BMTC ವೋಲ್ವೋ ಬಸ್ಗಳಲ್ಲಿ ಸೊಳ್ಳೆ ಕಾಟ, ವಾಹನವನ್ನು ಪರಿಶೀಲನೆಗೆ ಸೂಚನೆ
ಬಿಎಂಟಿಸಿಯ ವೋಲ್ವೋ ಬಸ್ನಲ್ಲಿ ಸೊಳ್ಳೆಗಳ ಕಾಟ ಇರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಘಟಕ-25, ಬಸ್ ಚಾಲನೆಗೂ ಮುನ್ನ ಪರಿಶೀಲಿಸುವಂತೆ ಆದೇಶಿಸಿದೆ.
ಬೆಂಗಳೂರು, ಜುಲೈ 21: ಬಿಎಂಟಿಸಿಯ (BMTC) ವೋಲ್ವೋ ಬಸ್ನಲ್ಲಿ ಸೊಳ್ಳೆಗಳ (Mosquitos) ಕಾಟ ಇರುವ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಘಟಕ-25ರ ಹಿರಿಯ ಘಟಕ ವ್ಯವಸ್ಥಾಪಕರು ಬಸ್ ಚಾಲನೆಗೂ ಮುನ್ನ ಪರಿಶೀಲಿಸುವಂತೆ ಆದೇಶಿಸಿದ್ದಾರೆ. ಬಸ್ನಲ್ಲಿ ಸೊಳ್ಳೆಗಳ ಕಾಟದ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡ್ರೈವರ್ ಕಂಡಕ್ಟರ್ಗಳಿಗೆ ಸೂಚನೆ ನೀಡಿದ್ದಾರೆ.
ಕಾರ್ಯಾಚರಣೆ ಮಾಡಿಕೊಂಡು ಒಂದು ಘಟಕದಲ್ಲಿ ನಿಲ್ಲಿಸಿದಾಗ ವಾಹನದ ಒಳಗೆ ಸೊಳ್ಳೆಗಳು ಸೇರಿಕೊಳ್ಳುತ್ತಿವೆ. ಮತ್ತೆ ಆ ಬಸ್ಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋದಾಗ ಪ್ರಯಾಣಿಸುವ ಪ್ರಯಾನಿಕರಿಗೆ ಸೊಳ್ಳೆಗಳು ಕಚ್ಚಲಾರಂಭಿಸುತ್ತವೆ. ಈ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ ಎಂದು ಹಿರಿಯ ಘಟಕ ವ್ಯವಸ್ಥಾಪಕರು ಹೇಳಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್: ಇಲ್ಲಿದೆ ಮಾಹಿತಿ
ಬಸ್ಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ಚಾಲನ ಸಿಬ್ಬಂದಿ ಬಸ್ ಒಳಭಾಗದಲ್ಲಿ ಪರಿಶೀಲನೆ ನಡೆಸಬೇಕು, ಇಂಜಿನ್ ಸ್ಪಾರ್ಟ್ ಮಾಡಿ, ಎರಡು ಬಾಗಿಲುಗಳನ್ನು ಓಪನ್ ಮಾಡಿ ಬ್ಲೋವರ್ ಆನ್ ಮಾಡಬೇಕು. ಸೊಳ್ಳೆಗಳಿರುವುದು ಕಂಡು ಬಂದಲ್ಲಿ ಬಟ್ಟೆಯಿಂದ ಓಡಿಸಬೇಕು. ಸೊಳ್ಳೆಗಳು ಇಲ್ಲದೇ ಇರುವ ಬಗ್ಗೆ ಖಾತರಿಪಡಿಸಿಕೊಂಡ ನಂತರ ಬಸ್ಗಳನ್ನು ರಸ್ತೆಗೆ ಇಳಿಸಲು ತೆಗೆದುಕೊಂಡು ಹೋಗಬೇಕು ಎಂದು ಆದೇಶಿಸಿದ್ದಾರೆ.
ಬಿಎಂಟಿಸಿ ಹವಾನಿಯಂತ್ರಿತ ಬಸ್ನಲ್ಲಿ ಸೊಳ್ಳೆ ಕಾಟವಿದೆ ಎಂದು ಸೋಷಿಯಲ್ ಕಾಪ್ ಎಂಬ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು. ಪ್ರಯಾಣಿಕರೊಬ್ಬರ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್ ಫೋಟೋ ಟ್ವೀಟರ್ನಲ್ಲಿ ಹಂಚಿಕೊಳ್ಳಲಾಗಿತ್ತು. “ಬಿಎಂಟಿಸಿ ಎಸಿ ಬಸ್ನಲ್ಲಿ ಸೊಳ್ಳೆಗಳ ಕಾಟ. ಕಾಂಗ್ರೆಸ್ ಸರ್ಕಾರ ಬಿಎಂಟಿಸಿ ಎಸಿ ಬಸ್ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ?” ಎಂದು ಪ್ರಶ್ನಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ