ಬೆಳಗಾವಿ, ಆ.23: ರಾಜ್ಯದಲ್ಲಿ ಈ ಬಾರಿ ಅಂದುಕೊಳ್ಳುವಷ್ಟು ಮುಂಗಾರು ಮಳೆಯಾಗಿಲ್ಲ. ಇದರಿಂದ ಮಳೆಯ ನೀರನ್ನೇ ನಂಬಿಕೊಂಡಿದ್ದ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಅದಕ್ಕೊಸ್ಕರ ಇದೀಗ ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಹೌದು, ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಹಶಿಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕಳೆದ 20 ವರ್ಷಗಳಿಂದ ಹೋರಾಟ ಮಾಡಿದರೂ ಕಾಲುವೆಗೆ ನೀರು ಬಿಡುತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಇದೀಗ ನೀರಿನ ಕೊರತೆ ಇಥೇಚ್ಚವಾಗಿ ತಲೆದೂರಿದ್ದು, ಕಾಲುವೆಗೆ ನೀರು ಬಿಡುಗಡೆ ಮಾಡದ ಹಿನ್ನೆಲೆ ಹಲವು ಗ್ರಾಮಗಳ ರೈತರಿಗೆ ಸಮಸ್ಯೆ ಎದುರಾಗಿದೆ. ಹೌದು, ಜಿಲ್ಲೆಯ ಕೇರೂರು, ಕೆಂಪಟ್ಟಿ, ನಂದಿಕುರಳಿ, ಹಣಬರಟ್ಟಿ, ಅರಬ್ಯಾನವಾಡಿ, ರೂಪಿನಾಳ, ಕಾಡಾಪುರ, ನನದಿವಾಡಿ ಸೇರಿ ಹಲವು ಗ್ರಾಮಗಳಲ್ಲಿ ಬೆಳೆ ಹಾನಿ ಆತಂಕ ಎದುರಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡ ‘
ಕಾಲುವೆಗೆ ಎಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬೇಕೋ ಅಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ. ರಾಯಬಾಗ ಕ್ಷೇತ್ರದಲ್ಲಿ ಹುಲ್ಯಾಳ ಕೆರೆ ತುಂಬಿಕೊಳ್ಳುತ್ತಾರೆ. ಆದ್ರೆ, ಮುಂದೆ ನೀರು ಬರುತ್ತಿಲ್ಲ.
ಜಿಎಲ್‌ಬಿಸಿ ಕಾಲುವೆಗೆ 500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ರೆ, ಸಮಸ್ಯೆ ಆಗಲ್ಲ. ಎರಡು ದಿನಗಳಲ್ಲಿ ನೀರು ಬಿಡುಗಡೆ ಮಾಡುತ್ತೇವೆಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಎರಡು ದಿನಗಳಲ್ಲಿ ನೀರು ಬಿಡುಗಡೆ ಮಾಡದಿದ್ರೆ ಕೇರೂರು ಕಾಡಾಪುರ ನನದಿವಾಡಿ ಗ್ರಾಮ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ