ರಾಜ್ಯದಲ್ಲಿ ಸೋನಿಯಗಾಂಧಿ ಶಿಕ್ಷಣ ನೀತಿ ಜಾರಿ ಮಾಡುವುದಕ್ಕೆ ಹೊರಟಿದದ್ದೀರಾ: ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ

| Updated By: ವಿವೇಕ ಬಿರಾದಾರ

Updated on: Aug 22, 2023 | 7:56 PM

ಕಾಂಗ್ರೆಸ್​​​ನವರು ಹೇಳುತ್ತಾರೆ ಎನ್​​ಇಪಿ ಕೆಟ್ಟ ಶಿಕ್ಷಣ ನೀತಿ ಅಂತ. ಹಾಗಾದರೇ ನಿಮ್ಮ ಪ್ರಕಾರ ಉತ್ತಮವಾದ ಶಿಕ್ಷಣದ ನೀತಿ ಯಾವುದು. ಕುಲಪತಿಗಳನ್ನು ಮುಂದಿಟ್ಟುಕೊಂಡು ಎನ್​​ಇಪಿಯನ್ನು ರದ್ದು ಮಾಡಲು ಹೊರಟಿದ್ದಾರೆ. ಹಾಗಾದರೇ ರಾಜ್ಯದಲ್ಲಿ ಸೋನಿಯಗಾಂಧಿ ಶಿಕ್ಷಣ ನೀತಿ ಅಂತ ಮಾಡುವುದಕ್ಕೆ ಹೊರಟಿದದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ರಾಜ್ಯದಲ್ಲಿ ಸೋನಿಯಗಾಂಧಿ ಶಿಕ್ಷಣ ನೀತಿ ಜಾರಿ ಮಾಡುವುದಕ್ಕೆ ಹೊರಟಿದದ್ದೀರಾ: ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಪ್ರತಿಪಕ್ಷ ಬಿಜೆಪಿ (BJP) ಖಂಡನೆ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್​​​ನವರು (Congress) ಹೇಳುತ್ತಾರೆ ಎನ್​​ಇಪಿ ಕೆಟ್ಟ ಶಿಕ್ಷಣ ನೀತಿ ಅಂತ. ಹಾಗಾದರೇ ನಿಮ್ಮ ಪ್ರಕಾರ ಉತ್ತಮವಾದ ಶಿಕ್ಷಣದ ನೀತಿ ಯಾವುದು. ಕುಲಪತಿಗಳನ್ನು ಮುಂದಿಟ್ಟುಕೊಂಡು ಎನ್​​ಇಪಿಯನ್ನು ರದ್ದು ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಸೋನಿಯಗಾಂಧಿ ಶಿಕ್ಷಣ ನೀತಿಯನ್ನ ಜಾರಿ ಮಾಡುವುದಕ್ಕೆ ಹೊರಟಿದದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ಮಾಡಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು‌ ಮಾಡಲು ಸಾಧ್ಯಾವಿಲ್ಲ. ನಿಮ್ಮ ಬಳಿ ರಾಜ್ಯದ ಶಕ್ತಿ ಇರಬಹುದು. ಆದರೆ ಜನ ಶಕ್ತಿ ಒಂದಾದರೇ ಯಾವ ರಾಜ್ಯ ಶಕ್ತಿ ಉಳಿಯುವುದಿಲ್ಲ. ಮಕ್ಕಳಿಗೆ ನಿಮ್ಮ ನೀತಿಯ ಬಗ್ಗೆ ಅರ್ಥ ಆದರೆ ನಿಮ್ಮ ರಾಜ್ಯ ಶಕ್ತಿ ಉಳಿಯೊದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಣ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಅಧಿಕಾರಿ ಶಾಶ್ವಾತವಲ್ಲ. ನೀವು ಮುಂದಿನ ಚುನಾವಣೆಗಾಗಿ ಮಕ್ಕಳ ಶಿಕ್ಷಣದ ವ್ಯವಸ್ಥೆಯ ಜೊತೆ ಆಟ ಆಡಬೇಡಿ. ಸಮಾಜಿಕ ನ್ಯಾಯ ಹೋಗಬೇಕು ಅಂದರೇ ಜಾತಿ ರಾಜಕಾರಣ ಹೋಗಬೇಕು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಉದ್ಯೋಗಗಳು ದೊರೆಯುವಂತಗಬೇಕು. ಚುನಾವಣೆಯನ್ನು ಬಂಡವಾಳ ಮಾಡಿಕೊಂಡು ಶಿಕ್ಷಣವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಎನ್​ಇಪಿಯನ್ನು ತಿರಸ್ಕರಿಸುತ್ತೇವೆ ಎನ್ನುವ ಸಿದ್ದರಾಮಯ್ಯ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವುದನ್ನು ವಿರೋಧಿಸುತ್ತಾರೆಯೇ? ಸಿಟಿ ರವಿ

ಕಾಂಗ್ರೆಸ್ ಆಡಳಿತವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. NEP ರದ್ದು ಮಾಡಿದ್ದಕ್ಕೆ ಆಶ್ಚರ್ಯವಾಗಿಲ್ಲ, ಅವರ ಮನಸ್ಥಿತಿ ಕಂಡು ಆಶ್ವರ್ಯವಾಗುತ್ತಿದೆ. ಸಾಧಕ‌, ಬಾಧಕಗಳನ್ನ ತಿಳಿಯುವುದಕ್ಕೂ ಮೊದಲೇ ಎನ್​ಇಪಿ ರದ್ದು ಮಾಡಲು ಹೊರಟಿದ್ದಾರೆ. ನಿನ್ನೆ ನಡೆದ ಸಿಎಂ ಸಭೆಯಲ್ಲಿ ಸಾಕಷ್ಟು ಜನ ಶಿಕ್ಷಣ ತಜ್ಞರು ಇದ್ದರು. ಆ ತಜ್ಞರಲ್ಲಿ ಒಬ್ಬರೂ ಎನ್​​​ಇಪಿ ರದ್ದತಿ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

ಎನ್​ಇಪಿ ರದ್ದು ಮಾಡುವುದು ಮೂರ್ಖತನ: ಅಶ್ವತ್​ ನಾರಾಯಣ

ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಹಾಗಾಗಿ NEP ಜಾರಿ ಮಾಡಿದ್ದೇವೆ, ಅದರಲ್ಲಿ ಯಾವುದೇ ತೊಡಕಿಲ್ಲ. ಸುದೀರ್ಘ ಚರ್ಚೆ, ಅಧ್ಯಯನ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಸಮಿತಿ ರಚನೆ ಮಾಡಿದ್ದೇವು. ವರದಿ ಬಳಿಕ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಯ್ತು ಎಂದು ಮಾಜಿ ಸಚಿವ ಅಶ್ವತ್​ ನಾರಾಯಣ ಹೇಳಿದರು.

ಎನ್ಇಪಿಯಲ್ಲಿ ಒಂದೇ ಒಂದು ನ್ಯೂನತೆ ಇದ್ದರೆ ತೋರಿಸಿ. ರಾಜ್ಯ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಆಟವಾಡಲು ಹೊರಟಿದೆ. ಮೂರು ವರ್ಷದ ಬಳಿಕ ಎನ್​ಇಪಿ ರದ್ದು ಮಾಡುವುದು ಮೂರ್ಖತನ. ಎನ್​ಇಪಿ ಕುರಿತಾಗಿ ಸಾಕಷ್ಟು ವಿಚಾರಗಳನ್ನು, ವಿವರವಾಗಿ ಹೇಳಿದ್ದಾರೆ. ಕಾಲಕಾಲಕ್ಕೆ ಸೂಕ್ತವಾಗಿ ಉತ್ತಮ ಪ್ರಕ್ರಿಯೆ ಅಳವಡಿಕೊಳ್ಳೊದು ಮುಖ್ಯ. ಯುವ ಜನ ಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಜಾತಿ, ಧರ್ಮ, ನ್ಯೂನತೆಗಳನ್ನು ಸರಿಪಡಿಸಬೇಕು ಎಂದರು.

ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಿಸಲು ನಮ್ಮ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಅದನ್ನು ನಾವು ಮಾಡಿದ್ದೇವೆ, ಅದರಲ್ಲಿ‌ ಯಾವುದೇ ತೊಡಕಿಲ್ಲ. 34 ವರ್ಷಗಳ ನಂತರ ಹಲವಾರು ಪ್ರಕ್ರಿಯೆಗಳು ನಡೆದು ಆರು ವರ್ಷಗಳ ಕಾಲದ ಸುದೀರ್ಘ ಚರ್ಚೆ, ಅಧ್ಯಯನದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಘೋಷಣೆ ಆದ ದಿನ ಬಿಎಸ್​ ಯಡಿಯೂರಪ್ಪ ಅವರು ಕಸ್ತೂರಿ ರಂಗನ್ ಅವರಿಗೆ ವಂದಿಸಿದರು.

ಅದ್ಭುತವಾದ ನಾಡು ಇವರ ಕೈಗೆ ಸಿಕ್ಕಿಹಾಕಿಕೊಂಡಿದೆ. ಜನರು ಅಧಿಕಾರ ಕೊಟ್ಟಿದ್ದಾರೆ, ಅದನ್ನು ಜವಾಬ್ದಾರಿಯಿಂಡ ನಡೆಸಿಕೊಳ್ಳಿ. ಮಕ್ಕಳ ಭವಿಷ್ಯವನ್ನ ಹಾಳು ಮಾಡಬೇಡಿ. ಇಲ್ಲವಾದರೆ ನಾವು ಮುಂದಿನ ದಿನಗಳಲ್ಲಿ ಬೀದಿಗಿಳಿದು ಜಾಗೃತಿ ಆಂದೋಲನ‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ