸಿಎಲ್(BMRCL) ಒನ್ ನೇಷನ್‌ ಒನ್ ಕಾರ್ಡ್‌ಗೆ ಚಾಲನೆ ನೀಡಿದೆ. ಇಂದಿನಿಂದ ನಮ್ಮ ಮೆಟ್ರೋದಲ್ಲಿ ಎನ್​ಸಿಎಂಸಿ ಕಾರ್ಡ್ ಆಕ್ಟಿವ್‌ ಆಗಲಿದೆ. ಇಂದಿನಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಎನ್​ಸಿಎಂಸಿ ಕಾರ್ಡ್ ಲಭ್ಯವಾಗಲಿದೆ. ದೇಶದ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಬಂಕ್‌, ಮಾಲ್‌ಗಳಲ್ಲಿ ಈ ಕಾರ್ಡನ್ನು ಬಳಸಬಹುದು. ಬೆಳಗ್ಗೆ 8ರಿಂದ 11, ಸಂಜೆ 5ರಿಂದ ರಾತ್ರಿ 8ರವರೆಗೆ ಕಾರ್ಡ್ ಪಡೆಯಬಹುದು. ಹಾಗೂ ಮೆಟ್ರೋ ನಿಲ್ದಾಣಗಳಲ್ಲೇ NCMC ಕಾರ್ಡ್‌ ರೀಚಾರ್ಜ್ ಮಾಡಬಹುದು.

ಎನ್​ಸಿಎಂಸಿ ಕಾರ್ಡ್ ಪಡೆಯುವುದು ಹೇಗೆ?

ಪ್ರಸ್ತುತ ಬಳಕೆಯಲ್ಲಿರುವ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಕೋಸ್ಟ್ ಲೂಪ್ ಕಾರ್ಡ್ ಗಳಾಗಿದ್ದು, ನಮ್ಮ ಮೆಟ್ರೋ ಪಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. ಆದರೆ ಒನ್ ನೇಷನ್ ಒನ್ ಕಾರ್ಡ್ ಗೆ ಅನುಗುಣವಾಗಿ ರುಪೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ತೆರೆದ ಲೂಪ್‌ ಕಾರ್ಡ್ ಗಳಾಗಿದ್ದು, ಈ ಕಾರ್ಡನ್ನು ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಗಳಲ್ಲಿ ಹಾಗೂ ಹೆಚ್ಚುವರಿಯಾಗಿ, ರಿಟೇಲ್ ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಇತ್ಯಾದಿ ಅಗತ್ಯಗಳಿಗಾಗಿ ಬಳಸಲು ಅನುಕೂಲಕರವಾಗಿರುತ್ತದೆ. ಇಂದಿನಿಂದ ನಮ್ಮ ಮೆಟ್ರೋದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ಗಳು ಖರೀದಿಗೆ ಲಭ್ಯವಿದೆ. ರುಪೇ ಎನ್‌ಸಿಎಂಸಿ ಕಾರ್ಡ್ ಗಳು ತ್ವರಿತ ವಿತರಣೆಗಾಗಿ, ಪ್ರಯಾಣಿಕರು ತಮ್ಮ ಗ್ರಾಹಕರ ವಿವರಗಳನ್ನು (KYC), NAMMAMETRO.AGSINDIA.COM ವೆಬ್‌ಸೈಟ್ ಅಥವಾ BMRCL RBL Bank NCMC ಅಪ್ಲಿಕೇಶನ್ ನಲ್ಲಿ ಸ್ವಯಂ-ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆ ನೋಂದಾಯಿತ ಮೊಬೈಲ್ ಸಂಖ್ಯೆ, ಒಟಿಪಿ ಟಿಕೆಟ್‌ ಕೌಂಟರ್ ಇರುವ ನಿರ್ವಾಹಕರಿಗೆ ನೀಡಿ ಕಾರ್ಡ್ ಖರೀದಿಸಬಹುದು.

ಇದನ್ನೂ ಓದಿ: ನಮ್ಮ ಮೆಟ್ರೋ 3ನೇ ಹಂತಕ್ಕೆ ತ್ವರಿತ ಅನುಮೋದನೆ, ಬಿಎಂಆರ್​ಸಿಎಲ್​ಗೆ ಪೂರ್ಣಾವಧಿ ಎಂಡಿ ನೇಮಕಕ್ಕೆ ಕೇಂದ್ರಕ್ಕೆ ತೇಜಸ್ವಿ ಸೂರ್ಯ ಮನವಿ

ಕಾರ್ಡ್‌ನ ಮಾರಾಟ ಬೆಲೆ ರೂ. 50/- ಸ್ಮಾರ್ಟ್ ಕಾರ್ಡ್‌ಗಳಲ್ಲಿ ಲಭ್ಯವಿರುವ ಶೇ 5% ಪ್ರಯಾಣ ದರದ ರಿಯಾತಿಯು ಎನ್​ಸಿಎಂಸಿ ಕಾರ್ಡ್‌ ಗಳಿಗೂ ಅನುಗುಣವಾಗುತ್ತದೆ. ಇನ್ನೂ ಕಾರ್ಡ್ ಅನ್ನು ಬಳಸಿ ದೇಶದ ಯಾವುದೇ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು. ಮತ್ತೊಂದು ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳಲ್ಲೂ ಈ ಕಾರ್ಡ್ ಮೂಲಕ ಪ್ರಯಾಣ ಮಾಡಲು ಅವಕಾಶವಿದೆ. ಆದರೆ ರೈಲ್ವೆ ಇಲಾಖೆ ಮತ್ತು ನಾಲ್ಕು ಸಾರಿಗೆ ನಿಗಮಗಳು ಸದ್ಯ ಈ ಅಪ್ಡೇಟ್ ಅಳವಡಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ‌ ಕಾರ್ಡ್ ಮೂಲಕ ದೇಶದ ಎಲ್ಲಾ ಸಾರಿಗೆಗಳಲ್ಲಿಯೂ ಪ್ರಯಾಣ ಮಾಡಬಹುದು ಎಂದು ಮೆಟ್ರೋ ತಜ್ಞ ಶ್ರೀ ಹರಿ ತಿಳಿಸಿದ್ದಾರೆ.

ಇನ್ನೂ ರೂಪೇ ಕಾಮನ್ ಮೊಬಿಲಿಟಿ ಕಾರ್ಡ್‌ಗಳು (NCMC) ಎಲ್ಲಾ ಆರ್.ಬಿ.ಎಲ್ (RBL) ಬ್ಯಾಂಕ್ ಶಾಖೆಗಳಲ್ಲೂ ಲಭ್ಯವಿರುತ್ತದೆ. ಪ್ರಯಾಣಕ್ಕೆ ಮತ್ತು ಶಾಪಿಂಗೆ ಬೇಕಾಗಿರುವ ವಿವಿಧ ಕಾರ್ಡುಗಳ ಅಗತ್ಯತೆಯನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಮೆಟ್ರೋ ಮುಂದಿನ ದಿನಗಳಲ್ಲಿ ಕಾಂಟ್ರ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್‌ಗಳನ್ನು (CSC) ಹಂತ ಹಂತವಾಗಿ ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಬೆಳಿಗ್ಗೆ 8.00 ಗಂಟೆಯಿಂದ 11.00 ಗಂಟೆಯವರೆಗೆ ಮತ್ತು ಸಂಜೆ 5.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ