ಬೆಂಗಳೂರಿನಲ್ಲಿ ಹೆಚ್ಚಿದ ಪುಂಡರ ಅಟ್ಟಹಾಸ; ನಿಂತಿದ್ದ ವಾಹನದ ಮೇಲೆ ಕಲ್ಲು ಎತ್ತಿಹಾಕಿ ಗ್ಲಾಸ್ ಪುಡಿ ಮಾಡಿದ ದುಷ್ಕರ್ಮಿಗಳು

| Updated By: Kiran Hanumant Madar

Updated on: Aug 16, 2023 | 11:46 AM

ರಸ್ತೆ ಪಕ್ಕದಲ್ಲಿ ನಿಂತಿದ್ದ ಹತ್ತಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಹೊಡೆದಾಕಿದ ಕಿಡಿಗೇಡಿಗಳು, ಏನೂ ಗೊತ್ತಿಲ್ಲವೆಂಬಂತೆ ಎಸ್ಕೇಪ್ ಆದ ಘಟನೆ ಮಹಾನಗರದ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಿದ ಪುಂಡರ ಅಟ್ಟಹಾಸ; ನಿಂತಿದ್ದ ವಾಹನದ ಮೇಲೆ ಕಲ್ಲು ಎತ್ತಿಹಾಕಿ ಗ್ಲಾಸ್ ಪುಡಿ ಮಾಡಿದ ದುಷ್ಕರ್ಮಿಗಳು
ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು
Follow us on

ಬೆಂಗಳೂರು, ಆ.16: ನಿಂತಿರುವ ವಾಹನದ ಮೇಲೆ ಸೈಜು ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಗ್ಲಾಸ್ ಪುಡಿ ಮಾಡಿದ ಘಟನೆ ಕೆಂಗೇರಿ(Kengeri) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಫುಟ್​ಪಾತ್ ಮೇಲಿನ ಕಲ್ಲನ್ನು ತೆಗೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ಹತ್ತಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಹೊಡೆದಾಕಿ, ಏನೂ ಗೊತ್ತಿಲ್ಲವೆಂಬಂತೆ ಎಸ್ಕೇಪ್ ಆಗಿದ್ದಾರೆ. ಈ ಕುರಿತು ವಾಹನ ಮಾಲೀಕರು ಕೆಂಗೇರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಸ್ವಾತಂತ್ರ್ಯೋತ್ಸವದ ದಿನದಂದೂ ಸಹ ನಿಲ್ಲದ ಪುಂಡರ ಹಾವಳಿ; ತ್ರಿವರ್ಣ ಧ್ವಜ ಹಿಡಿದು ಫ್ಲೈಓವರ್ ಮೇಲೆ ಬೈಕ್ ವೀಲಿಂಗ್

ಬೆಂಗಳೂರು: ವೀಲಿಂಗ್​ ಹಾವಳಿಗೆ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಪುಂಡರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅದರಂತೆ ನಿನ್ನೆ(ಆ.15) ಸ್ವಾತಂತ್ರ್ಯೋತ್ಸವ ಇರುವ ಹಿನ್ನಲೆ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕೆಲ ಪುಂಡರು ಮೂರ್ನಾಲ್ಕು ಬೈಕ್​ಗಳಲ್ಲಿ ಬಂದು ವಿಲೀಂಗ್ ಮಾಡಿದ್ದಾರೆ. ಹೌದು, ದೇಶದ ತ್ರಿವರ್ಣ ಧ್ವಜ ಹಿಡಿದುಕೊಂಡು ವೀಲಿಂಗ್ ಮಾಡಿದ್ದು, ಯುವಕರ ಶೋಕಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ಯ ಪಡಿಸಿದ್ದಾರೆ. ಇನ್ನು ಯುವಕರ ವಿಲಿಂಗ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಮುಂದುವರಿದ ನೈತಿಕ ಪೊಲೀಸ್​ಗಿರಿ; ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಆಟೋದಲ್ಲಿ ಕೂರಿಸಿಕೊಂಡು ಹೋಗ್ತಿದ್ದಾಗ ಹಲ್ಲೆ

ಗೃಹಜ್ಯೋತಿ ತಂದ ಸಂಕಷ್ಟ; ಹೆಸ್ಕಾಂ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ ನೌಕರನ ಮೇಲೆ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಮಹಾಲಕ್ಷ್ಮಿ ಬಡವಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಯ್ಯ ಗಣಾಚಾರಿ ಹಲ್ಲೆಗೊಳಗಾದ ಹೆಸ್ಕಾಂ ಸಿಬ್ಬಂದಿ. ಆರೋಪಿ ಅಬ್ದುಲ್ ಎಂಬುವವರಿಂದ ಹಲ್ಲೆ. ಆರೋಪಿ ಅಬ್ದುಲ್ ಹೆಸ್ಕಾಂ ಗ್ರಾಹಕರಾಗಿದ್ದು, ಕಳೆದ ಎರಡು ಮೂರು ತಿಂಗಳ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಈ ತಿಂಗಳ ಬಿಲ್ 5 ಸಾವಿರಕ್ಕಿಂತ ಜಾಸ್ತಿ ಬಂದಿದೆ. ಜೊತೆಗೆ ವಿದ್ಯುತ್ ಬಳಕೆ 200 ಯೂನಿಟ್ ಜಾಸ್ತಿ ಇರುವ ಹಿನ್ನೆಲೆ ಗೃಹ ಜ್ಯೋತಿ ಯೋಜನೆ ಸಹ ಕ್ಯಾನ್ಸಲ್ ಆಗಿದೆ. ಇದರಿಂದ ಕೋಪಗೊಂಡಿದ್ದ ಅಬ್ದುಲ್ ಕರೆಂಟ್ ಬಿಲ್ ನೀಡಲು ಹೋದ ಮಲ್ಲಯ್ಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಅಶೋಕನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿರುವ ಆರೋಪಿ ಅಬ್ದುಲ್​ನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Wed, 16 August 23