ಪಾವಗಡ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು, ಓರ್ವ ಗಂಭೀರ ಗಾಯ

| Updated By: Ayesha Banu

Updated on: Aug 12, 2023 | 2:27 PM

ಶನಿವಾರವಾದ ಹಿನ್ನೆಲೆ ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಹೊರಟ್ಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.

ಪಾವಗಡ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು, ಓರ್ವ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ
Follow us on

ತುಮಕೂರು, ಆ.12: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು ‌ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವಾಗಿದೆ. ತುಮಕೂರು ಜಿಲ್ಲೆಯ ಪಾವಗಡ(Pavagada) ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಬೊಲೆರೊ ವಾಹನ ಡಿಕ್ಕಿ ಹೊಡೆದಿದ್ದು ಬೈಕ್​ನಲ್ಲಿ ತೆರಳುತ್ತಿದ್ದ ಯುವಕರಿಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಆಂಧ್ರಪ್ರದೇಶದ ರೊದ್ದಂ ತಾಲೂಕಿನ ಚಿಕ್ಕಿಕೊಡಿಪಲ್ಲಿ ಗ್ರಾಮದ ಈಶ್ವರ(16), ಯಶ್ವಂತ್(17) ಮೃತರು.

ಶನಿವಾರವಾದ ಹಿನ್ನೆಲೆ ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಹೊರಟ್ಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ಗೆ ರವಾನಿಸಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ನಮ್ಮೂರ ತಿಂಡಿ ಹೋಟೆಲ್​ನಲ್ಲಿ ಸ್ಟೀಮ್ ಸ್ಫೋಟ, ನಾಲ್ವರಿಗೆ ಗಾಯ

ಬೆಂಗಳೂರಿನ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್​ನಲ್ಲಿ ಸ್ಟೀಮ್ ಸ್ಫೋಟವಾಗಿ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿವೆ. ಇಡ್ಲಿ ಮಾಡಲು ಬಿಸಿ ನೀರು ಇಟ್ಟಿದ್ದ ಬಾಯ್ಲರ್ ಬ್ಲಾಸ್ಟ್ ಆಗಿ ಘಟನೆ ಸಂಭವಿಸಿದ್ದು ಐಶ್ವರ್ಯಾ, ಬಸಿಕ ಕುಮಾರ್, ಕವನ, ಕಾರ್ತಿಕ್ ಗಾಯಗೊಂಡವರು. ನಾಲ್ವರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಟೀಮ್​ ಸ್ಫೋಟದಿಂದ ಅಡುಗೆ ಸಾಮಗ್ರಿ ಚೆಲ್ಲಾಪಿಲ್ಲಿ ಆಗಿದೆ. ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜನ ಕಷ್ಟ ಹೇಳಿಕೊಳ್ಳಲು ಬಂದಾಗ ಸಿಎಂ ಸಿದ್ದರಾಮಯ್ಯ ಒಂದೆರಡು ನಿಮಿಷ ಸ್ಪೇರ್ ಮಾಡಿದರೆ ಆಕಾಶವೇನೂ ಕಳಚಿಬೀಳದು!

ಅಂಗನವಾಡಿ ಪೌಷ್ಟಿಕ ಆಹಾರ ಕಳಪೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದಲ್ಲಿ ಅಂಗನವಾಡಿಗೆ ಸರಬರಾಜಾದ ಪುಡ್ ಪ್ಯಾಕೇಟ್ ನಲ್ಲಿ ಸತ್ತ ಜಿರಳೆಗಳು ಪತ್ತೆಯಾಗಿವೆ. ಗ್ರಾಮದ ಪೂಜಪ್ಪ ಎಂಬುವವರಿಗೆ ನೀಡಿದ್ದ ಪೌಷ್ಟಿಕ ಪುಡ್ ಪ್ಯಾಕೇಟ್ ಓಪನ್ ಮಾಡಿದಾಗ 30 ಕ್ಕೂ ಅಧಿಕ ಜಿರಳೆಗಳು ಪತ್ತೆಯಾಗಿವೆ. ಸತ್ತ ಜಿರಳೆಗಳನ್ನ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ. ಪ್ಯಾಕೇಟ್ ನಲ್ಲಿ ಸತ್ತ ಜಿರಳೆ ಪತ್ತೆ ಹಿನ್ನೆಲೆ ಅಂಗನವಾಡಿ ಮತ್ತು ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ನಟರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದ್ರೆ ಈ ವೇಳೆ ಬೇರೆ ಪ್ಯಾಕೇಟ್ ಸೇರಿದಂತೆ ಯಾವುದರಲ್ಲೂ ಜಿರಳೆಗಳು ಪತ್ತೆಯಾಗಿಲ್ಲ. ಹೀಗಾಗಿ ಜಿರಳೆ ಸಿಕ್ಕ ಪ್ಯಾಕೇಟ್ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ