ಬೆಂಗಳೂರು, ಆಗಸ್ಟ್ 22: ‘ರಂಗಿನ ರಾಟೆ’ ಸಿನಿಮಾದ (Rangina Rate) ನಿರ್ದೇಶಕ ಸಂತೋಷ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಗೂಗಲ್‌ಪೇ, ಫೋನ್ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ (Cheating) ಎಸಗಿದ್ದಾರೆ ಎಂದು ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ. ಸಿನಿಮಾದಲ್ಲಿ (Sandalwood) ಚಾನ್ಸ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ನಿರ್ದೇಶಕ ಸಂತೋಷ್ ಅದನ್ನೇ ನೆಪ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ತಂತ್ರಜ್ಞಾನ ಮುಂದುವರಿದಂತೆ ಕೊಡು ಕೊಳ್ಳುವಿಕೆ ವ್ಯವಹಾರವೂ ಆನ್ಲೈನ್ ಆಗಿಬಿಟ್ಟಿವೆ. ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು, ಜನರನ್ನು ವಂಚಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾಖಲಾದ ಸೈಬರ್ ಪ್ರಕರಣಗಳ ಪೈಕಿ ಶೇ.40 ರಷ್ಟು ಪ್ರಕರಣಗಳು ಕ್ಯೂಆರ್ ಕೋಡ್ಗೆ ಸಂಬಂಧಿಸಿದ್ದಾಗಿವೆ. ಕಳೆದ ವಾರ ವಾಷಿಂಗ್ ಮೆಷಿನ್ ಮಾರಾಟ ಮಾಡಲು ಮುಂದಾಗಿದ್ದ ಪ್ರೊಫೆಸರ್, ಸೈಬರ್ ಚೋರರು ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾವಿರಾರು ರೂ. ಕಳೆದುಕೊಂಡರೆ, ಇತ್ತ ವೀಣೆ ಮಾರಾಟ ಮಾಡಲು ಮುಂದಾಗಿ ಲಿಂಕ್ ಒತ್ತಿದ ಗೃಹಿಣಿ ಕೂಡ ಹಣ ಕಳೆದುಕೊಂಡಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರೊಫೆಸರ್ ಒಬ್ಬರು ವಾಷಿಂಗ್ ಮಷಿನ್ ಅನ್ನು ಆನ್ಲೈನ್ ಮಾರುಕಟ್ಟೆ ಮೂಲಕ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಂತೆ ಒಂದು ಫೋಟೋ ಕೂಡ ಹಾಕಿದ್ದರು. ಆಗಸ್ಟ್ 11 ರಂದು ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ಯಾವುದೇ ಚೌಕಾಸಿ ಮಾಡದೆ ಹೇಳಿದ 60000 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: Digital Personal Data Protection Act: ಸೈಬರ್ ಅಪರಾಧಗಳ ತಡೆಗೆ ಕೇಂದ್ರ ಸರ್ಕಾರದಿಂದ ಹೊಸ ಕಾನೂನು ಜಾರಿ
ಅಬ್ಬಾ.. ನಾನು ಅಂದುಕೊಂಡಿದಷ್ಟು ಹಣ ನೀಡುವ ಗ್ರಾಹಕ ಸಿಕ್ಕಿದ ಎಂದು ಸಂತೋಷಗೊಂಡ ಪ್ರೊಫೆಸರ್ಗೆ ಆ ವ್ಯಕ್ತಿ ತಾನು ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ದಯವಿಟ್ಟು ಅದನ್ನು ಸ್ಕ್ಯಾನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಪ್ರೊಫೆಸರ್, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಪ್ರೊಫೆಸರ್ ಖಾತೆಯಲ್ಲಿದ್ದ 63,000 ರೂ.ಗಳನ್ನು ಆ ವ್ಯಕ್ತಿ ತನ್ನ ಅಕೌಂಟ್ಗೆ ವರ್ಗಾಯಿಸಿಕೊಂಡಿದ್ದಾನೆ.
ಇದೇ ರೀತಿ, ಆನ್ಲೈನ್ ಮಾರುಕಟ್ಟೆಯಲ್ಲಿ ವೀಣೆ ಮಾರಾಟ ಮಾಡಲು ಮುಂದಾಗಿದ್ದ 30 ವರ್ಷದ ಗೃಹಿಣಿಯೊಬ್ಬರು ಸೈಬರ್ ಅಪರಾಧಿಗಳ ವಂಚನೆಗೆ ಸಿಲುಕಿದ್ದರು. ವೀಣೆ ಚಿತ್ರವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದರು. ಅಂದೇ ಒಬ್ಬ ಮಹಿಳೆ ಕರೆ ಮಾಡಿ ಸಂಗೀತ ವಾದ್ಯವನ್ನು ಖರೀದಿಸುತ್ತೇನೆ ಎಂದು ಹೇಳಿದ್ದಳು.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:02 am, Tue, 22 August 23