ಚಂದ್ರಯಾನ-3, ಸಾವು-ನೋವು ಸೇರಿದಂತೆ ರಾಜಕಾರಣದ ಬಗ್ಗೆ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಅವರು ನಾಗರಪಂಚಮಿ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಪ್ರಕೃತಿ, ಮನುಷ್ಯನ ಸಾವು-ನಾವು ಹೆಚ್ಚಳ, ಚಂದ್ರಯಾನ-3 ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಬಗ್ಗೆಯೂ ಸ್ಫೋಟ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಕೋಡಿಶ್ರೀ ಭವಿಷ್ಯದಲ್ಲಿ ಯಾರಿಗೆಲ್ಲ ಅಪಾಯ? ಏನೆಲ್ಲ ಆಗಲಿದೆ ಎನ್ನುವುದು ಇಲ್ಲಿದೆ ನೋಡಿ.

Important Highlight‌
ಚಂದ್ರಯಾನ-3, ಸಾವು-ನೋವು ಸೇರಿದಂತೆ ರಾಜಕಾರಣದ ಬಗ್ಗೆ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ
ಕೋಡಿ‌ ಮಠದ ಸ್ವಾಮೀಜಿ
Follow us
Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on:Aug 20, 2023 | 11:40 AM

ಬೆಳಗಾವಿ, (ಆಗಸ್ಟ್ 20): ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ(kodi mutt swamiji predict) ಅವರು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಶ್ರೀಗಳು, ವಿಷಾನೀಲ ಬೀಸುವ ಪ್ರಸಂಗವೂ ಇದೆ. ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶವಾಗುತ್ತವೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ದಕ್ಷಿಣ ಭಾರತದಲ್ಲಿ ಸಮೃದ್ಧಿಯ ಲಕ್ಷಣಗಳಿವೆ, ಯಾವುದೇ ತೊಂದರೆಯಿಲ್ಲ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯ. ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜಾಗತಿಕ ಮಟ್ಟದಲ್ಲಿ ವಿಷಾನೀಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟ್‌ಗಳ ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಚಂದ್ರಯಾನ-3 ಯಶಸ್ವಿಯಾಗಲಿದೆ ಎಂದ ಕೋಡಿಶ್ರೀ

ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್​​ ಲ್ಯಾಂಡಿಂಗ್​ ಮಾಡಲು ಇಸ್ರೋ ಸಜ್ಜಾಗಿದೆ. ಮೊದಲ ಹಂತ ಡಿ ಬೂಸ್ಟಿಂಗ್​​​​ ಕಾರ್ಯಾಚರಣೆಯೂ ಯಶಸ್ವಿಯಾಗಿತ್ತು. ಈಗ ಎರಡು ಹಂತದ ವೇಗ ತಗ್ಗಿಸುವ ಪ್ರಕ್ರಿಯೆಯೂ ಸಕ್ಸಸ್​ ​ಫುಲ್​​ ಆಗಿದೆ. ಭಾರತೀಯರ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದ್ದು, ಇದರ ಮಧ್ಯೆ ಭವಿಷ್ಯ ನುಡಿದಿರುವ ಕೋಡಿಶ್ರೀ, ಚಂದ್ರಯಾನ-3 ಯಶಸ್ವಿಯಾಗಿ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರಾ? ಕೋಡಿಮಠ ಸ್ವಾಮೀಜಿ ಭವಿಷ್ಯ ಹೀಗಿದೆ

ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಇದು ಪ್ರಕೃತಿ ನಿಯಮ ಎಂದು ತಿಳಿಸಿದ್ದಾರೆ.

ಸಾವು ನೋವು ಹೆಚ್ಚಳವಾಗಲಿದೆ ಎಂದ ಸ್ವಾಮೀಜಿ

ಪ್ರಾಕೃತಿಕ ದೋಷದಿಂದಲೇ ಸಾವು-ನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿದೆ, ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ. ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ತಿನ್ನುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ? ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ‌ ಹೆಚ್ಚಿತ್ತು, ಈಗ ಆಳವಾಗಿ ಬೋರವೆಲ್ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗುತ್ತಿವೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ, ಹೀಗಾಗಿ ಆಪತ್ತು ಹೆಚ್ಚಿವೆ. ಇದೆಲ್ಲದರ ನಿಯಂತ್ರಣಕ್ಕೆ ಭಗವಂತನಿದ್ದಾನೆ, ಆದರೆ ಮನುಷ್ಯ ಈತನನ್ನು ಮರೆತಿದ್ದಾನೆ. ದೈವ, ನಂಬಿಕೆ ಮೇಲೆ ಜೀವನ ಮಾಡಬೇಕು. ಇವುಗಳನ್ನು ಕಳೆದುಕೊಂಡ ಪರಿಣಾಮವೇ ಅನಾಹುತ ಆಗುತ್ತವೆ ಎಂದರು.

ರಾಜ್ಯ ರಾಜಕಾರಣದ ಬಗ್ಗೆ ಕೋಡಿಶ್ರೀ ಭವಿಷ್ಯ

ಇನ್ನು ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ‌ ತೊಂದರೆಯಿಲ್ಲ‌‌. ಪಕ್ಷಾಂತರ ಬಗ್ಗೆಯೂ‌ ಚುನಾವಣೆ ಪೂರ್ವವೇ ಹೇಳಿದ್ದೆ. ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ ಎಂದಿದ್ದಾರೆ.

ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕೋಡಿಶ್ರೀ, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ. ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:38 am, Sun, 20 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು