ಇಂಗ್ಲೆಂಡ್ ಟೆಕ್ಕಿಗೆ ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಖಾತೆಯಲ್ಲಿ 84 ಲಕ್ಷ ರೂ. ಫ್ರೀಜ್ ಮಾಡಿದ ಪೊಲೀಸರು
ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಮಹಿಳೆಯ ನಂಬಿ ಇಂಗ್ಲೆಂಡ್ನ ಟೆಕ್ಕಿಯೊಬ್ಬರು 1.14 ಕೋಟಿ ರೂ. ಕಳೆದುಕೊಂಡಿದ್ದರು. ಪ್ರಕರಣ ಸಂಬಂಧ ವೈಟ್ ಫೀಲ್ಡ್ ಸಿಇಎನ್ ಪೋಲಿಸರು ಆರೋಪಿ ಅಕೌಂಟ್ನಲ್ಲಿ ಬರೋಬ್ಬರಿ 84 ಲಕ್ಷ ರೂ. ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಆಗಸ್ಟ್ 1: ಇಂಗ್ಲೆಂಡ್ನ ಟೆಕ್ಕಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ (Matrimonial Site) ಪರಿಚಯವಾದ ಮಹಿಳೆ 1.14 ಕೋಟಿ ರೂ. ವಂಚಿಸಿದ (Cheating) ಪ್ರಕರಣ ನಡೆದಿದೆ. ಈ ಬಗ್ಗೆ ವೈಟ್ ಫೀಲ್ಡ್ ಸಿಇಎನ್ ಪೋಲಿಸರಿಗೆ ಟೆಕ್ಕಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿ ಅಕೌಂಟ್ನಲ್ಲಿದ್ದ ಬರೋಬ್ಬರಿ 84 ಲಕ್ಷ ರೂ. ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ನ ಟೆಕ್ಕಿಯೊಬ್ಬರು ತರಬೇತಿಗಾಗಿ ಕಳೆದ ತಿಂಗಳು ಬೆಂಗಳೂರಿಗೆ ಬಂದಿದ್ದರು. ಈ ನಡುವೆ ಮದುವೆಯಾಗಲು ಮ್ಯಾಟ್ರಿಮೋನಿ ವೆಬ್ ಸೈಟ್ನಲ್ಲಿ ಯುವತಿಯನ್ನು ಹುಡುಕುತ್ತಿದ್ದರು. ಈ ವೇಳೆ ಫೋಟೋವೊಂದನ್ನು ನೋಡಿ ನಂಬರ್ಗೆ ಮೆಸೇಜ್ ಮಾಡಿದ್ದಾರೆ. ಆಕೆಯೂ ರೀಪ್ಲೆ ಮಾಡಿದ್ದಾಳೆ. ನಂತರ ಅವರಿಬ್ಬರ ನಡುವೆ ಪರಸ್ಪರ ಚಾಟಿಂಗ್ ಶುರುವಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ ₹79 ಲಕ್ಷ ವಂಚನೆ; 7 ಅಧಿಕಾರಿಗಳ ವಿರುದ್ಧ FIR
ಕೆಲ ದಿನಗಳ ಬಳಿಕ ಇಬ್ಬರ ನಡುವೆ ವಿಡಿಯೋ ಕಾಲ್ ಕೂಡ ಶುರುವಾಯಿತು. ಆ ಯುವತಿ ಕೆಲ ದಿನಗಳ ಬಳಿಕ ತನ್ನ ಅಮ್ಮನಿಗೆ ಆರೋಗ್ಯ ಸರಿಯಿಲ್ಲ, ಹೀಗಾಗಿ 15,000 ನೀಡುವಂತೆ ಟೆಕ್ಕಿಗೆ ಮನವಿ ಮಾಡುತ್ತಾಳೆ. ಆಕೆಯನ್ನು ನಂಬಿದ ಟೆಕ್ಕಿ ಹಣ ವರ್ಗಾಯಿಸುತ್ತಾರೆ. ಕೆಲ ದಿನಗಳ ನಂತರ ಮತ್ತೆ ವಿಡಿಯೋ ಕಾಲ್ ಮೂಲಕ ಮಾತನಾಡುವಾಗ ಯುವತಿ ಏಕಾಏಕಿಯಾಗಿ ಬೆತ್ತಲಾಗಿದ್ದಾಳೆ. ಇದನ್ನು ರೆಕಾರ್ಡ್ ಕೂಡ ಮಾಡಿದ್ದಾಳೆ.
ವಿಡಿಯೋ ಮುಂದಿಟ್ಟುಕೊಂಡು ಇದನ್ನು ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇನೆ ಅಂತ ಟೆಕ್ಕಿಗೆ ಬೆದರಿಕೆಯೊಡ್ಡಲು ಆರಂಭಿಸಿದ್ದಾಳೆ. ಅದೇ ರೀತಿ ಬೆದರಿಕೆ ಹಾಕುತ್ತಾ ಹಂತ ಅಂತ ಹೋಗಿ ಹಣ ವರ್ಗಾಯಿಸಿ 1 ಕೋಟಿ 14 ಲಕ್ಷ ವನ್ನು ವಸೂಲಿ ಮಾಡಿದ್ದಾಳೆ. ಬೆದರಿಕೆಗೆ ಬೇಸತ್ತ ಟೆಕ್ಕಿ ಅಂತಿಮವಾಗಿ ಪೊಲೀಸ್ ಠಾಣೆ ದೂರು ನೀಡುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಖಾತೆಯಿಂದ 84 ಲಕ್ಷ ಹಣ ಫ್ರೀಜ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Tue, 1 August 23