ವರಮಹಾಲಕ್ಷ್ಮೀ ಹಬ್ಬಕ್ಕೆ ರೆಡಿಯಾದ ರೆಡಿಮೇಡ್ ಲಕ್ಷ್ಮೀಯರು, ಕೆಆರ್ ಮಾರುಕಟ್ಟೆಯಲ್ಲಿ ಇವರದ್ದೇ ಕಾರುಬಾರು
ಹಬ್ಬದಂದು ಮನೆ ಕೆಲಸ, ಊಟ ಹಾಗೂ ಮಕ್ಕಳನ್ನು ಸಿಂಗರಿಸುವ ಕೆಲಸದ ನಡುವೆ ಬಿಡುವು ಸಿಗುವುದಿಲ್ಲ. ಈ ರೆಡಿಮೇಡ್ ಲಕ್ಷ್ಮೀಯರಿಂದ ಸಮಯದ ಉಪಯೋಗವಾಗಲಿದೆ ಎಂದು ಮಹಿಳೆಯರು ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ಈ ರೆಡಿಮೇಡ್ ಲಕ್ಷ್ಮೀಯರ ಬೆಲೆ 500 ರೂಪಾಯಿಯಿಂದ 20 ಸಾವಿರದವರೆಗೆ ಇದ್ದು ವಿವಿಧ ಅಲಂಕಾರಗಳಲ್ಲಿ ಇದೆ.
ಬೆಂಗಳೂರು, ಆ.19: ಆಷಾಢಮಾಸ(Ashada Masam) ಮುಗಿದು ಶ್ರಾವಣಮಾಸ(Shravana Masa) ಬಂದೇ ಬಿಡ್ತು. ಶ್ರಾವಣ ಮಾಸ ಹಲವು ಹಬ್ಬಗಳನ್ನು ಹೊತ್ತು ತಂದಿದೆ. ಅದ್ರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ(Varamahalakshmi Festival) ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ(KR Market) ರೆಡಿಮೇಡ್ ಲಕ್ಷ್ಮೀಯರು ಲಗ್ಗೆಯಿಟ್ಟಿದ್ದಾರೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದು ವಾರ ಮಾತ್ರ ಬಾಕಿ ಇದ್ದು ಈಗಾಗಲೇ ಖರೀದಿ ಭರಾಟೆ ಜೋರಾಗಿದೆ. ಸೋಮವಾರ ನಾಗರ ಪಂಚಮಿ ಹಿನ್ನೆಲೆ ಹೂ, ಹಣ್ಣು, ಬೇಕಾದ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ 25 ರಂದು ನಾಡಿನೆಲ್ಲೆಡೆ ಹೆಂಗಳೆಯರ ನೆಚ್ಚಿನ ಹಬ್ಬವನ್ನು ಆಚರಿಸಲಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದಂದು ಜಗವ ಕಾಯೋ ಜಗನ್ಮಾತೆ ಲಕ್ಷ್ಮೀಯನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ, ಅಲಂಕಾರ ಮಾಡಿ ಪೂಜಿಸುತ್ತಾರೆ. ಅಷ್ಟ ಸೌಭಾಗ್ಯಗಳ ಒಡತಿಯ ಅಲಂಕಾರವನ್ನು ನೋಡೋದೇ ಚೆಂದ. ಆದರೆ ರಾಜಧಾನಿ ಬೆಂಗಳೂರಿನ ಕೆಲ ಮಂದಿಗೆ ಮೊದಲಿನ ತರ ದೇವಿಯನ್ನು ಅಲಂಕಾರ ಮಾಡಲು ಸಮಯವಿಲ್ಲ. ಬ್ಯೂಸಿ ವರ್ಕ್ ಶೆಡ್ಯೂಲ್ಗೆ ವಗ್ಗಿದ್ದಾರೆ. ಇಂತಹ ಬ್ಯೂಸಿ ಮಹಿಳೆಯರಿಗಾಗಿಯೇ ಬೆಂಗಳೂರು ಮಾರ್ಕೆಟ್ಗೆ ರೆಡಿಮೇಡ್ ವರಮಹಾಲಕ್ಷ್ಮೀಯರು ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: Varamahalakshmi Vrata 2023: ವರಮಹಾಲಕ್ಷ್ಮೀ ಹಬ್ಬದಂದು ಮನೆಯ ಅಲಂಕಾರ ಹೀಗಿರಲಿ
ಹಬ್ಬದಂದು ಮನೆ ಕೆಲಸ, ಊಟ ಹಾಗೂ ಮಕ್ಕಳನ್ನು ಸಿಂಗರಿಸುವ ಕೆಲಸದ ನಡುವೆ ಬಿಡುವು ಸಿಗುವುದಿಲ್ಲ. ಈ ರೆಡಿಮೇಡ್ ಲಕ್ಷ್ಮೀಯರಿಂದ ಸಮಯದ ಉಪಯೋಗವಾಗಲಿದೆ ಎಂದು ಮಹಿಳೆಯರು ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ಈ ರೆಡಿಮೇಡ್ ಲಕ್ಷ್ಮೀಯರ ಬೆಲೆ 500 ರೂಪಾಯಿಯಿಂದ 20 ಸಾವಿರದವರೆಗೆ ಇದ್ದು ವಿವಿಧ ಅಲಂಕಾರಗಳಲ್ಲಿ ಇದೆ. ಈ ರೆಡಿಮೇಡ್ ಲಕ್ಷ್ಮೀಯರಿಗೆ ಸೀರೆ ಹಾಗೂ ಅಲಂಕಾರ ಸಹ ಮಾಡಲಾಗಿರುತ್ತದೆ. ಜೊತೆಗೆ ಲಕ್ಷ್ಮೀ ಕೂರಿಸಲು ಬೇಕಾದ ಲೋಟಸ್, ಲಕ್ಷ್ಮೀಯ ಅಲಂಕಾರಕ್ಕಾಗಿ ಆರ್ಚ್, ನವಿಲುಗಳು, ಆನೆ, ಕಿರೀಟದ ಆರ್ಚ್, ತೋಮಾಲೆ, ನೆಕ್ಲೇಸ್, ಸ್ಟೋನ್ ಲಾಂಗ್ ಹಾರ, ಕಾಸಿನ ಹಾರ, ಹಸ್ತಪಾದ, ಪ್ಲೇನ್ ಗೋಲ್ಡ್ ಹಸ್ತಪಾದಗಳನ್ನು ಸಹ ಲಕ್ಷ್ಮೀಯರಿಗೆ ತೊಡಿಸಲಾಗಿರುತ್ತದೆ. ಫ್ಯಾನ್ಸಿ ಬಾಳೆಗೊನೆ ಹಾಗೂ ಬಾಳೆಕಂಬಗಳು ಸಹ ಇರಲಿದ್ದು, 80 ಪರಸೆಂಟ್ ರಷ್ಟು ಈ ವರ್ಷ ಬೇಡಿಕೆ ಜಾಸ್ತಿಯಾಗಿದ್ಯಂತೆ. ಬೇರೆ ಬೇರೆ ರಾಜ್ಯಗಳಿಂದ ರಫ್ತು ಮಾಡಿಕೊಳ್ಳುತ್ತಿದ್ದು, ರೆಡಿಮೇಡ್ ಲಕ್ಷ್ಮೀಯರ ಬೆಲೆಯು ಈ ಬಾರಿ ದುಬಾರಿಯಾಗಿದೆ.
ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿಗಾ ರೆಡಿಮೇಡ್ ಲಕ್ಷ್ಮೀಯರದೇ ಹವಾ ಜೋರಾಗಿದ್ದು, ಇನ್ನು ಒಂದು ವಾರಗಳ ಕಾಲ ಲಕ್ಷ್ಮೀ ಫುಲ್ ಡಿಮ್ಯಾಂಡ್ ಇದೆ. ಈ ವರ್ಷ ರೆಡಿಮೇಡ್ ಲಕ್ಷ್ಮೀಯರು ವರಮಹಾಲಕ್ಷ್ಮೀಯಂದು ಫುಲ್ ಎಲ್ಲರ ಮನೆಯಲ್ಲಿ ವಿಜೃಂಭಿಸಲಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ