ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಸಿಕ್ತು ಕೋಟಿ ಮೌಲ್ಯದ ಚಿನ್ನ; ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಸ್ಮಗ್ಲರ್ಸ್​ಗಳ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?

| Updated By: Kiran Hanumant Madar

Updated on: Aug 19, 2023 | 7:54 PM

ಏರ್ಪೋರ್ಟ್​ ಅಂದ ಮೇಲೆ ಅಲ್ಲಿ ಪ್ರಯಾಣಿಕರ ಪ್ರಯಾಣದ ಜೊತೆಗೆ ಪ್ರಯಾಣಿಕರ ಕೈನಲ್ಲಿ ತರಹೇವಾರು ಬ್ಯಾಗ್ ಮತ್ತು ಬೆಲ್ಟ್​ಗಳು ಕಾಣಿಸುವುದು ಸಹಜ. ಅದೇ ರೀತಿ ನಿನ್ನೆ(ಆ.18) ಸಹ ವಿದೇಶದಿಂದ ಬಂದ ಪ್ರಯಾಣಿಕನ ಬ್ಯಾಗ್ ಚೆಕ್ ಮಾಡಿದ ಅಧಿಕಾರಿಗಳಿಗೆ ಕೋಟಿ ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಸಿಕ್ತು ಕೋಟಿ ಮೌಲ್ಯದ ಚಿನ್ನ; ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಸ್ಮಗ್ಲರ್ಸ್​ಗಳ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?
ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಸಿಕ್ತು ಕೋಟಿ ಮೌಲ್ಯದ ಚಿನ್ನ
Follow us on

ಬೆಂಗಳೂರು, ಆ.19: ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ (Kempegowda International Airport)ಪ್ರತಿನಿತ್ಯ ಸಾವಿರಾರು ಜನ ಪ್ರಯಾಣಿಕರು ನೂರಾರು ವಿಮಾನಗಳು ಬರುತ್ತವೆ. ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಆತನ ಲಗೇಜ್​ನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಇದೆಲ್ಲ ಗೊತ್ತಿದ್ರು, ಅಧಿಕಾರಿಗಳ ಕಣ್ಣು ತಪ್ಪಿಸಿ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು(Gold) ತೆಗೆದುಕೊಂಡು ಹೋಗಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಹೌದು, ನಿನ್ನೆ(ಆ.18) ಬೆಳಗ್ಗೆ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕನೋರ್ವ ತನ್ನ ಲಗೇಜ್ ಬ್ಯಾಗ್ ಜೊತೆ ಅನುಮಾನಾಸ್ಪದ ರೀತಿಯಲ್ಲಿ ಬರುತ್ತಿದ್ದನ್ನು ಕಂಡ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಬಂಗಾರದ ಸ್ಕ್ರೂ ಮಾಡಿ ಬ್ಯಾಗ್​ಗೆ ಅಳವಡಿಸಿದ್ದ ಆರೋಪಿ

ತಪಾಸಣೆ ವೇಳೆ ಆತನ ಬಳಿ ಏನು ಸಿಕ್ಕಿಲ್ಲ. ಬಳಿಕ ಆತನ ಲಗೇಜ್ ಬ್ಯಾಗ್​ನ್ನು ಸ್ಕ್ಯಾನ್ ಮಾಡಿದಾಗ ಬ್ಯಾಗ್ ಒಳಗಡೆ ಅಡ್ಡಾದಿಡ್ಡಿಯಾಗಿ ಸ್ಕ್ರೂಗಳನ್ನು ಪಿಟ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಸ್ಕ್ರೂಗಳನ್ನು ಬಿಚ್ಚಿ ನೋಡಿದ ಅಧಿಕಾರಿಗಳಿಗೆ ಬಂಗಾರವನ್ನು ಸ್ಕ್ರೂಗಳಾಗಿ ಮಾಡಿ ಅದಕ್ಕೆ ಸಿಲ್ವರ್ ಕೋಟ್ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಎಲ್ಲವನ್ನೂ ಬಿಚ್ಚಿ ನೋಡಿದಾಗ 267 ಗ್ರಾಂ ಚಿನ್ನವನ್ನು ಸ್ಕ್ರೂಗಳಾಗಿ ಮಾರ್ಪಡಿಸಿ ತಂದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಆರೋಪಿಯನ್ನು ಚಿನ್ನ ಸಮೇತ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಹೆದ್ದಾರಿ ಪಕ್ಕದ ಮನೆಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​ ಬಂಧನ; 25 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ವಶ

ಸಿಂಥೇಟಿಕ್ ಬೆಲ್ಟ್​ನಲ್ಲಿ ಹಲವಾರು ಬಂಗಾರದ ಸರಳು

ಲಗೇಜ್ ಬ್ಯಾಗ್​ನಲ್ಲಿ ಸ್ಕ್ರೂಗಳಾಗಿ ಒರ್ವ ಆರೋಪಿ ಬಂಗಾರದ ಸ್ಮಗ್ಲಿಂಗ್ ಮಾಡಿದ್ರೆ, ಮತ್ತಿಬ್ಬರು ಪ್ರಯಾಣಿಕರು ದೇಹಕ್ಕೆ ಧರಿಸಿ ಬಂದ ಸಿಂಥೇಟಿಕ್ ಬೆಲ್ಟ್​ನಲ್ಲಿ ಬಂಗಾರದ ಸರಳುಗಳನ್ನು ಹೊತ್ತು ತಂದಿದ್ದಾರೆ. ಹೌದು, ಸಿಂಗಾಪುರದಿಂದ ಬಂದಿದ್ದ ಇಬ್ಬರು ಪ್ರಯಾಣಿಕರು ತಮ್ಮ ಬೆಲ್ಟ್​ನಲ್ಲಿ 1 ಕೋಟಿ 59 ಲಕ್ಷ ಮೌಲ್ಯದ 2.5 ಕೆಜಿಗೂ ಅಧಿಕ ಚಿನ್ನದ ಸರಗಳನ್ನು ತಂದು ತಗಲಾಕ್ಕೊಂಡಿದ್ದಾರೆ. ಇನ್ನೂ ಇದೇ ರೀತಿ ವಿದೇಶದಿಂದ ಬಂದ್ರೆ, ಅಧಿಕಾರಿಗಳು ತಪಾಸಣೆ ಮಾಡುತ್ತಾರೆಂದು ಕೋಲ್ಕತ್ತಾದಿಂದ ದೇಶಿಯ ವಿಮಾನದಲ್ಲಿ ಬಂದ ಪ್ರಯಾಣಿಕನೋರ್ವ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್​ಗಳನ್ನು ತಂದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಒಟ್ಟಾರೆ ವಿದೇಶದಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತೆ ಎಂದು ಟ್ಯಾಕ್ಸ್ ಕಟ್ಟದೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಸ್ಮಗ್ಲರ್ಸ್ ವಿವಿಧ ಪ್ಲಾನ್​ಗಳೊಂದಿಗೆ ಚಾಫೆ ಕೆಳಗಡೆ ನುಗ್ಗಿದ್ರೆ, ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗಡೆ ನುಗ್ಗಿ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿ ಆಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ