ಚಿನ್ನದ ಕಳ್ಳಸಾಗಣೆಗೆ ಮತ್ತೊಂದು ಐಡಿಯಾ! ಆದರೆ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನಡೆಯದ ಕಳ್ಳಾಟ
ಎಮಿರೇಟ್ಸ್ ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL, Devanahalli) ಬಂದಿದ್ದ ಲಗೇಜ್ ಅದಾಗಿತ್ತು. ಬ್ಯಾಗ್ ನಲ್ಲಿ ಸ್ಕ್ರೂ ರೂಪದಲ್ಲಿದ್ದ ಚಿನ್ನ ಸಾಗಾಣಿಕೆಗೆ ಪ್ರಯಾಣಿಕ ಯತ್ನಿಸಿದ್ದ. ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸ್ರ್ಕೂ ರೂಪದಲ್ಲಿ ಚಿನ್ನ ಇರುವುದು ಸ್ಕಾನಿಂಗ್ ನಿಂದ ಬೆಳಕಿಗೆ ಬಂದಿದೆ.
ದೇವನಹಳ್ಳಿ, ಆಸಗ್ಟ್ 18: ಗೋಲ್ಡ್ ಸ್ಮಗ್ಲಿಂಗ್ಗೆ (Gold Smuggling) ಐಡಿಯಾಗಳು ತರಹೇವಾರಿ. ಅನುದಿನವೂ ವಿನೂತನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಅವರು ಬಿಡಬೇಕಲ್ಲಾ… ಆ ಕಸ್ಟಮ್ಸ್ ಅಧಿಕಾರಿಗಳು. ಅವರ ಮುಂದೆ ಇಂತಹ ಕಳ್ಳಾಟಗಳು ನಡೆಯುವುದಿಲ್ಲ ಎಂಬುದೇ ಸಮಾಧಾನಕರ ಸಂಗತಿ. ತಾಜಾ ಚಿನ್ನದ (Gold) ಕಳ್ಳಸಾಗಣೆ ಪ್ರಯತ್ನದಲ್ಲಿ ಲಗೇಜ್ ಬ್ಯಾಗ್ ಗೆ ಚಿನ್ನದ ಸ್ಕ್ರೂ ಬಿಗಿಸಿ ಸ್ಮಗ್ಲಿಂಗ್ ಗೆ ಯತ್ನಿಸಲಾಗಿದೆ. ಆದರೆ ಪ್ರಾಂಪ್ಟ್ಆಗಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಾಲನ್ನು ಜಪ್ತಿ ಮಾಡಿದ್ದಾರೆ.
ಎಮಿರೇಟ್ಸ್ ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL, Devanahalli) ಬಂದಿದ್ದ ಲಗೇಜ್ ಅದಾಗಿತ್ತು. ಬ್ಯಾಗ್ ನಲ್ಲಿ ಸ್ಕ್ರೂ ರೂಪದಲ್ಲಿದ್ದ ಚಿನ್ನ ಸಾಗಾಣಿಕೆಗೆ ಪ್ರಯಾಣಿಕ ಯತ್ನಿಸಿದ್ದ.
ಇದನ್ನೂ ಓದಿ: ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ
ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸ್ರ್ಕೂ ರೂಪದಲ್ಲಿ ಚಿನ್ನ ಇರುವುದು ಸ್ಕಾನಿಂಗ್ ನಿಂದ ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಗ್ ಜಪ್ತಿ ಮಾಡಿ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಬ್ಯಾಗ್ ಸ್ಕ್ರೂಗಳಲ್ಲಿ 26.7 ಗ್ರಾಮ್ ನಷ್ಟು ಚಿನ್ನವಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ.. ಕೋಲ್ಕತ್ತಾ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ಜಪ್ತಿ!
ಬೆಂಗಳೂರು ಏರ್ಪೋರ್ಟ್ನಲ್ಲಿ 30 ಚಿನ್ನದ ಬಿಸ್ಕೆಟ್ಗಳನ್ನು ಕೆಂಪೇಗೌಡ ಏರ್ಪೋರ್ಟ್ (Bangalore KIAL Airport) ಕಸ್ಟಮ್ಸ್ ಅಧಿಕಾರಿಗಳು ಆಗಸ್ಟ್ 16 ರಂದು ವಶಪಡಿಸಿಕೊಂಡಿದ್ದರು. ವ್ಯಕ್ತಿಯೊಬ್ಬ ಕೋಲ್ಕತ್ತಾದಿಂದ ಅಕ್ರಮವಾಗಿ ಈ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದ. ಒಟ್ಟು 36 ಲಕ್ಷ ರೂಪಾಯಿ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ಗಳನ್ನು (gold biscuit) ಜಫ್ತಿ ಮಾಡಲಾಗಿತ್ತು. ಸದರಿ ಚಿನ್ನದ ಮಾಲಿನೊಂದಿಗೆ ಆಗಮಿಸಿದ್ದ ಪ್ರಯಾಣಿಕ ಕೋಲ್ಕತ್ತಾದಿಂದ ಏರ್ಪೋರ್ಟ್ಗೆ ಬಂದಿಳಿದಿದ್ದ (Kolkata passenger). ಈ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿತ್ತು. ಚಿನ್ನದ ಬಿಸ್ಕೆಟ್ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಈ ಘಟನೆ ನಡೆದಿತ್ತು.
ದೇವನಹಳ್ಳಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ