ಪ್ರಯಾಣಿಕರಿಗೆ ಸಹಿ ಸುದ್ದಿ: ಬೆಂಗಳೂನಿಂದ-ಚೆನ್ನೈಗೆ 4 ಗಂಟೆಯಲ್ಲಿ ಪ್ರಯಾಣಿಸಿ
ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮಿಳುನಾಡು ರಾಜಧಾನಿ ಚೆನ್ನೈಗೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಅರಕ್ಕೋಣಂ ಮತ್ತು ಜೋಲಾರ್‌ಪೇಟ್ಟೈ ನಿಲ್ದಾಣಗಳ ನಡುವಿನ ರೈಲು ವೇಗವನ್ನು ಹೆಚ್ಚಿಸಲು ರೈಲ್ವೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮಿಳುನಾಡು ರಾಜಧಾನಿ ಚೆನ್ನೈಗೆ (Bengaluru – Chennai) ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಅರಕ್ಕೋಣಂ ಮತ್ತು ಜೋಲಾರ್‌ಪೇಟ್ಟೈ ನಿಲ್ದಾಣಗಳ ನಡುವಿನ ರೈಲು ವೇಗವನ್ನು ಹೆಚ್ಚಿಸಲು ರೈಲ್ವೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಇದರಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ನಾಲ್ಕು ಗಂಟೆ ಇಳಿಕೆಯಾಗಲಿದೆ. 144 ಕಿಮೀ ವ್ಯಾಪ್ತಿಯಲ್ಲಿ ರೈಲಿನ ವೇಗವನ್ನು ಗಂಟೆಗೆ 110 ಕಿಲೋಮೀಟರ್ (ಕಿಮೀ) ನಿಂದ 130 ಕಿಮೀಗೆ ಹೆಚ್ಚಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ವೇಗದ ಪರಿಷ್ಕರಣೆಯು ಪ್ರಯಾಣಿಕರಿಗೆ 25 ರಿಂದ 30 ನಿಮಿಷಗಳನ್ನು ಉಳಿಸುವ ನಿರೀಕ್ಷೆಯಿದೆ. ಲಿಂಕ್ ಹಾಫ್‌ಮನ್ ಬುಷ್ (ಎಲ್‌ಹೆಚ್‌ಬಿ) ಕೋಚ್‌ಗಳನ್ನು ಹೊಂದಿರುವ ಒಟ್ಟು 124 ರೈಲುಗಳು ಮುಂದಿನ ವಾರದಿಂದ ಅರಕ್ಕೋಣಂ ಮತ್ತು ಜೋಲಾರ್‌ಪೆಟ್ಟೈ ನಡುವೆ 130 ಕಿಮೀ ವೇಗದಲ್ಲಿ ಸಂಚರಿಸಲಿವೆ. ಐಸಿಎಫ್ ವಿನ್ಯಾಸದ ಕೋಚ್‌ಗಳನ್ನು ಹೊಂದಿರುವ ರೈಲುಗಳು ಸುರಕ್ಷತೆಯ ಕಾರಣಗಳಿಂದ 110 ಕಿಮೀ ವೇಗದಲ್ಲಿ ಚಲಿಸುತ್ತವೆ. ಟ್ರ್ಯಾಕ್ ಮತ್ತು ಸಿಗ್ನಲಿಂಗ್ ಕೆಲಸಗಳು ಪೂರ್ಣಗೊಳ್ಳುವುದಕ್ಕಾಗಿ ಕಾಯಲಾಗುತ್ತಿದ್ದು, ಇದು ಪೂರ್ಣಗೊಂಡ ಕೂಡಲೇ ಈ ವೇಗ ವರ್ಧನೆ ಅನುಷ್ಠಾನಕ್ಕೆ ಬರಲಿದೆ.
ಸದ್ಯ ಬೆಂಗಳೂರು-ಚೆನ್ನೈ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪ್ರಯಾಣವನ್ನು 4 ಗಂಟೆ ಅವಧಿಯಲ್ಲಿ ಪೂರ್ಣಗೊಳಿಸುತ್ತದೆ. ಇನ್ನು ಶತಾಬ್ಧಿ, ಬೃಂದಾವನ್ ಎಕ್ಸ್ ಪ್ರೆಸ್ ರೈಲುಗಳು ಆರು ಗಂಟೆ ಬದಲು 5 ಗಂಟೆ 30 ನಿಮಿಷದ ಪ್ರಯಾಣದ ಅವಧಿಯಲ್ಲಿ ಈ ನಗರಗಳ ನಡುವೆ ಸಂಚರಿಸಲಿವೆ. ಬೆಂಗಳೂರು ಕಡೆಗೆ ಸಂಚರಿಸುವ ಇತರೆ ರೈಲುಗಳ ವೇಗ ವರ್ಧನೆಗೂ ಮುಂದಿನ ದಿನಗಳಲ್ಲಿ ಅನುಮತಿ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sun, 20 August 23