ಮಲ್ಲಿಕಾರ್ಜುನ ಖರ್ಗೆಯನ್ನ ಗಾಂಧಿ ಪರಿವಾರ ಬೆಳೆಯಲು ಬಿಡುತ್ತಿಲ್ಲ: ಲೆಹರ್ ಸಿಂಗ್ ಗಂಭೀರ ಆರೋಪ

| Updated By: Ayesha Banu

Updated on: Aug 22, 2023 | 2:09 PM

ನೀವು ಗಾಂಧಿ ಪರಿವಾರ ಕಾಯಲು ಇದ್ದವರಲ್ಲ. ಖರ್ಗೆಗೆ ಅನುಭವಕ್ಕೆ ಅವರು ಬೆಲೆ ನೀಡುತ್ತಾ ಇಲ್ಲ. ಒಬ್ಬ ಕನ್ನಡಿಗನಾಗಿ ನನಗೆ ನೋವಾಗಿದೆ‌. ಖರ್ಗೆ ಅವರಿಗೆ ಅಧಿಕಾರ ನಡೆಸಲು ಬಿಡದೇ ಕೇವಲ ನಾಮ್ ಕಾವಸ್ತೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಆಕ್ರೋಶ ಹೊರ ಹಾಕಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯನ್ನ ಗಾಂಧಿ ಪರಿವಾರ ಬೆಳೆಯಲು ಬಿಡುತ್ತಿಲ್ಲ: ಲೆಹರ್ ಸಿಂಗ್ ಗಂಭೀರ ಆರೋಪ
ಲೆಹರ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ
Follow us on

ಬೆಂಗಳೂರು, ಆ.22: ಮಲ್ಲಿಕಾರ್ಜುನ ಖರ್ಗೆಯವರಿಗೆ(Mallikarjun Kharge) ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಗಾಂಧಿ ಪರಿವಾರ ಬಿಡುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್(Lehar Singh Siroya) ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಲೆಹರ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಅವರು ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು. ಖರ್ಗೆ ಸಾಹೇಬರು ಅನುಭವಸ್ಥರು. ಅವರು ಮಾದರಿ ವಿಪಕ್ಷ ನಾಯಕ ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಸ್ವಲ್ಪ ದಿನದಲ್ಲೇ ನಮಗೆ ನಿರಾಶೆ ಆಯಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಕೆಳಗೆ ಕೆಲಸ ಮಾಡುತ್ತಿದ್ದಾರೆ ಎಂದು ಲೆಹರ್ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ.

ಸದ್ಯ ಈಗ ಗಾಂಧಿ ಪರಿವಾರದ ಅಡಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಇವರ ಜೊತೆ ರಾಬರ್ಟ್ ವಾದ್ರಾರನ್ನೂ ಸೇರಿಸಿಕೊಳ್ಳಬಹುದು. ಇಷ್ಟು ಅನುಭವ ಇರುವ ಖರ್ಗೆಯವರಿಗೆ ವೇಣುಗೋಪಾಲ್,‌ ರಾಹುಲ್ ಗಾಂಧಿ ಕಂಟ್ರೋಲ್ ಮಾಡುತ್ತಾರೆ. ಇದನ್ನು ನೋಡಿದಾಗ ಬೇಸರ ಆಗುತ್ತದೆ. ಖರ್ಗೆ ಅವರ ಬಗ್ಗೆ ನಮಗೆ ಗೌರವ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ಬೆಳೆಯುತ್ತಾರೆ ಎನ್ನುವ ಕಾರಣಕ್ಕೆ ಖರ್ಗೆರನ್ನು ಮುಂದೆ ಬಿಟ್ಟಿಲ್ಲ. ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರಂತಹ ನಿನ್ನೆ ಮೊನ್ನೆ ಬಂದ ಹುಡುಗರು ಹೇಳಿದಂತೆ ಖರ್ಗೆ ಕೇಳಬೇಕಾಗಿದೆ. ಖರ್ಗೆ ಮೊದಲು ಗಾಂಧಿ ಕುಟುಂಬದ ನೆರಳಿನಿಂದ ಹೊರಬರಲಿ ಎಂದು ಲೆಹರ್ ಸಿಂಗ್ ಬೇಸರ ಹೊರ ಹಾಕಿದರು.

ಇದನ್ನೂ ಓದಿ: ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರವರಲ್ಲೇ ಮುಚ್ಚಿದ ಇಂದಿರಾ ಕ್ಯಾಂಟೀನ್​ಗಳು

ಖರ್ಗೆ ಅವರಿಗೆ ನಾಮ್ ಕಾವಸ್ತೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ

ನೀವು ಗಾಂಧಿ ಪರಿವಾರ ಕಾಯಲು ಇದ್ದವರಲ್ಲ. ಖರ್ಗೆಗೆ ಅನುಭವಕ್ಕೆ ಅವರು ಬೆಲೆ ನೀಡುತ್ತಾ ಇಲ್ಲ. ಒಬ್ಬ ಕನ್ನಡಿಗನಾಗಿ ನನಗೆ ನೋವಾಗಿದೆ‌. ಖರ್ಗೆ ಅವರಿಗೆ ಅಧಿಕಾರ ನಡೆಸಲು ಬಿಡದೇ ಕೇವಲ ನಾಮ್ ಕಾವಸ್ತೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪೊಲಿಟಕಲ್ ಸೆಕ್ರೆಟರಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲ. ವರ್ಕಿಂಗ್ ಕಮಿಟಿಯಲ್ಲಿ ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರೇ ಕಾರ್ಯಕಾರಿಣಿಯಲ್ಲಿ ಇದ್ದಾರೆ. ಸಂಸತ್ ಭವನ ಉದ್ಘಾಟನೆಗೆ ಖರ್ಗೆಯವರಿಗೂ ಬರಲು ಅವಕಾಶ ಕೊಟ್ಟಿಲ್ಲ. ಮಣಿಪುರ ಗಲಾಟೆ ವಿಚಾರ ಚರ್ಚಿಸಲು ಸರ್ಕಾರ ಸಿದ್ದವಿತ್ತು. ಆದರೆ ವಿನಾಕಾರಣ ಕಲಾಪ ಹಾಳು ಮಾಡಿದರು. ಖರ್ಗೆಯವರಿಗೂ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡದೇ ಗೋಳು ಹೊಯ್ದುಕೊಂಡರು. ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲೂ ಖರ್ಗೆಯವರನ್ನು ಬರದಂತೆ ನೋಡಿಕೊಂಡರು. ಖರ್ಗೆಯವರಿಗೆ ಹೆಚ್ಚು ಪ್ರಚಾರ ಸಿಗಬಾರದು ಅಂತ ಗಾಂಧಿ ಪರಿವಾರ ಹೀಗೆ ಮಾಡುತ್ತಿದೆ. ವಿಪಕ್ಷವಾಗಿ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಅನ್ನು ಓವರ್ ಟೇಕ್ ಮಾಡಿದೆ ಎಂದರು.

ಟಿವಿ9 ಕನ್ನಡ ಡಿಜಿಡಲ್ ಲೈವ್​ಗಾಗಿ ಇಲ್ಲಿ ಕ್ಲಿಕ್ ಮಾಡಿ